ಹೊನಲು ಬೆಳಕಿನ ಕಬ್ಬಡಿ ಟೂರ್ನಿಯ ಮೊದಲ ಪಂದ್ಯದಲ್ಲಿ ಟಿವಿ5 ಕನ್ನಡಗೆ ಜಯ

ಬೆಂಗಳೂರು ಕ್ರೈಮ್ ರಿಪೋರ್ಟರ್ಸ್ ಮತ್ತು ಬೆಂಗಳೂರು ಪೊಲೀಸರು ಜಂಟಿಯಾಗಿ ಆಯೋಜಿಸಿರುವ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಇಂದು ಚಾಲನೆ ನೀಡಲಾಯಿತು. ನಗರದ 11 ಮಾಧ್ಯಮ ತಂಡಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ನಗರ ಪೊಲೀಸರ ಎಲ್ಲಾ ವಿಭಾಗಗಳ ತಂಡಗಳು ಟೋರ್ನಿಯಲ್ಲಿ ಭಾಗವಹಿಸಿದ್ದರೆ, ಮಹಿಳೆಯರ ಕ್ರೈಮ್ ರಿಪೋರ್ಟರ್ಸ್ ಮತ್ತು ಮಹಿಳಾ ಪೊಲೀಸ್ ತಂಡಗಳು ಭಾಗವಹಿಸಿದ್ದು ಟೋರ್ನಿಗೆ ಕಳೆ ಕಟ್ಟಿತ್ತು. ಇಂದಿನ ಮೊದಲ ಪಂದ್ಯದಲ್ಲಿ ನಮ್ಮ ಟಿವಿ5 ಕನ್ನಡ ತಂಡ ಪೋಟೊ ಗ್ರಾಫರ್ಸ್​​ ತಂಡದ ಮೇಲೆ 50-10 ರ ಅಂತರದಲ್ಲಿ ಭರ್ಜರಿ ವಿಜಯ ಸಾಧಿಸಿತು.

ಎಲ್ಲಾ ತಂಡಗಳ ಮೊದಲ ಸುತ್ತಿನ ಪಂದ್ಯಗಳು ಇಂದು ನಡೆದಿದ್ದು ನಾಳೆ ಸೆಮಿಫೈನಲ್ ಮತ್ತು ಫೈನಲ್ಸ್ ಪಂದ್ಯಗಳು ನಡೆಯಲಿವೆ. ಟಿವಿಫೈವ್ ನ ರಾಮ್ ಪ್ರಸಾದ್ ರವರ ನೇತೃತ್ವದಲ್ಲಿ ಟಿವಿ 5 ತಂಡ ಚನ್ನಾಗಿ ಆಡುತ್ತಿದ್ದು ಇನ್ನೆರಡು ಪಂದ್ಯಗಳನ್ನು ಗೆದ್ದರೆ ಫೈನಲ್ ತಲುಪಲಿದೆ. ಕಬಡ್ಡಿ ಟೋರ್ನಿಯ ಕಾರ್ಯಕ್ರಮವನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಡಿಸಿಪಿಗಳು, ಪ್ರೋ ಕಬಡ್ಡಿ ಆಟಗಾರರು ಸೇರಿ ನಗರದ ಎಲ್ಲಾ ವಿಭಾಗಗಳ ಪೊಲೀಸರು ಆಗಮಿಸಿ ಕಾರ್ಯಕ್ರಮಕ್ಕೆ ಕಳೆ ಕಟ್ಟಿದ್ದವು.

ಇದೇ ವೇಳೆ ಮಾತನಾಡಿದ ನಗರ ಪೊಲೀಸರು ಒತ್ತಡದ ನಡುವೆಯೂ ಕ್ರೈಮ್ ರಿಪೋರ್ಟರ್ಸ್ ಉತ್ತಮವಾಗಿ ಟೋರ್ನಿ ಆಯೋಜಿಸಿದ್ದೀರಿ. ಪೊಲೀಸ್ ಮತ್ತು ರಿಪೋರ್ಟರ್ಸ್ ತಂಡಗಳು ಚನ್ನಾಗಿ ಆಡಿ ಎಂದು ಶುಭ ಕೋರಿದರು. ಇನ್ನು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಮಾತನಾಡಿ ಬಿಡುವಿನ ವೇಳೆ ಕ್ರೀಡೆಗಳನ್ನು ಆಡುವುದರಿಂದ ಒಳ್ಳೆಯದು. ಕ್ರೀಡೆಯಿಂದ ದೇಹ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದರು.

Recommended For You

About the Author: user

Leave a Reply

Your email address will not be published. Required fields are marked *