‘ಕಾಂಗ್ರೆಸ್​ನವರಿಗೆ ಹೋರಾಟ ಗೊತ್ತಿಲ್ಲ ಅವರು​ ಎಂಟಿಆರ್​ ಪುಡ್’ – ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ: ಸಿದ್ದರಾಮಯ್ಯನವರೇ, ನಿಮ್ಮಮೇಲೆ ನಿಮ್ಮ ಪಕ್ಷದ ಮುಖಂಡರ ಮೇಲೆ ಎಷ್ಟು ಹಗರಣಗಳಿವೆ, ಆನಂದ್ ಸಿಂಗ್ ಕಾಂಗ್ರೆಸ್​ ಸೇರಿಸಿಕೊಂಡಾಗ ಅವರ ಮೇಲೆ ಆರೋಪ ಇರಲಿಲ್ವಾ(?) ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಪ್ರಶ್ನೆ ಮಾಡಿದ್ದಾರೆ.

ಶನಿವಾರ ದಾವಣಗೆರೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾಂಗ್ರೆಸ್​-ಜೆಡಿಎಸ್​ನವರು ಸತ್ಯ ಹರಿಶ್ಚಂದ್ರರು ನಾಚಿಕೆ ಆಗಬೇಕು ನಿಮಗೆ, ಕಾಂಗ್ರೆಸ್​ ಬಿಟ್ಟು ಸಚಿವರಾಗಿದ್ದಕ್ಕೆ ಅಸೂಯೆಯಿಂದ ಈ ರೀತಿ ಹೇಳುತ್ತಿದ್ದಾರೆ. ಆನಂದ್ ಸಿಂಗ್ ಅರಣ್ಯ ಸಚಿವರಾಗಿ ಮುಂದುವರೆಯಲಿ, ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಅವರು ಅರಣ್ಯ ಸಚಿವ ಆನಂದ್​ ಸಿಂಗ್​ ಪರ ಬ್ಯಾಟಿಂಗ್ ಮಾಡಿದರು.

ಸಿಎಂ ಮನೆ ಮುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ನವರಿಗೆ ಹೋರಾಟ ಗೊತ್ತಿಲ್ಲ, ಕಾಂಗ್ರೆಸ್​ ಎಂಟಿಆರ್​ ಪುಡ್, ಮಾಧ್ಯಮದವರು ಹೋದ ತಕ್ಷಣ ಪ್ರತಿಭಟನೆ ಕೈ ಬಿಡ್ತಾರೆ ಎಂದು ಎಂ.ಪಿ.ರೇಣುಕಾಚಾರ್ಯ ಅವರು ಕಾಂಗ್ರೆಸ್​ ಪ್ರತಿಭಟನೆ ಬಗ್ಗೆ ಲೇವಡಿ ಮಾಡಿದರು.

ಉಮೇಶ್ ಕತ್ತಿ ದೆಹಲಿಗೆ ಹೋಗಿರೋದು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲು, ಪಾಕಿಸ್ತಾನದ ಪ್ರಧಾನ ಮಂತ್ರಿ ಭೇಟಿಯಾಗಲು ಅಲ್ಲ, ದೇವೇಗೌಡರು, ಸೋನಿಯಾ ಗಾಂಧಿ ಭೇಟಿ ಮಾಡಲು ಹೋಗಿಲ್ಲ, ಕತ್ತಿಯವರು ಹಿರಿಯರು ಅವರಿಗೆ ಸಚಿವ ಸ್ಥಾನ ಸಿಗುತ್ತೆ ಎಂಬ ವಿಶ್ವಾಸ ಇದೆ ಎಂದು ಉಮೇಶ್ ಕತ್ತಿ ಅವರು ದೆಹಲಿಗೆ ಭೇಟಿ ನೀಡಿರುವ ಬಗ್ಗೆ ಸಮರ್ಥನೆ ಮಾಡಿಕೊಂಡರು.

Recommended For You

About the Author: user

Leave a Reply

Your email address will not be published. Required fields are marked *