ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಖಡಕ್ ವಾರ್ನಿಂಗ್ ಕೊಟ್ಟ ಸಚಿವ ಸಿ.ಟಿ ರವಿ..!

ಮೈಸೂರು: ನಾನು ಚಾಮುಂಡಿ ಸ್ಟೇಡಿಯಂಗೆ ಹೋಗಿದ್ದೆ, ಅಲ್ಲಿನ ಪರಿಸ್ಥಿತಿ ಸರಿಯಿಲ್ಲ ಅನ್ನೋದು ಗೊತ್ತಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ವಸತಿ ಶಾಲೆಯ ಮಕ್ಕಳ ಅನ್ನವನ್ನು ಬೇರೆಯವರು ತಿನ್ನಲು ಬಿಡುವುದಿಲ್ಲ, ಅಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ, ಹಾಗಾಗಿ ಅಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದ್ದೇನೆ.  ಮಕ್ಕಳಿಗೆ ನೀಡುವ ಚಿಕನ್, ಮಟನ್ ಗುಣಮಟ್ಟದಿಂದ ಕೂಡಿಲ್ಲ ಎಂಬ ಆರೋಪ ಇದೆ. ಅದನ್ನು ಸಹ ಸರಿಪಡಿಸಿಕೊಳ್ಳುವಂತೆ ಸೂಚಿಸಿದ್ದೇನೆ ಎಂದರು.

ಸದ್ಯ ಜಿಮ್​​ನ ಪರಿಕರಗಳನ್ನು ಅಳವಡಿಸದೇ ಹಾಗೇ ಇಟ್ಟಿದ್ದಾರೆ. ಇಂದು ಸಂಜೆಯೊಳಗೆ ಅವುಗಳನ್ನು ಅಳವಡಿಸಬೇಕು.
ನಂತರ ಮೊಬೈಲ್ ವೀಡಿಯೋ ಚಿತ್ರಣ ಮಾಡಿ ವಾಟ್ಸಪ್ ಮೂಲಕ ಕಳಿಸುವಂತೆ ಸೂಚಿಸಿದ್ದೇನೆ.  ಇಲ್ಲವಾದಲ್ಲಿ ನಾನು ಏನು ಮಾಡಬೇಕೋ ಅದನ್ನೆ ಮಾಡುತ್ತೇನೆ ಎಂದು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸಿ.ಟಿ ರವಿ ಖಡಕ್ ವಾರ್ನಿಂಗ್ ನೀಡಿದರು.

Recommended For You

About the Author: user

Leave a Reply

Your email address will not be published. Required fields are marked *