ಸಾಮಾಜಿಕ ಜಾಲತಾಣದಲ್ಲಿ ಎಂ.ಎಸ್.ಧೋನಿ ಕ್ಲಿಕ್​ ಮಾಡಿದ ಫೋಟೋ ವೈರಲ್​​

ನವದೆಹಲಿ: ಕೆಲವೇ ಕೆಲವು ದಿನಗಳಲ್ಲಿ ಐಪಿಎಲ್ ಟೂರ್ನಿ ಮೂಲಕ ಕ್ರಿಕೆಟ್‍ಗೆ ಲೋಕಕ್ಕೆ ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್ ಧೋನಿ ಅವರು ಇತ್ತೀಚೆಗೆ ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅಲ್ಲಿರುವ ಪ್ರಾಣಿಗಳ ಪೋಟೋ ಸೆರೆಹಿಡಿದು ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ ಕೊಟ್ಟಿದ್ದಾರೆ.

 

View this post on Instagram

 

When u spot the tiger on ur own and he obliges u with just enough time to click a few pics.Visit to kanha was outstanding

A post shared by M S Dhoni (@mahi7781) on

ಎಂ.ಎಸ್.ಧೋನಿ ಮತ್ತು ಪತ್ನಿ ಸಾಕ್ಷಿ ಧೋನಿ ಜನವರಿ ತಿಂಗಳು ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ.  ಧೋನಿ ಅವರು ರಾಷ್ಟ್ರೀಯ ಉದ್ಯಾನವನದ ಭೇಟಿ ಅತ್ಯುತ್ತಮವಾಗಿತ್ತು ಎಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ ಹುಲಿ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

‘ಹುಲಿಯೊಂದನ್ನು ಕಣ್ಮುಂದೆ ಬಂದಾಗ, ಅದು ಫೋಟೋ ತೆಗೆದುಕೊಳ್ಳುವ ವರೆಗೂ ಟೈಂ ಕೊಟ್ಟರೇ ಖುಷಿಯಾಗುತ್ತದೆ. ಕನ್ಹಾ ಭೇಟಿ ಅತ್ಯುತ್ತಮವಾಗಿತ್ತು ಎಂದು ಎಂಎಸ್​ಡಿ ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳೊಬ್ಬರು ಕೂಲ್​ ಕ್ಯಾಪ್ಟನ್ ಅವರನ್ನು ಹುಲಿ ಎಂದಿದ್ದಾರೆ.

ಸಾಮಾನ್ಯವಾಗಿ, ಧೋನಿ ಅವರು, ತಮ್ಮ ಇನ್‍ಸ್ಟಾಗ್ರಾಮ್​ನಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ ಜೊತೆಗೆ ಫೋಟೋಗಳನ್ನು ಶೇರ್ ಮಾಡುವುದಿಲ್ಲ ಆದರೆ ಅವರು ಪೋಸ್ಟ್ ಮಾಡಿದ ಫೋಟೋ ಅಥವಾ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತವೆ. ಧೋನಿ ಅವರು ಕೊನೆಯದಾಗಿ ಇನ್‍ಸ್ಟಾಗ್ರಾಮ್​ನಲ್ಲಿ ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಆರ್.ಪಿ.ಸಿಂಗ್ ಹಾಗೂ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರೊಂದಿಗೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದ ವೀಡಿಯೋ ಹಾಗೂ ಫೋಟೋ ಹಂಚಿಕೊಂಡಿದ್ದರು.

2019ರ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‍ನಿಂದ ವಿರಾಮ ತೆಗೆದುಕೊಂಡ ಎಂ.ಎಸ್.ಧೋನಿ ಅವರು, ಮುಂದಿನ ತಿಂಗಳ ನಡೆಯಲಿರುವ ಐಪಿಎಲ್ ಮೂಲಕ ಕ್ರಿಕೆಟ್‍ ಅಂಗಳಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಮಾರ್ಚ್ 29ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಎಸ್​ಡಿ ಅವರು ಮುನ್ನಡೆಸಲಿದ್ದಾರೆ.

 

Recommended For You

About the Author: user

Leave a Reply

Your email address will not be published. Required fields are marked *