ನೈತಿಕತೆ ಇದ್ದರೆ ಅವರೇ ರಾಜೀನಾಮೆ ಕೊಡಬೇಕು – ಸಿದ್ದರಾಮಯ್ಯ

ಬೀದರ್: ಕುರಿಕಾಯೋ ತೋಳ ಅಂದರೆ ನನಗೆ ಸಂಬಳ ಬೇಡ ಹಾಗೇ ಕಾಯುತ್ತೇನೆ ಎಂದ ಹಾಗೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಮನುಷ್ಯನ ಮೇಲೆ ಅನೇಕ ಪ್ರಕರಣ ಇವೆ ಅವರಿಗೆ ಅರಣ್ಯ ಖಾತೆ ಕೊಟ್ಟಿದ್ದಾರೆ. ಇನ್ನು ಪ್ರಕರಣಗಳೆ ಇತ್ಯರ್ಥಾವಾಗಿಲ್ಲಾ ಅವರಿಗೆ ಅರಣ್ಯ ಸಚಿವ ಸ್ಥಾನ. ಅವರ ಮೇಲೆನೆ ಇನ್ನು ಕೇಸ್ ಮುಗಿದಿಲ್ಲ ನ್ಯಾಯ ಹೇಗೆ ಸಿಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.

ಸದ್ಯ  ಅವರಿಗೆ ನೈತಿಕತೆ ಇದ್ದರೆ ಅವರೇ ರಾಜೀನಾಮೆ ಕೊಡಬೇಕು. ಇಲ್ಲಾ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರನ್ನು ಕೈ ಬಿಡಬೇಕು ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ನಂತರ ಯಡಿಯೂರಪ್ಪ ವಿರುದ್ಥ ಮಾತನಾಡಿದ ಅವರು, ತೊಗರಿ ಖರೀದಿಯಲ್ಲಿ ಸಿಎಂ ಬಿಎಸ್ ವೈ ಸುಳ್ಳು ಹೇಳುತ್ತಿದ್ದಾರೆ. ಬೀದರ್ ನಲ್ಲಿ  20ಕ್ವಿಂಟಾಲ್ ಖರೀದಿ ಮಾಡುತ್ತೆವೆ ಅಂತಾ ಹೇಳಿದ್ದರು. ಇಲ್ಲಿಯವರೆಗೆ ಖರೀದಿ ಮಾಡಿಲ್ಲ, ಸದ್ಯ ಅವರು 25ಕ್ವಿಂಟಾಲ್ ಖರೀದಿ ಮಾಡುವಂತೆ ಸಿದ್ದರಾಮಯ್ಯ ಆಗ್ರಹ ಮಾಡಿದರು.

Recommended For You

About the Author: user

Leave a Reply

Your email address will not be published. Required fields are marked *