ಬಹುರೂಪಿ ನಾಟಕೋತ್ಸವದಲ್ಲಿ ಸಿಎಂ ಆಗೋ ಆಸೆ ವ್ಯಕ್ತಪಡಿಸಿದ ಸಿ.ಟಿ.ರವಿ…?!

ಪ್ರತಿಷ್ಠಿತ ಮೈಸೂರು ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಇಂದಿನಿಂದ ಚಾಲನೆ ಸಿಕ್ಕಿದ್ದು, ಭಿನ್ನ ವಿಭಿನ್ನವಾಗಿ 6 ದಿನಗಳ ಬಹುರೂಪಿ ಉತ್ಸವಕ್ಕೆ ಚಾಲನೆ ಸಿಕ್ಕಿದೆ‌. ಗಾಂಧಿ ಪಥ ಪರಿಕಲ್ಪನೆಯೊಂದಿಗೆ ಈ ಬಾರಿ ಬಹುರೂಪಿಯಲ್ಲಿ ವಿವಿಧ ಕಾರ್ಯಕ್ರಮಗಳ ಜೊತೆ ರಂಗಾಯಣದ ಆವರಣ ರಂಗಾಸಕ್ತರನ್ನ ತನ್ನತ್ತ ಕೈ ಬಿಸಿ ಕರೆಯುತ್ತಿದೆ.

ಬಹುರೂಪಿ ಮೈಸೂರಿನ ರಂಗಾಯಣ ನಡೆಸುವ ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮ. ಪ್ರತಿ ವರ್ಷ ಮೊದಲ ತಿಂಗಳು ಅಥವಾ ಎರಡನೇ ತಿಂಗಳಲ್ಲಿ ಆರಂಭವಾಗುವ ಬಹುರೂಪಿ ನಾಟಕೋತ್ಸಕ್ಕೆ ತನ್ನದೇ ಆದ ವಿಭಿನ್ನತೆಗಳ ಖ್ಯಾತಿ ಇದೆ. 2020ರ ರಾಷ್ಟ್ರೀಯ ನಾಟಕೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು. ರಂಗಾಯಣದ ಆವರಣದಲ್ಲಿ ಕಲೆ, ಸಂಸ್ಕೃತಿ, ದೇಶಿಯತೆಯಿಂದ ಕೂಡಿದ ವಾತವರಣದಲ್ಲಿ ಈ ವರ್ಷದ ಬಹುರೂಪಿಗೆ ಚಾಲನೆ ಸಿಕ್ಕಿದೆ. ಹಿರಿಯ ನಟ ಅನಂತ್ ನಾಗ್ ಈ ವರ್ಷದ ಬಹುರೂಪಿಯನ್ನ ಉದ್ಘಾಟಿಸಿದರು.

ಮಹಾತ್ಮ ಗಾಂಧಿಯ 150ನೇ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಈ ಬಾರಿ ಗಾಂಧಿ ಪಥ ಎಂಬ ಹೆಸರಿನಲ್ಲಿ ಈ ಬಾರಿಯ ಬಹುರೂಪಿ ಪ್ರಾರಂಭವಾಗಿದೆ. ಸದ್ಯ ರಂಗಾಯಣ ಆವರಣ ಗಾಂಧಿ‌ಮಯವಾಗಿದೆ. ಕ್ಯಾಸೆಟ್ ಟೇಪ್‌ನಲ್ಲಿ ಮೂಡಿರುವ ಗಾಂಧಿ ಚಿತ್ರ, ಹಾಗೂ ಚರಕದ ಪ್ರಾತ್ಯಕ್ಷಿಯ ಜೊತೆಗೆ ನಾಟಕಕ್ಕೆ ಚಾಲನೆ ಸಿಕ್ಕಿದೆ. ಇನ್ನು ನಾಟಕೋತ್ಸವಕ್ಕೆ ಚಾಲನೆ‌ ಸಿಕ್ಕ ಬಳಿಕ ನಟ ಅನಂತ್ ನಾಗ್ ಭಾಷಣದ ವೇಳೆ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದ್ರು.

ಇನ್ನು ಬಹುರೂಪಿ ವೇದಿಕೆಯಲ್ಲಿ ಸಚಿವ ಸಿ.ಟಿ.ರವಿ ಸಿಎಂ ಆಗುವ ಆಸೆಯನ್ನ ಹಾಸ್ಯಮಯವಾಗಿ ಹೇಳಿದ್ರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಚಂದ್ರು ಅವರನ್ನ ಕೀಟಲೆ ಮಾಡುತ್ತ ಸಿಎಂ ಆಸೆ ವ್ಯಕ್ತಪಡಿಸಿದ ಸಿಟಿ ರವಿ, ಮುಖ್ಯಮಂತ್ರಿ ಚಂದ್ರು ಅವರು ಶಾಶ್ವತ ಮುಖ್ಯಮಂತ್ರಿಗಳಾಗಿದ್ದಾರೆ. ನಮಗೂ ಶಾಶ್ವತವಾಗಿ ಮಾಜಿ ಮುಖ್ಯಮಂತ್ರಿ ಎಂದು ಕರೆಯುವ ಹಾಗೇ ಮಾಡಿ. ನೀವಂತು ಶಾಶ್ವತ ಸಿಎಂ ಆಗಿದ್ದಿರಿ.? ನನಗೂ ಮಾಜಿ ಅನ್ನಿಸಿಕೊಳ್ಳೋ ಅವಕಾಶ ನೀಡಿ ಅಂತ ಮುಖ್ಯಮಂತ್ರಿ ಚಂದ್ರುಗೆ ಮನವಿ ಮಾಡುತ್ತ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ರು. ಇತ್ತ ಸಿಟಿ ರವಿ ಸಿಎಂ ಆಗೋ ಆಸೆಗೆ ಸಂಸದ ಪ್ರತಾಪ್ ಸಿಂಹ ಶುಭ ಹಾರೈಸಿದ್ರು.

ಒಟ್ಟಾರೆ ಭಿನ್ನ ವಿಭಿನ್ನತೆಗೆ ಹೆಸರಾಗಿರುವ ಬಹುರೂಪಿಗೆ ಇಂದಿನಿಂದ ಚಾಲನೆ ಸಿಕ್ಕಿದ್ದು, ಇನ್ನಾರು ದಿನಗಳ ಕಾಲ ರಂಗಾಯಣ ರಂಗಾಸಕ್ತರ ನೆಚ್ಚಿನ ತಾಣವಾಗಲಿದೆ. ಸೋ ರಂಗಾಯಣಕ್ಕೆ ನೀವು ಬನ್ನಿ ನಿಮ್ಮವರನ್ನ ಕರೆತಂದು ನಾಡಕಗಳನ್ನ ಏಂಜಾಯ್ ಮಾಡಿ.

Recommended For You

About the Author: user

Leave a Reply

Your email address will not be published. Required fields are marked *