ಚಂದನವನದಲ್ಲಿ ಅದೃಷ್ಟಪರೀಕ್ಷೆಗೆ ಮುಂದಾದ ಕಿರುತೆರೆ ಕಲಾವಿದರು..!

ಕೊಡೆ ಮುರುಗ.. ಚಂದನವನದಲ್ಲಿ ಹೊಸಬರ ಹೊಸತನದ ಪ್ರಯತ್ನ. ಸೀರಿಯಲ್​ನಲ್ಲಿ ವಿಲನ್​ ಆಗಿ ಮಿಂಚಿದ್ದ ಮುನಿಕೃಷ್ಣ ಕೊಡೆ ಮುರುಗ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಕೊಡೆ ಮುರುಗ ಚಿತ್ರದ ಸ್ಯಾಂಪಲ್ಸ್​​​​​ ಸಖತ್​ ಸದ್ದು ಮಾಡ್ತಿದ್ದು, ಈಗ ಚಿತ್ರದ ಮತ್ತೊಂದು ಹಾಡು ರಿಲೀಸ್​ ಆಗಿದೆ.

ಭಾರೀ ಜೋರಿದೆ ‘ಕೊಡೆ ಮುರುಗ’ನ ಗಾನಬಜಾನಾ
ಭಟ್ರ ಸಾಹಿತ್ಯ..ವಿಜಯ ಪ್ರಕಾಶ್​ & ಶಾಶ್ವತಿ ಗಾಯನ
ದಪ್ಪ ಮೀಸೆ ಬಿಟ್ಟು ಮೀಸೆ ತಿರುವುತ್ತ ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಮುರುಗನಾಗಿ ಮಿಂಚಿದ್ದ ಮುನಿಕೃಷ್ಣ ಈಗ ಕೊಡೆ ಮುರುಗನಾಗಿ ಮಿಂಚಲು ಸಿದ್ದರಾಗಿದ್ದಾರೆ. ಪ್ರೇಮಿಗಳ ದಿನಕ್ಕೆ ಕೊಡೆ ಮುರುಗ ಚಿತ್ರದ ಮುರುಗ ನಾನು ಮುರುಗಿ ನೀನು ಹಾಡು ರಿಲೀಸ್​ ಆಗಿದೆ. ಹಾಡಿಗೆ ಜೋಡಿಹಕ್ಕಿ ಖ್ಯಾತಿಯ ಪಲ್ಲವಿ ಗೌಡ ಜೊತೆಗೆ ಮುನಿಕೃಷ್ಣ ​ ಸ್ಟೆಪ್ಸ್​ ಹಾಕಿದ್ದು ಸಖತ್​ ಎಂಟ್ರಟ್ರೈನಿಂಗ್​ ಆಗಿದೆ.

ನಾನು ಮುರುಗ ಹಾಡಿಗೆ ಯೋಗರಾಜ್​ ಭಟ್​ ಲಿರಿಕ್ಸ್​ ಬರೆದಿದ್ದು, ವಿಜಯ್​ ಪ್ರಕಾಶ್​ ಮತ್ತು ಶಾಶ್ವತಿ ಕಶ್ಯಪ್​ ಕಂಠದಲ್ಲಿ ಮೂಡಿಬಂದಿದೆ. ಎಮ್​.ಎಸ್​ ತ್ಯಾಗರಾಜ್​ ಹಾಡಿಗೆ ಸಂಗೀತ ನೀಡಿದ್ದಾರೆ. ರಿಚ್​ ಆಗಿ ಹಾಡು ಮೂಡಿಬಂದಿದ್ದು ಹಾಡಿನಲ್ಲಿ ಕಾಮಿಡಿ ಅಂಶಗಳು ಹೆಚ್ಚು ಹೈಲೆಟ್​​ ಆಗಿವೆ.

ಗಾಂಧಿನಗರದಲ್ಲಿ ನಡೆಯುವ ಘಟನೆಗಳನ್ನು ಕಾಮಿಡಿಯಾಗಿ ತೋರಿಸುವ ಅಂಶಗಳನ್ನು ಚಿತ್ರದಲ್ಲಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣವು ಮುಗಿದಿದ್ದು ಸಧ್ಯದಲ್ಲಿಯೆ ರಿಲೀಸ್​ ಡೇಟ್​ ಹೊರಬರಲಿದೆ. ಕೆಆರ್ಕೆ ಪ್ರೊಡಕ್ಷನ್​ನಡಿ ಚಿತ್ರ ಮೂಡಿಬಂದಿದ್ದು ಸುಬ್ರಮಣ್ಯ ಪ್ರಸಾದ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ.
ಪವಿತ್ರ.ಎನ್​ ಮೂರ್ತಿ, ಎಂಟ್ರಟ್ರೈನ್​ಮೆಂಟ್​ ಬ್ಯೂರೋ, ಟಿವಿ5

Recommended For You

About the Author: user

Leave a Reply

Your email address will not be published. Required fields are marked *