ಈ ಬಾರಿ ಸಿಎಂ ಯಡಿಯೂರಪ್ಪ ಬರ್ತ್‌ಡೇ ಸ್ಪೆಷಲ್ ಏನ್ ಗೊತ್ತಾ..?

ಬೆಂಗಳೂರು: ಇದೇ ತಿಂಗಳು ದಿನಾಂಕ 27ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬವಿದ್ದು, ವಿಶೇಷವಾಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಬೇಕೆಂದು ನಿರ್ಧರಿಸಲಾಗಿದೆ.

ಈ ಬಾರಿ ಯಡಿಯೂರಪ್ಪ ಬರ್ತ್‌ಡೇ ಸ್ಪೆಷಲ್‌ ಆಗಿ ಕರ್ನಾಟಕದ 4 ಮಾಜಿ ಸಿಎಂಗಳನ್ನ ಬರ್ತ್‌ಡೇ ಪಾರ್ಟಿಗೆ ಆಹ್ವಾನಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಎಸ್ ಎಂ ಕೃಷ್ಣಾ , ಮಾಜಿ ಸಿಎಂ ಸದಾನಂದಗೌಡರನ್ನ ಬರ್ತ್‌ಡೇ ಪಾರ್ಟಿಗೆ ಕರೆಯಲಾಗಿದೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಬರ್ತ್‌ಡೇ ಪಾರ್ಟಿ ಆಚರಣೆಗೆ ನಿರ್ಧರಿಸಲಾಗಿದ್ದು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಧಣಿವರಿಯದ ಧೀಮಂತ ಅಭಿನಂದನಾ ಗ್ರಂಥ, ಕಾಪಿ ಟೇಬಲ್ ಎಂಬ ಸಚಿತ್ರ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ.

Recommended For You

About the Author: user

Leave a Reply

Your email address will not be published. Required fields are marked *