ಪ್ರಧಾನಿ ಆಗೋರು ಹುಚ್ಚನಾಗಿರಬಾರದು- ರಾಹುಲ್​​ ಗೆ ತಿರುಗೇಟು ನೀಡಿದ ಸಂಸದ ಬಸವರಾಜು

ತುಮಕೂರು: ಪ್ರಧಾನಿ ಅಭ್ಯರ್ಥಿ ಆಗುವವರು ಭಾರತೀಯ ಪ್ರಜೆ ಆಗಿರಬೇಕು. ಹುಚ್ಚನಾಗಿರಬಾರದು ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ಪುಲ್ವಾಮ ಬಾಂಬ್ ಬ್ಲಾಸ್ಟ್ ಬಗ್ಗೆ ಟ್ವೀಟ್​ ಮಾಡಿ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ನಮ್ಮ ಯೋಧರನ್ನು ನೆನಪಿಸಿಕೊಳ್ಳುತ್ತಾ, ಈ ದಾಳಿಯಿಂದ ಅತಿ ಹೆಚ್ಚು ಲಾಭ ಪಡೆದವರು ಯಾರು? ಈ ದಾಳಿ ಕುರಿತು ವಿಚಾರಣೆಯ ಫಲಿತಾಂಶ ಏನು? ಭದ್ರತಾ ಲೋಪದಿಂದ ದಾಳಿಯಾದ ಕಾರಣಕ್ಕೆ ಬಿಜೆಪಿ ಸರ್ಕಾರದಲ್ಲಿ ಯಾರನ್ನ ಹೊಣೆಗಾರರನ್ನಾಗಿ ಮಾಡಲಾಗಿದೆ? ಎಂದು ಪ್ರಶ್ನಿಸಿದ್ದರು.

ಇದನ್ನ ಖಂಡಿಸಿದ ಜಿ.ಎಸ್​ ಬಸವರಾಜು, ನನಗೂ ಪ್ರಧಾನಿ ಆಗುವ ಚಟ ಇದೆ. ಪ್ರಧಾನಿಯಾಗುವವರು ಹುಚ್ವನಾಗಿರಬಾರದು ಎಂದು ಜಿ.ಎಸ್ ಬಸವರಾಜು ಅವರು ಹೇಳಿದರು.

ರಾಹುಲ್ ಗಾಂಧಿ ಅವರೇ ದೇಶದಲ್ಲಿ ದಾಳಿ ನಡೆಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಮುಸ್ಲಿಂ ರನ್ನ ಎತ್ತಿ ಕಟ್ಟುತ್ತಿದ್ದಾರೆ. ರಾಹುಲ್ ಗಾಂಧಿ ಚಿನ್ನದ ಚಮಚದಲ್ಲಿ ಹುಟ್ಟಿದವರು. ನರೇಂದ್ರ ಮೋದಿ ಟೀ ಮಾರುವವರು ಪ್ರಧಾನಿ ಆಗಿದ್ದಾರೆ. ಅದು ಸಾರ್ವಭೌಮತ್ವದ ಮಹತ್ವ ಎಂದು ಬಿಜೆಪಿ ಸಂಸದ ಜಿ.ಎಸ್ ಬಸವರಾಜು ಅವರು ಹೇಳಿದರು.

Recommended For You

About the Author: user

Leave a Reply

Your email address will not be published. Required fields are marked *