ಕಾಂಗ್ರೆಸ್​ ಪ್ರತಿಭಟನೆಗೆ ಕಾರಣ ಕೊಟ್ಟ ಸಂಸದ ಡಿ.ಕೆ.ಸುರೇಶ್

ಬೆಂಗಳೂರು: ಕಂದಾಯ ಸಚಿವ ಆರ್​.ಅಶೋಕ್​ ಪುತ್ರನ ಮೇಲೆ ಅಪಘಾತ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್​ ಸಂಸದ ಡಿ.ಕೆ.ಸುರೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಕಾಂಗ್ರೆಸ್​ನವರು ಏನೇ ಮಾಡಿದರೂ ಅತ್ಯಾಚಾರವಾಗುತ್ತೆ, ನಲಪಾಡ್ ಘಟನೆ ಬಗ್ಗೆ ಚರ್ಚೆಯಾಗಿದೆ. ನಮ್ಮ ಶಾಸಕ ಹ್ಯಾರಿಸ್​ ಬಹಳ ನೋವು ಅನುಭವಿಸಿದ್ದಾರೆ ಎಂದು ತಮ್ಮ ಪಕ್ಷದವರ ಪರಿಸ್ಥಿತಿ ಬಗ್ಗೆ ಹೇಳಿಕೊಂಡರು.

ಇವತ್ತು ಬಿಜೆಪಿಯವರು ಅಪಘಾತ ಮಾಡಿದ್ದಾರೆ, ಇಬ್ಬರು ಅಪಘಾತದಿಂದ ಮೃತ ಪಟ್ಟಿದ್ದಾರೆ. ಆ ಕಾರು ಬಿಜೆಪಿ ನಾಯಕರದ್ದೇ ಅಂತ ಹೇಳುತ್ತಿದ್ದಾರೆ. ಮೃತಪಟ್ಟವರಿಗೆ ಸಾಂತ್ವನ ಹೇಳೋಕ್ಕೂ ಹೋಗಲಿಲ್ಲ, ಬಿಜೆಪಿ ನಾಯಕರು ಆ ಕೆಲಸ ಮಾಡಲಿಲ್ಲ ಎಂದು ಹೇಳಿದರು.

ಸದ್ಯ ಮಾಧ್ಯಮದವರು ನಲಪಾಡ್ ಕೇಸ್ ಮಾತ್ರ ಹಾಕ್ತೀರ, ನೀವು ಕೂಡ ತಾರತಮ್ಯ ಮಾಡುತ್ತಿದ್ದೀರ, ನೀವು ಪ್ರಜಾತಂತ್ರ ವ್ಯವಸ್ಥೆಗೆ ಗೌರವ ಕೊಡುವವರು, ಈ ಪ್ರಕರಣದಲ್ಲಿ ಮಾಧ್ಯಮಗಳೇ ನ್ಯಾಯ ಕೊಡಿಸಬೇಕು ಎಂದು ಮಾಧ್ಯಮದವರಿಗೆ ಮನವಿ ಮಾಡಿಕೊಂಡರು.

ಬೀದರ್ ಶಾಹೀನ್ ಶಾಲೆ ದೇಶದ್ರೋಹ ಪ್ರಕರಣಕ್ಕೆ ಸಂಬಂದಿಸಿದಂತೆ ಮಾತನಾಡಿದ ಅವರು, ಇವತ್ತು ದೌರ್ಜನ್ಯ ಸಾಕಷ್ಟು ನಡೆಯುತ್ತಿದೆ. ಪೊಲೀಸರನ್ನು ಬಳಸಿಕೊಂಡು ಭಯದ ವಾತಾವರಣ ಮಾಡುತ್ತಿದ್ದಾರೆ ಅದಕ್ಕೆ ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ನುಡಿದರು.

ಇಲ್ಲಿಯ ವರೆಗೆ ಯಾವುದೂ ಇರಲಿಲ್ಲ, ಇವತ್ತು ಹೊಸಹೊಸ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೆ ವಾರಕ್ಕೊಂದು ಪ್ರತಿಭಟನೆ ಬಿಜೆಪಿ ಮಾಡುತ್ತಿತ್ತು. ಇವತ್ತು ಇದರ ಬಗ್ಗೆ ಅವರು ಮಾತನಾಡುತ್ತಿಲ್ಲ ಎಂದು ಬಿಜೆಪಿ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸದ್ಯ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಅಧ್ಯಕ್ಷ ದಿನೇಶ್ ಗುಂಡೂರಾವ್ ಇದ್ದಾರೆ. ಯುವಕರಿದ್ದಾರೆ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ ಎಂದು ಸಂಸದ ಡಿ.ಕೆ.ಸುರೇಶ್ ಅವರು ಹೇಳಿದರು.

Recommended For You

About the Author: user

Leave a Reply

Your email address will not be published. Required fields are marked *