ವೇದಿಕೆಯಲ್ಲಿ ಹುಲಿಯಾ VS ರಾಜಾಹುಲಿ ಸದ್ದು.!

ದಾವಣಗೆರೆ: ಸಚಿವ ಪ್ರಭು ಚವ್ಹಾಣ್ ಹಾಗೂ ಕಾಂಗ್ರೆಸ್​ನ ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ನಡುವೆ ಕಾರ್ಯಕ್ರಮದ ವೇದಿಕೆಯಲ್ಲಿ ಜಟಾಪಟಿ ನಡೆದ ಘಟನೆ ಇಂದು ನಡೆದಿದೆ.

ಸಂತ ಸೇವಾಲಾಲರ 281 ನೇ ಜಯಂತಿ ಹಿನ್ನೆಲೆಯಲ್ಲಿ, ಜಿಲ್ಲೆಯ ಸೂರಗೊಂಡನಕೊಪ್ಪ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಬಂಜಾರ ಸಮುದಾಯದ ಅನುದಾನ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾತಿನ ಚಕಮಕಿ ನಡೆದಿದೆ.

ಸಚಿವ ಪ್ರಭು ಚವ್ಹಾಣ್ ಅವರು ಸಿಎಂ ಯಡಿಯೂರಪ್ಪ ಅವರು ಬಂಜಾರ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ನಮ್ಮ ಸಮಾಜಕ್ಕೆ ಕೊಡುಗೆ ನೀಡಿದ್ದು ರಾಜಾಹುಲಿ ಎಂದಿದ್ದಾರೆ. ಇದಕ್ಕೆ ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್ ಅವರು ತಿರುಗೇಟು ನೀಡಿ ಹೌದು ಹುಲಿಯಾ ಎಂದರು.

ಇದರಿಂದ ಸಿಎಂ ಬಿಎಸ್​ವೈ ಅವರು ಸಿಡಿಮಿಡಿಗೊಂಡರು. ಬಳಿಕ ಪರಮೇಶ್ವರ್ ನಾಯ್ಕ್ ಜೊತೆ ಮಾತುಕತೆ ನಡೆಸಿ, ಯಾಕಪ್ಪಾ ಈ ರೀತಿ ಮಾತನಾಡುತ್ತಿದ್ದೀಯಾ? ಎಂದು ಯಡಿಯೂರಪ್ಪ ಕೇಳಿದರು. ಈ ವೇಳೆ ಪರಮೇಶ್ವರ್​ ನಾಯ್ಕ್​ ಸಿಡಿಮಿಡಿಗೊಂಡು ಅಸಮಾಧಾನದಿಂದಲೇ ವೇದಿಕೆಯ ಖುರ್ಚಿಯತ್ತ ತೆರಳಿದರು.

ಬಳಿಕ ಪರಮೇಶ್ವರ್​ ನಾಯ್ಕ್ ತಮ್ಮ ಭಾಷಣದಲ್ಲಿ ಅನುದಾನ ವಿಚಾರ ಉಲ್ಲೇಖಿಸಿ, ಸಿದ್ದರಾಮಯ್ಯ 36 ಕೋಟಿ ನಮ್ಮ ಸಮಾಜಕ್ಕೆ ನೀಡಿದ್ದಾರೆ. ಅವರಂತೆ ಎಲ್ಲ ಮುಖ್ಯಮಂತ್ರಿಗಳು ಅನುದಾನ ನೀಡಿದ್ದಾರೆ ಎಂದರು.

Recommended For You

About the Author: user

Leave a Reply

Your email address will not be published. Required fields are marked *