‘ಇಂದು ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ – ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಂವಿಧಾನಬಾಹಿರ ಕೃತ್ಯ ನಡೆಯುತ್ತಿವೆ, ಆ ಕೃತ್ಯಗಳನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.

ಶನಿವಾರ ನಗರದಲ್ಲಿರುವ ಮೌರ್ಯ ಸರ್ಕಲ್​ ಬಳಿ ಕಾಂಗ್ರೆಸ್​ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಇಂದು ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಆರು ವರ್ಷ ಆಯಿತು. 6 ವರ್ಷದಲ್ಲಿ ಸಂವಿಧಾನಕ್ಕೆ ಎಂದೂ ಗೌರವ ಕೊಟ್ಟಿಲ್ಲ, ಸಂವಿಧಾನ ಉಳಿಸುವ ಕೆಲಸ ನಾವು ಮಾಡಬೇಕಿದೆ ಎಂದು ಮೋದಿ ಸರ್ಕಾರ ಆಡಳಿತ ವಿರುದ್ಧ ಗುಡುಗಿದರು.

ಇನ್ನು ಅನೇಕ ಪ್ರತಿಭಟನೆ ಮಾಡಿದ್ದೇವೆ ಆದರೆ ಮೋದಿ ಸರ್ಕಾರ ಪ್ರತಿಭಟನೆಗೆ ಬೆಲೆ ಕೊಟ್ಟಿಲ್ಲ, ಮೋದಿ, ಅಮಿತ್​ ಶಾ ಜೋಡಿ ದೇಶವನ್ನು ನಾಶ ಮಾಡುತ್ತಿದೆ. ಭಾವನಾತ್ಮಕ ವಿಚಾರ ತಂದು ಜನರನ್ನು ವಂಚಿಸುತ್ತಿದೆ. ಹಿಂದುತ್ವ, ಹಿಂದೂರಾಷ್ಟ್ರ ವಿಚಾರ ಬಿಂಬಿಸುತ್ತಿದೆ. ಜನರನ್ನು ದಾರಿ ತಪ್ಪಿಸಿ, ಮಂಕು ಬೂದಿ ಎರಚುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸದ್ಯ ಕೇಂದ್ರದಲ್ಲಿ ಬಿಜೆಪಿ ಎರಡನೇ ಬಾರಿ ಕೂಡ ಅಧಿಕಾರ ಹಿಡಿದಿದ್ದಾರೆ. ಅಧಿಕಾರವಿದೆ ಎಂದು ಕಾನೂನು ದುರಪಯೋಗ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ವಿರುದ್ಧ ಕಾನೂನು ತಂದಿದ್ದಾರೆ. ಪೌರತ್ವಕ್ಕೆ ತಿದ್ದುಪಡಿ ತಂದಿದ್ದಾರೆ. ಒಂದಕ್ಕೊಂದು ಸಂಬಂಧವಿಲ್ಲದ ಕಾನೂನು ತಂದಿದ್ದಾರೆ ಎಂದು ಸಿದ್ದರಾಮಯ್ಯ ಅವರು ಇತ್ತೀಚೆಗೆ ಕೇಂದ್ರ ತಂದಿರುವ ಕಾನೂನಿನ ಬಗ್ಗೆ ವಿರೋಧ ವ್ಯಕ್ತಪಡಿಸಿದರು.

ಸದ್ಯ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ. ನನ್ನ ಜನ್ಮದಿನಾಂಕ ನನಗೆ ಗೊತ್ತಿಲ್ಲ, ನನ್ನ ಅಪ್ಪ ಅಮ್ಮನದಂತು ಗೊತ್ತೇ ಇಲ್ಲ, ಪ್ರೂವ್ ಮಾಡೋಕೆ ಆಗದಿದ್ದರೆ, ನೀವು ಡಿಟೆಂಶನ್ ಸೆಂಟರ್​ಗೆ (ಬಂಧನ ಕೇಂದ್ರ) ಹೋಗಬೇಕು. ನಿಮಗೆ ಮತದಾನದ ಹಕ್ಕೂ ಸಿಗುವುದಿಲ್ಲ, ಇದನ್ನ ಪ್ರತಿಭಟಿಸಿದರೆ ಕೇಸ್ ಹಾಕ್ತಾರೆ ಎಂದು ಕೇಂದ್ರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Recommended For You

About the Author: user

Leave a Reply

Your email address will not be published. Required fields are marked *