ಪ್ರಧಾನಿ ಮೋದಿ ಆಧುನಿಕ ಭಸ್ಮಾಸುರ – ವಿ.ಎಸ್ ಉಗ್ರಪ್ಪ

ಮಂಗಳೂರು: ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ದೇಶದ ರಾಜಕಾರಣ ಹೀನಾಯ ಸ್ಥಿತಿ ತಲುಪಿದೆ ಎಂದು ಮಾಜಿ ಸಂಸದ ವಿ.ಎಸ್​ ಉಗ್ರಪ್ಪ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವುರ, ಪ್ರಧಾನಿ ಮೋದಿ ಆಧುನಿಕ ಭಸ್ಮಾಸುರರಾಗಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ 53.11 ಲಕ್ಷ ಕೋಟಿ ಸಾಲ ಇತ್ತು. 2019 ಸೆಪ್ಟೆಂಬರ್ ತಿಂಗಳಿನ ವರದಿಯ ಪ್ರಕಾರ 91.01ಲಕ್ಷ ಕೋಟಿ ಸಾಲ ಇದೆ ಎಂದು ಉಗ್ರಪ್ಪ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಶ್ವದಲ್ಲಿ ಹಸಿವಿನಿಂದ ಬಳಲುತ್ತಿರುವ ಪಟ್ಟಿಯಲ್ಲಿ ಭಾರತ 103 ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯರ ಅನ್ನ ಭಾಗ್ಯವಲ್ಲದಿದ್ರೆ 110 ಸ್ಥಾನಕ್ಕೇರುತಿತ್ತು. ಬಿಜೆಪಿ ಅವರು ಮಾತನಾಡಿದ್ರೆ ಕಾಂಗ್ರೆಸ್​ ಪಕ್ಷ ಪಾಕಿಸ್ಥಾನದ ಜೊತೆ ಸಂಬಂಧ ಇದೆ ದೂರುತ್ತಿದೆ. ಪಾಕ್ ಜೊತೆ ಬಿಜೆಪಿ ನಡೆಸಿದ ಚೆಲ್ಲಾಟದಷ್ಟು ಯಾರೂ ಆಡಿಲ್ಲ ಎಂದರು.

ಅಂತೆಯೇ ಮಾತನಾಡಿ, ನರೇಂದ್ರ ಮೋದಿ ಅವರು ಬಿರಿಯಾನಿ ತಿನ್ನಲು ಪಾಕಿಸ್ತಾನದ ಲಾಹೋರ್ ಗೆ ಹೋಗಿದ್ದಾರೆ. ಪಾಕ್ ನ ಪ್ರಧಾನಿಯ ಹೆಂಡತಿ ಮತ್ತು ತಾಯಿಗೆ ಸೀರೆ ಕೊಟ್ಟಿದ್ದಾರೆ. ಪಾಕ್​ಗೆ ಮಾವಿನ ಹಣ್ಣು ರಪ್ತು ವಿನಿಮಯ ಮಾಡಿದ್ದಾರೆ ಎಂದು ಕಾಂಗ್ರೆಸ್​ ನಾಯಕ ವಿ.ಎಸ್​ ಉಗ್ರಪ್ಪ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Recommended For You

About the Author: user

Leave a Reply

Your email address will not be published. Required fields are marked *