‘ಜೆಡಿಎಸ್‌ನವರೇ ಈ ರೀತಿ ಗೊಂದಲಗಳನ್ನ ಹುಟ್ಟುಹಾಕುತ್ತಿದ್ದಾರೆ’

ಬೆಂಗಳೂರು: ತಮಗೆ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ಇದೆ ಎಂಬ ಬಗ್ಗೆ ಡಾಲರ್ಸ್ ಕಾಲೋನಿ ನಿವಾಸದಲ್ಲಿ ನೂತನ ಸಚಿವ ನಾರಾಯಣಗೌಡ ಪ್ರತಿಕ್ರಿಯೆ ನೀಡಿದ್ದು, ಖಾತೆ ಹಂಚಿಕೆ ಖುಷಿ ತಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಯಾರು ಹೇಳಿದ್ದು, ಯಾರಿಗೆ ಹೇಳಿಕೆ ಕೊಟ್ಟದ್ದು ..? ಮುಖ್ಯಮಂತ್ರಿ ಕೊಟ್ಟ ಖಾತೆಯನ್ನ ಸಂತೋಷದಿಂದ ತಕೊಂಡಿದ್ದೇನೆ. ಮೂರು ಮೂರು ಖಾತೆ ಕೊಟ್ಟಿದ್ದಾರೆ . ಡಿಪಾರ್ಟ್ಮೆಂಟನ್ನ ಉನ್ನತ ಸ್ಥಾನಕ್ಕೆ ತಕೊಂಡ್ ಹೋಗ್ಬೇಕು ಅಂತಿದ್ದೇನೆ. ಯಾರಿದನ್ನ ಹುಟ್ಟು ಹಾಕಿದ್ದಾರೆ ಅಂತ ಗೊತ್ತಾಗುತ್ತಿಲ್ಲ . ಹಗಲು ರಾತ್ರಿ ದುಡಿದು ಹೆಸರು ಮಾಡುವ ಆಸೆ ಇದೆ ಎಂದಿದ್ದಾರೆ.

ಒಳ್ಳೆಯ ಖಾತೆ ಕೊಟ್ಟಿದ್ದಾರೆ ನಂಗೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ರೀತಿಯ ಗೊಂದಲ ಯಾರು ಹುಟ್ಟು ಹಾಕ್ತಿದ್ದಾರೆ ಗೊತ್ತಿಲ್ಲ. ಈ ರೀತಿಯ ಗೊಂದಲ ಜೆಡಿಎಸ್‌ನವರೇ ಹುಟ್ಟು ಹಾಕ್ತಾರೆ. ಯಾರು ಈ ರೀತಿ ಗೊಂದಲ ಹುಟ್ಟು ಹಾಕ್ತಾರೆ ಅಂಥವರನ್ನ ನನ್ನ ಬಳಿ ಬರಲಿ ಬಿಡಿಸಿ ಬಿಡಿಸಿ ಹೇಳ್ತೀನಿ. ಇದು ಅವರದ್ದೇ ಕೆಲಸ ಅಂತ ಜೆಡಿಎಸ್ ಮೇಲೆ ನಾರಾಯಣಗೌಡ ಆರೋಪ ಮಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *