ಲಂಬಾಣಿ ತಾಂಡ ಇನ್ಮುಂದೆ ಕಂದಾಯ ತಾಂಡಗಳಾಗಿ ಮಾರ್ಪಾಡು – ಸಿಎಂ ಬಿಎಸ್​ವೈ

ದಾವಣಗೆರೆ: ಲಂಬಾಣಿ ತಾಂಡಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಕಂದಾಯ ತಾಂಡಗಳಾಗಿ ಮಾಡಿಯೇ ತಿರುತ್ತೇನೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ.

ಜಿಲ್ಲೆಯ ಸೂರಗೊಂಡನಕೊಪ್ಪದಲ್ಲಿಂದು ಮಾತನಾಡಿದ ಅವರು, ಮುಂದಿನ ಎರಡು ವರ್ಷಗಳಲ್ಲಿ ಲಂಬಾಣಿ ಕಲೆ, ಸಂಸ್ಕೃತಿ, ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಲಂಬಾಣಿ ಕಲೆ ಭಾಷಾಭಿವೃದ್ದಿ ಅಕಾಡೆಮಿ ಸ್ಥಾಪಿಸುತ್ತೇನೆ. ಬಂಜಾರ ಸಮುದಾಯವರನ್ನು ಗುಳೆ ಹೋಗುವುದನ್ನು ತಪ್ಪಿಸಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ.

ಅಲ್ಲದೇ, ಮಾರ್ಚ್​. 5ರಂದು ಬರುವ ಬಜೆಟ್​ನಲ್ಲಿ ಲಂಬಾಣಿ ತಾಂಡ ಅಭಿವೃದ್ದಿಗಾಗೀ 100 ಕೋಟಿ ತೆಗೆದು ಇಡುತ್ತೇನೆ. ಮೂರು ವರ್ಷದ ಅಧಿಕಾರದ ಅವಧಿಯಲ್ಲಿ ಬಂಜಾರ ಸಮಾಜ ಯಾವುದೇ ಸಮಸ್ಯೆ ಇಲ್ಲದೇ, ನೆಮ್ಮದಿ, ಗೌರವ, ಸ್ವಾಭಿಮಾನದಿಂದ ಬದುಕುವ ಎಲ್ಲಾ ವ್ಯವಸ್ಥೆ ಮಾಡುತ್ತೇನೆ ಎಂದು ಸಿಎಂ ಬಿಎಸ್​ವೈ ಅವರು ಲಂಬಾಣಿ ಸಮುದಾಯಕ್ಕೆ ಭರವಸೆ ನೀಡಿದರು.

ಇದೇ ವೇಳೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, 1400 ಕೋಟಿ ವೆಚ್ಚದಲ್ಲಿ ಶಿವಮೊಗ್ಗದ, ಶಿಕಾರಿಪುರ ರಾಣೇಬೆನ್ನೂರು ರೈಲ್ವೆ ಸಂಪರ್ಕ ಯೋಜನೆಗೆ ರೂಪು ರೇಷೆ ಸಿದ್ದವಾಗಿದೆ. ಕೇಂದ್ರದಿಂದ 700 ಕೋಟಿ, ರಾಜ್ಯದಿಂದ 700 ಕೋಟಿ ನೀಡಿದ್ದು ಸರ್ವೇ ಕಾರ್ಯ ಆರಂಭವಾಗಿದೆ. ಈ ರೈಲ್ವೆ ಯೋಜನೆಯಲ್ಲಿ ಸೂರಗೊಂಡನ ಕೊಪ್ಪದಲ್ಲಿ ರೈಲ್ವೆ ನಿಲ್ದಾಣವನ್ನು ಮಾಡುತ್ತೇವೆ. ಮುಖ್ಯಮಂತ್ರಿ ಆದೇಶದ ಪ್ರಕಾರ ಎರಡರಿಂದ ಮೂರು ವರ್ಷದಲ್ಲಿ ರೈಲ್ವೆ ಮಾರ್ಗ ಪೂರ್ಣವಾಗುತ್ತದೆ ಎಂದರು.

Recommended For You

About the Author: user

Leave a Reply

Your email address will not be published. Required fields are marked *