ಮೀನುಗಾರರಿಗೆ ಸಿಕ್ಕಿದೆ ಅಪರೂಪದ ದೆವ್ವ ಮೀನು, ಎಲ್ಲಿ ಗೊತ್ತಾ..?

ಉಡುಪಿ:  ಅಪರೂಪದ ದೊಡ್ಡ ಗಾತ್ರದ ದೆವ್ವ ಮೀನೊಂದು ಉಡುಪಿ ಮಲ್ಪೆಯ ಮೀನುಗಾರರ ಬಲೆಗೆ ಶನಿವಾರ ಬಿದ್ದಿದೆ.

ಸುಮಾರು ಐದು ಅಡಿ ಉದ್ದವಿರುವ ಈ ಮೀನು ಆರು ಕೆಜಿಯಷ್ಟು ತೂಕವಿದೆ. ಒಮ್ಮೆಗೆ ಕಂಡರೆ ದೆವ್ವದಂತೆ ಭಾಸವಾಗುವ ಅಪರೂಪದ ಜಾತಿಯ ಮೀನಿದು. ಸಾಮಾನ್ಯ ಭಾಷೆಯಲ್ಲಿ ಹೇಳೋದಾದರೆ ಇದೊಂದು ಜಾತಿಯ ಆಕ್ಟೋಪಸ್. ಇದರ ವೈಜ್ಞಾನಿಕ ಹೆಸರು ಬಿಗ್ ಬ್ಲೂ ಆಕ್ಟೋಪಸ್ , ಡೆವಿಲ್ ಫಿಶ್ ಎಂದೇ ಈ ಮೀನು ಖ್ಯಾತಿ ಪಡೆದಿದೆ.

ಅರಬ್ಬೀ ಸಮುದ್ರ ಮತ್ತು ಹಿಂದೂ ಮಹಾಸಾಗರದ ಕಲ್ಲು ಬಂಡೆಗಳ ಅಡಿಯಲ್ಲಿ 150 ಮೀಟರ್ ಆಳದಲ್ಲಿ‌ ಈ ಆಕ್ಟೋಪಸ್ ಜೀವಿಸುತ್ತದೆ. ಚೀನಾ, ಸಿಂಗಾಪುರ್, ಹಾಂಗ್ ಕಾಂಗ್ ನಲ್ಲಿ ಈ ಮೀನಿಗೆ ಬೇಡಿಕೆ ಹೆಚ್ಚು. ಸಂತಾನೋತ್ಪತ್ತಿ ಬಳಿಕ ಗಂಡು ಮೀನು ಸತ್ತರೆ, ಹೆಣ್ಣು ಮೀನು ಮರಿ ಹಾಕಿ ಅಸುನೀಗುತ್ತೆ. ಈ ತಳಿಯ ಮೀನಿನ ವಿಶೇಷ.

Recommended For You

About the Author: user

Leave a Reply

Your email address will not be published. Required fields are marked *