ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಮರ ಸಾರಬೇಕಾಗಿದೆ – ಕೆ. ಎಚ್ ಮುನಿಯಪ್ಪ

ಕೋಲಾರ:  ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸ್ವಾತಂತ್ರ್ಯ ಸಮರದ ರೀತಿಯಲ್ಲಿ ಹೋರಾಡಬೇಕಾಗಿದೆ ಎಂದು ಮಾಜಿ ಸಂಸದ ಕೆ. ಎಚ್ ಮುನಿಯಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಬಿಜೆಪಿ ವಿರುದ್ದ ಮಾತನಾಡಿದ ಕೆ. ಎಚ್ ಮುನಿಯಪ್ಪ ಬಿಜೆಪಿ ಸರ್ಕಾರ ಸ್ವತಂತ್ರ ಪೂರ್ವದಿಂದ ಹೋರಾಟ ನಡೆಸಿಕೊಂಡು ಬಂದವರಿಗೆ ವಂಚನೆ ಮಾಡುತ್ತಿದೆ. ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದವರನ್ನು ವಿಂಗಡಣೆ ಮಾಡಿ ದೇಶವನ್ನು ಆಳುತ್ತಿದ್ದಾರೆ ಹಾಗೂ ಧರ್ಮಗಳನ್ನು ವಿಂಗಡಣೆ ಮಾಡಿದ್ದರಿಂದ ದೇಶ ಅಲ್ಲೋಲ ಕಲ್ಲೋಲವಾಗಿದ್ದು ಮತ್ತೆ ಗಾಂಧೀಜಿ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿದ ರೀತಿಯಲ್ಲಿ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಮರ ಸಾರಬೇಕಾಗಿದೆ ಎಂದರು.

ಬಿಜೆಪಿ ಪಕ್ಷದ ನಾಯಕನ ಆಯ್ಕೆ ದಿನ ಮೋದಿ ಸಂವಿಧಾನಕ್ಕೆ ನಮಸ್ಕರಿಸಿ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ ಆದರೆ ಸಂವಿಧಾನದ ವಿರುದ್ಧ ಕೆಲಸ ಮಾಡುತ್ತಾರೆ ಮೋದಿಯ ಈ ನಡೆ ನನಗೆ ಅರ್ಥವಾಗುತ್ತಿಲ್ಲ ಸಂವಿಧಾನ ಬದಲಾವಣೆಗೆ ಬಿಜೆಪಿ ಮುಂದಾದರೆ ಕೇಂದ್ರದ ವಿರುದ್ದ ಉಗ್ರ ಹೋರಾಡ ನಡೆಸಲಾಗುವುದು ಎಂದು ಕೋಲಾರದಲ್ಲಿ ಮಾಜಿ ಕೇಂದ್ರ ಸಚಿವ ಕೆ. ಎಚ್ ಮುನಿಯಪ್ಪ ವಾಗ್ದಾಳಿ ನಡೆಸಿದ್ದಾರೆ.

 

Recommended For You

About the Author: user

Leave a Reply

Your email address will not be published. Required fields are marked *