‘ನನ್ನ ಆಧ್ಮಾತ್ಮ ಗುರುಗಳು ಹೇಳಿದ್ದರಿಂದ ನಿವೃತ್ತಿ ಆಗುತ್ತಿದ್ದೇನೆ’

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಬೆಂಬಲದಿಂದ ಕಣದಿಂದ ನನ್ನ ಆಧ್ಮಾತ್ಮ ಗುರುಗಳು ಹೇಳಿದ್ದರಿಂದ ನಿವೃತ್ತಿ ಆಗುತ್ತಿದ್ದೇನೆ ಎಂದು ವಿಧಾನ ಪರಿಷತ್​ ಚುನಾವಣೆಗೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಅನಿಲ್​ ಕುಮಾರ್ ಅವರು ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಒತ್ತಡಕ್ಕೂ ಒಳಗಾಗಿಲ್ಲ, ಯಾವುದೇ ಡೀಲ್​ಗೂ ಮಣಿದಿಲ್ಲ, ಸ್ವಯಂ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಚುನಾವಣೆ ಕಣದಿಂದ ಹಿಂದೆ ಸರಿದ ಬಗ್ಗೆ ಸ್ಪಷ್ಟನೆ ನೀಡಿದರು.

ಇನ್ನು ಡಿಸಿಎಂ ಸವದಿಯವರಿಗೆ ಒಳ್ಳೆಯದಾಗಲಿ, ಊಹಾಪೋಹಗಳು ಸಾವಿರ ಇರಲಿ, ನನಗೆ ಅದರಿಂದ ಏನೂ ಆಗಬೇಕಿಲ್ಲ, ಸಮಾನ ಮನಸ್ಕರ ಬೆಂಬಲದಿಂದ ಕಣದಲ್ಲಿದ್ದೆ. ಡೀಲ್​ಗೆ ಕುದುರಿದ್ದರೆ ಅಂದೇ ವಾಪಸ್ ಪಡೆಯುತ್ತಿದ್ದೆ. ಕೊನೆಯ ಡೇಟ್ ಇದ್ರೂ ತೆಗೆದುಕೊಳ್ಳಲಿಲ್ಲ, ನನ್ನ ಗುರುಗಳು ಹೇಳಿದ್ದರಿಂದ ನಿವೃತ್ತಿ ತೆಗೆದುಕೊಂಡಿದ್ದೇನೆ ಎಂದು ಬೆಂಗಳೂರಿನಲ್ಲಿ ಅನಿಲ್ ಕುಮಾರ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *