ಚೋಟಾ ಮುಂಬೈಯಲ್ಲಿ ಪಾಕಿಸ್ತಾನ ಜಿಂದಾಬಾದ್​.!

ಹುಬ್ಬಳ್ಳಿ: ನಗರದ ಪ್ರತಿಷ್ಟಿತ ಕೆಎಲ್​ಇ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇನ್ನು ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿಕೆ ನೀಡಿದ ವಿದ್ಯಾರ್ಥಿಗಳು ಜಮ್ಮು ಕಾಶ್ಮೀರ ಮೂಲದವರಾಗಿದ್ದು, ಅಮೀರ್, ಬಾಸೀತ್, ತಾಲೀಬ್ ಎಂದು ತಿಳಿದು ಬಂದಿದೆ.

ಈ ಮೂವರು ವಿದ್ಯಾರ್ಥಿಗಳು ಸರ್ಕಾರಿ ಕೋಟಾದ ಅಡಿಯಲ್ಲಿ ಕೆಎಲ್​ಇ ಇಂಜಿನಿಯರಿಂಗ್​ಗೆ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡಿದ್ದರು. ಈ ವಿದ್ಯಾರ್ಥಿಗಳು ಸಿವಿಲ್​ ವಿಭಾಗದಲ್ಲಿ ಓದುತ್ತಿದ್ದರು.

ಸ್ಥಳಕ್ಕೆ ಪೋಲಿಸ್​ ಅಧಿಕಾರಿಗಳ ಭೇಟಿ ನೀಡಿ ವಿದ್ಯಾರ್ಥಿಗಳನ್ನ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ವಿದ್ಯಾರ್ಥಿಗಳ ಘೋಷಣೆಯನ್ನ ಖಂಡಿಸಿ ಬಜರಂಗದಳ ಹಾಗೂ ವಿವಿಧ ಸಂಘಟನೆಗಳು ಈ ಕೂಡಲೇ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹ ಮಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *