‘ಕಾಂಗ್ರೆಸ್ ಅವರದ್ದು ಅಡ್ಜೆಸ್ಟಮೆಂಟ್ ರಾಜಕಾರಣ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಡವಾಗಲು ಅವರೇ ಕಾರಣ’

ವಿಜಯಪುರ: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು, ರಾಜ್ಯದ ಸ್ಥಿತಿಗತಿ ಬಗ್ಗೆ ಸಿಎಂ ಹಾಗೂ ಕೇಂದ್ರಕ್ಕೆ ಬರೆದ ಪತ್ರದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಧ್ಯಾಹ್ನ 3ಗಂಟೆಗೆ ಪತ್ರ ಬಿಡುಗಡೆ ಮಾಡುತ್ತೇನೆ. ಇಂದು ಶನಿವಾರ ಇರುವುದರಿಂದ ಹನುಮಾನ ದೇವರ ದರ್ಶನ ತೆಗೆದುಕೊಂಡು ಮಧ್ಯಾಹ್ನ ಪತ್ರ ಬಿಡುಗಡೆ ಮಾಡ್ತೇನೆ ಎಂದಿದ್ದಾರೆ.

ಕೇಂದ್ರದ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಕೈಪಾಳಯದ ವಿರುದ್ಧ ಯತ್ನಾಳ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಈ ದೇಶದ ಸ್ವಾತಂತ್ರ್ಯಾಕ್ಕಾಗಿ ಹೋರಾಟ ಮಾಡಿಲ್ಲ. ಯಾವಾಗ ಸುಭಾಷಚಂದ್ರ ಭೋಸ್ ಅವರನ್ನು ಪದಚ್ಯುತಿ ಮಾಡಿ ಜವಹರಲಾಲ್ ನೇಹರು ಆಯ್ಕೆ ಮಾಡಿದ್ರೋ ಆಗಲೇ ಗೊತ್ತಾಯ್ತು ಇವರು ದೇಶಕ್ಕಾಗಿ ಹೋರಾಟ ಮಾಡಿಲ್ಲ ಅಂತ. ಕಾಂಗ್ರೆಸ್ ಅವರದ್ದು ಅಡ್ಜೆಸ್ಟಮೆಂಟ್ ರಾಜಕಾರಣ, ಈಗಲೂ ಅವರು ಅದನ್ನೇ ಮಾಡುತ್ತಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಡವಾಗಲು ಅವರೇ ಕಾರಣ.

ಪೌರತ್ವ ವಿರೋಧಿಸಿ ಮಾಡುವ ಪ್ರತಿಭಟನೆ ದೇಶ ವಿರೋಧಿ ಚಟುವಟಿಕೆ. ಪೌರತ್ವ ಕಾಯ್ದೆ ವಿರೋಧಿಸಿ ಮಾಡುವ ಹೋರಾಟ ಅಂಬೇಡ್ಕರ್ ಅವರಿಗೆ, ಸಂವಿಧಾನಕ್ಕೆ ಮಾಡಿದ ಅಪಮಾನ. ಲೋಕಸಭೆ, ರಾಜ್ಯಸಭೆಗಳಲ್ಲಿ ಪಾಸಾದ ಸಂಸತ್ತಿನ ವಿಧೆಯಕ ಇಡೀ ಭಾರತಕ್ಕೆ ಅನ್ವಯ ಆಗಲಿದೆ. ಲೋಕಸಭೆ ರಾಜ್ಯಸಭೆಯಲ್ಲಿ ವಿರೋಧ ಮಾಡುವಲ್ಲಿ ಅವರು ವಿಫಲವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈಗ ಇದರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಬೀದರ ಶಾಲೆಗೆ ಸಿದ್ರಾಮಯ್ಯ ಅವರ ಭೇಟಿ ಮಾಡಿದ್ದು ಸಂವಿಧಾನಕ್ಕೆ ಮಾಡಿದ ಅಪಮಾನ. ಕಾಂಗ್ರೆಸ್‌ನವರು ದೇಶದ ಜನರಲ್ಲಿ ಕ್ಷಮೆ ಕೇಳಬೇಕು, ಈ ಕೂಡಲೆ ಕಾಂಗ್ರೆಸ್ ವಿಸರ್ಜನೆ ಮಾಡಬೇಕು. ಗಾಂಧಿಜೀ ಆವಾಗಲೇ ಹೇಳಿದ್ದರು ಕಾಂಗ್ರೆಸ್ ಸ್ವತಂತ್ರದ ಹೆಸರಲ್ಲಿ ರಾಜಕಾರಣ ಮಾಡುತ್ತೆ ಅಂತ. ಸ್ವಹಿತ ಕುಟುಂಬಶಾಹಿ ವ್ಯವಸ್ಥೆ ಬಗ್ಗೆ ಮಹಾತ್ಮಾಗಾಂಧಿ ಹೇಳಿದ್ದು ನಿಜವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ.

ಬಿ.ಎಸ್.ವೈ ಮೂರು ವರ್ಷ ಅಧಿಕಾರದಲ್ಲಿ ಇರಬೇಕು, ಉ.ಕರ್ನಾಟಕಕ್ಕೆ ಹೆಚ್ಚಿನ ಸೌಲಭ್ಯ ಸಿಗಬೇಕು. ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾಪ ಮಾಡ್ತೇನೆ. ರಾಜಕೀಯ ಬೆಳವಣಿಗೆ ಬಗ್ಗೆ ಕತ್ತಿ ಜೊತೆ ಚರ್ಚಿಸಿದ್ದೇನೆ. ಈ ಕುರಿತು ಸಿಎಂಗೆ ಪತ್ರದಲ್ಲಿ ವಿವರಣೆ ನೀಡಲಾಗಿದೆ ಎಂದು ಯತ್ನಾಳ್ ಹೇಳಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *