ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಉಗ್ರಪ್ಪ ಸಿಡಿಸಿದ್ರು ಹೊಸ ಬಾಂಬ್​..!?

ಮಂಗಳೂರು: ದೇಶದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ದೇಶದ ಪರಿಸ್ಥಿತಿ ಹೀನಾಯ ಸ್ಥಿತಿ ಹೋಗಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಉಗ್ರಪ್ಪ ಕೇಂದ್ರ ಸರಕಾರದ ವಿರುದ್ಧ ಗುಡುಗಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶದ ಭಸ್ಮಾಸುರರಾಗಿದ್ದಾರೆ. ಮೋದಿ ಕೇವಲ ಆಶ್ವಾಸನೆ ಮಾತ್ರ ಕೊಟ್ಟಿದ್ದಾರೆ ಆದರೆ ಯುವಕರಿಗೆ ಯಾವುದೇ ಉದ್ಯೋಗ ಸೃಷ್ಟಿ ಆಗಿಲ್ಲ, ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರ ಬಂದ ನಂತರ ದೇಶದ ಸಾಲ ಅಧಿಕವಾಗಿದೆ ಎಂದರು.

ಮೋದಿ ಸರಕಾರ ಕೇವಲ ಪಾಕಿಸ್ತಾನದ ಹೆಸರು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ . ಆದರೆ ಮೋದಿ ಮಾತ್ರ ಪಾಕಿಸ್ತಾನದ ಜೊತೆ ಅನ್ಯೂನ್ಯತೆ ಇಂದ ಇದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೇಂದ್ರದ ವಿರುದ್ಧ ಗುಡುಗಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *