ತ್ಯಾಜ್ಯ ತಪಾಸಣೆ ವೇಳೆ ಅಧಿಕಾರಿಗಳಿಗೆ ಚಳಿ ಬಿಡಿಸಿದ ಮೇಯರ್​.!

ಬೆಂಗಳೂರು: ಬಿಬಿಎಂಪಿ ಮೇಯರ್ ಎಂ ಗೌತಮ್ ಕುಮಾರ್ ಇಂದು ಬೆಳ್ಳಂ ಬೆಳಗ್ಗೆ ಟೂ ವ್ಹೀಲರ್​ನಲ್ಲಿ ಚಿಕ್ಕಪೇಟೆ ಭೇಟಿ ನೀಡಿದ್ದರು. ಅಲ್ಲಿನ ಸಮಸ್ಯೆಗಳನ್ನು ಕಂಡು ಅಧಿಕಾರಿಗಳ ವಿರುದ್ಧ ಏಕ ವಚನದಲ್ಲಿ ಹರಿಹಾಯ್ದಿದ್ದಾರೆ.

ಬೆಳ್ಳಂಬೆಳಗ್ಗೆ ಮೇಯರ್‌ ಗೌತಮ್‌ ಕುಮಾರ್‌ ಅವರು ಬೈಕ್‌ ಏರಿ. ಗಾಂಧಿನಗರ ಹಾಗೂ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಸುತ್ತಾಡಿದರು. ಅವೆನ್ಯೂ ರಸ್ತೆ, ಕಬ್ಬನ್‌ಪೇಟೆ, ನಗರ್ತಪೇಟೆ, ಸುಲ್ತಾನ್‌ಪೇಟೆಯ ರಸ್ತೆಗಳಿಗೆ ವಿಸಿಟ್‌ ನೀಡಿ ತಪಾಸಣೆ ನಡೆಸಿದರು. ಈ ವೇಳೆ ಸುಳ್ಳು ದಾಖಲೆ ತೋರಿಸಿದ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.

ಟೂ ವ್ಹೀಲರ್ ಮೂಲಕ ಪ್ರಮುಖ ರಸ್ತೆಗಳಿಗೆ ತೆರಳಿ ತಪಾಸಣೆ ನಡೆಸಿದ ಮೇಯರ್‌, ಸಮಸ್ಯೆಗಳಿದ್ರೂ ಕೂಡ ಅವುಗಳಿಗೆ ಪರಿಹಾರ ನೀಡದ ಆರೋಗ್ಯಾಧಿಕಾರಿಗೆ ತರಾಟೆ ತೆಗೆದುಕೊಂಡರು. ಅಷ್ಟೇ ಅಲ್ಲ. ನಿಮ್ಮಂತ ಅಧಿಕಾರಿಗಳು ನಮ್ಮ ವಾರ್ಡ್​ನಲ್ಲಿ ಇದ್ರೆ ಜನ ಚಪ್ಪಲಿ ಹಾರ ಹಾಕ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನು, ಚಿಕ್ಕಪೇಟೆ ವಾರ್ಡ್‌ನಲ್ಲಿ ಸರಿಯಾಗಿ ಕಸವಿಲೇವಾರಿಯಾಗದನ್ನು ಕಂಡು, ಮೇಯರ್‌ ಕೆಂಡಾಮಂಡಲರಾದರು. ಕಾಂಟ್ರ್ಯಾಕ್ಟರ್​​ ಹಾಗೂ ಆಟೋ ಟಿಪ್ಪರ್‌ಗಳನ್ನು ಹೆಚ್ಚುವರಿಯಾಗಿ ಬಳಸಿಕೊಂಡು. ಎರಡು ಪಾಳಿಯಲ್ಲಿ ಕಸ ವಿಲೇವಾರಿ ಮಾಡಿ, ಸ್ವಚ್ಛಗೊಳಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆಯಲ್ಲಿ ತಪಾಸಣೆಗೆ ಬಾರದ ಹಿರಿಯ ಆರೋಗ್ಯಾಧಿಕಾರಿಗೆ ಶೋಕಾಸ್ ನೋಟೀಸ್ ನೀಡುವಂತೆ ಜಂಟಿ ಆಯುಕ್ತರಿಗೆ ಸೂಚಿಸಿದರು.

Recommended For You

About the Author: user

Leave a Reply

Your email address will not be published. Required fields are marked *