ತಾಯಿನ ಪ್ರೀತ್ಸೋ ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರ, ಕಂಪ್ಲೀಟ್ ರಿವ್ಯೂ ರಿಪೋರ್ಟ್​.TV5 ರೇಟಿಂಗ್ 4/5

ಸಾಗುತ ದೂರ ದೂರ ಟೈಟಲ್​ ಟ್ರೈಲರ್, ಸಾಂಗ್ಸ್​ನಿಂದ ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆ ಹುಟ್ಟಾಕಿತ್ತು. ರಾಕಿಂಗ್​ ಸ್ಟಾರ್ ಯಶ್​ ಟ್ರೈಲರ್​ ನೋಡಿ ಮೆಚ್ಚಿಕೊಂಡಿದರು.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಚಿತ್ರದ ಹಾಡೊಂದನ್ನು ನೋಡಿ ಶಹಬ್ಬಾಸ್ ಅಂದಿದರು. ಅಷ್ಟೇ ಅಲ್ಲಾ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಕೂಡ ಚಿತ್ರದ ಬಗ್ಗೆ ಟ್ವೀಟ್​ ಮಾಡಿದರು. ಇದೀಗ ಸಿನಿಮಾ ರಿಲೀಸ್​ ಆಗಿದ್ದು ಸಿನಿಪ್ರಿಯರಿಂದ ಪಾಸಿಟಿವ್​ ರೆಸ್ಪಾನ್ಸ್​ ಪಡೆದುಕೊಂಡಿದೆ.

ಚಿತ್ರ: ಸಾಗುತಾ ದೂರ ದೂರ
ನಿರ್ದೇಶನ: ರವಿತೇಜ
ನಿರ್ಮಾಣ: ಅಮಿತ್​ ಪೂಜಾರಿ​
ಸಂಗೀತ: ಮಣಿಕಾಂತ್​ ಕದ್ರಿ
ಛಾಯಾಗ್ರಹಣ: ಅಭಿಲಾಷ್ ಕಲತಿ
ತಾರಾಗಣ: ಮಹೇಶ್, ಅಪೇಕ್ಷಾ ಪುರೋಹಿತ್, ನವೀನ್​ ಕುಮಾರ್, ಆಶಿಕ್ ಮುಂತಾದವರು.

ಸಾಗುತಾ ದೂರ ದೂರ ಸ್ಟೋರಿಲೈನ್

ಇತ್ತೀಚಿನ ದಿನಗಳಲ್ಲಿ ಆ್ಯಕ್ಷನ್​ , ಲವ್​ ಸ್ಟೋರಿ, ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾಗಳ ನಡುವೆ ಬಹುದಿನಗಳ ನಂತರ ತಾಯಿ ಸೆಂಟಿಮೆಂಟ್​ ಚಿತ್ರವೊಂದು ತೆರೆಕಂಡಿದೆ. ಎಲ್ಲೋ ದೂರಲ್ಲಿರೋ ತಾಯಿಯನ್ನ ನೋಡ್ಬೇಕು. ಅಪ್ಪಿ ಮುದ್ದಾಡ್ಬೇಕು ಅನ್ನೋ ತವಕದಲ್ಲಿರೋ ಪುಟ್ಟ ಹುಡುಗ ಅಶು. ಮತ್ತೊಂದ್​ ಕಡೆ ದೂರದಲ್ಲಿರೋ ತಾಯಿಯನ್ನ ಹುಡಕಿ ಕೊಲ್ಬೇಕು ಅನ್ಕೊಂಡಿರೋ ಮಹೇಶ. ಈ ನಡುವೆ ಮಹೇಶನನ್ನ ಹುಡುಕಿ ಎನ್​ಕೌಂಟರ್ ಮಾಡ್ಬೇಕು ಅಂತಿರೋ ಪೊಲೀಸ್​ ಆಫೀಸರ್ ಸೂರ್ಯ. ಈ ಮೂವರ ನಡುವೆ ಸಾಕಷ್ಟು ಪಾತ್ರಗಳು ಬಂದುಹೋಗುತ್ತೆ. ಪುಟ್ಟ ಹುಡುಗ ತಾಯಿಯನ್ನ ಹುಡುಕಿಕೊಂಡು ಸಾಗ್ತಾ ಇರುವಾಗ ಈ ಜರ್ನಿಯಲ್ಲಿ ಏನೆಲ್ಲಾ ಆಗುತ್ತೆ..? ಕೊನೆಗೆ ಆತನಿಗೆ ತಾಯಿ ಸಿಗ್ತಾಳಾ ಇಲ್ವಾ? ಅನ್ನೋದೇ ಸಾಗುತ ದೂರ ದೂರ ಚಿತ್ರದ ಸ್ಟೋರಿಲೈನ್.

ಸಾಗುತಾ ದೂರ ದೂರ ಆರ್ಟಿಸ್ಟ್​ ಪರ್ಫಾರ್ಮೆನ್ಸ್​

ಚಿತ್ರದಲ್ಲಿ ಮೆಂಟಲಿ ಡಿಸ್ಟರ್ಬ್​ಡ್ ಮಹೇಶನ ಪಾತ್ರದಲ್ಲಿ ಮಿಂಚಿರೋ ನಟ ಮಹೇಶ್​ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿನಿಮಾದುದ್ದಕ್ಕೂ ಈ ಪಾತ್ರ ಸಿನಿಪ್ರಿಯರನ್ನ ಒಮ್ಮೆ ನಗಿಸಿದ್ರೆ, ಮತ್ತೊಮ್ಮೆ ಅಳಿಸುತ್ತೆ. ಮಹೇಶ್​ ಅಭಿನಯ ಅದ್ಭುತವಾಗಿದೆ.

ಚಿತ್ರದಲ್ಲಿ ಸ್ಕೂಲ್​ ಹುಡುಗನ ಪಾತ್ರದಲ್ಲಿ ಬಾಲನಟ ಆಶಿಕ್​ ಅಚ್ಚುಕಟ್ಟಾಗಿ, ಪಾತ್ರಕ್ಕೆ ತಕ್ಕಂತೆ ಪ್ರಬುದ್ಧವಾಗಿ ನಟಿಸಿದ್ದು, ಖಡಕ್ ಪೊಲೀಸ್​ ಆಫೀಸರ್ ಪಾತ್ರದಲ್ಲಿ ನಟ ನವೀನ್​ ಕುಮಾರ್​ ಕೂಡ ಸಿನಿಪ್ರಿಯರ ಗಮನ ಸೆಳೀತಾರೆ.ಇನ್ನು ಮುಗ್ದ ಹುಡುಗಿಯಾಗಿ ಮಂಗಳೂರು ಭಾಷೆಯಲ್ಲಿ ಅಪೇಕ್ಷಾ ಪುರೋಹಿತ್, ಜಾನ್ಹವಿ ಜ್ಯೋತಿ ಹಾಗೂ ಸಾಕಷ್ಟು ಪಾತ್ರಗಳು ನೆನಪಿನಲ್ಲಿ ಉಳಿಯುವಂತಿದೆ.

ಸಾಗುತಾ ದೂರ ದೂರ ಮೈನಸ್ ಪಾಯಿಂಟ್ಸ್

ಸಿನಿಮಾ ಚಿಕ್ಕದಾಗಿ, ಚೊಕ್ಕಾದಾದ ಕಥೆ ಇದ್ದು, ಎಲ್ಲಾ ವಿಭಾಗದಲ್ಲೂ ಚಿತ್ರತಂಡ ಸೈ ಅನ್ನಿಸಿಕೊಂಡಿದೆ..ಆದರೆ ಈ ಸಿನಿಮಾ ದೆ ಇಷ್ಟು ತಡ ಮಾಡದೇ ಇನ್ನು ಹಿಂದೆಯೇ ತೆರೆಕಂಡಿ, ಮತ್ತಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡ್ತಿತ್ತು ಅನ್ನೋದು ನೋಡುಗರ ಅಭಿಪ್ರಾಯ.

TV5 ರೇಟಿಂಗ್ 4/5

ಫೈನಲ್​ ಸ್ಟೇಟ್​ಮೆಂಟ್​

ಸಾಗುತಾ ದೂರ ದೂರ . ತಾಯಿಯನ್ನ ಪ್ರೀತಿಸೋ ಪ್ರತಿಯೊಬ್ಬರಿಗೂ ಈ ಸಿನಿಮಾ 100 ಪರ್ಸೆಂಟ್ ಕನೆಕ್ಟ್​ ಆಗುತ್ತೆ.ಯಾವುದೇ ವಿಚಾರದಲ್ಲೂ ಸಿನಿಮಾವನ್ನ ತೆಗೆದು ಹಾಕುವಂತಿಲ್ಲ. ನಗು- ಅಳು ಎರಡು ಈ ಸಿನಿಮಾದಲ್ಲಿದೆ. ಫ್ಯಾಮಿಲಿ ಸಮೇತ ಕುಳಿತು ನೋಡೋ ಸಿನಿಮಾ ಇದಾಗಿದ್ದು, ಕ್ಲೈಮಾಕ್ಸ್​ನಲ್ಲಿ ನೋಡುಗನ ಕಣ್ಣಂಚಲ್ಲಿ ಹನಿ ನೀರು ತರಿಸೋದಂತೂ ಗ್ಯಾರೆಂಟಿ.

Recommended For You

About the Author: user

Leave a Reply

Your email address will not be published. Required fields are marked *