ಹೇಗಿತ್ತು ಸೆಲೆಬ್ರಿಟಿಗಳ ವ್ಯಾಲೆಂಟೈನ್ಸ್‌ಡೇ ಸೆಲೆಬ್ರೇಷನ್..? ರಶ್ಮಿಕಾ ವಿಶ್ ಸಖತ್ ಡಿಫ್ರೆಂಟ್..!

ನಿನ್ನೆ ಎಲ್ಲೆಡೆ ವ್ಯಾಲೆಂಟೈನ್ಸ್‌ಡೇ ಸಂಭ್ರಮ ಜೋರಾಗಿತ್ತು. ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಕೂಡ ತಮ್ಮ ಸಂಗಾತಿಯೊಂದಿಗೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್ ಮಾಡಿದ್ರು. ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡುವ ಮೂಲಕ ಸಂಭ್ರಮಿಸಿದರು.

 

View this post on Instagram

 

Forever n ever ❤

A post shared by Yash (@thenameisyash) on

ಯಶ್ ಮತ್ತು ರಾಧಿಕಾ ಕೂಡ ತಮ್ಮ 10ನೇ ವರ್ಷದ ವ್ಯಾಲೆಂಟೈನ್ಸ್‌ ಡೇ ಸೆಲೆಬ್ರೇಟ್ ಮಾಡಿದ್ದು, ಯಶ್- ರಾಧಿಕಾ ಇಬ್ಬರೂ ಇನ್‌ಸ್ಟಾಗ್ರಾಮದಲ್ಲಿ ವಿಶ್ ಮಾಡಿದ್ದಾರೆ. ಅಲ್ಲದೇ, ಕೇಕ್ ಕತ್ತರಿಸಿ, ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡಿದ್ದಾರೆ.

ನಟಿ ಶ್ವೇತಾ ಶ್ರೀವಾತ್ಸವ್ ಕೂಡ ತಮ್ಮ ಪತಿ ಅಮಿತ್‌ರೊಂದಿಗೆ ಪ್ರೇಮಿಗಳ ದಿನ ಸೆಲೆಬ್ರೇಟ್ ಮಾಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಸಂಭ್ರಮ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಕೊಂಚ ಫನ್ನಿಯಾಗಿದ್ದು, ಶ್ವೇತಾ ಪತಿ ಅಮಿತ್ ಪ್ರಶಾಂತವಾದ ಜಾಗದಲ್ಲಿ ಧ್ಯಾನ ಮಾಡುತ್ತಾ ಕುಳಿತಿದ್ದು, ನಾನ್ ಸಿಕ್ಕಿದಮೇಲು ,ದೇವರಲ್ಲಿ ಏನು ಬೇಡಿಕೊಳ್ಳುತ್ತಿರುವೆ ಇನಿಯಾ ?!! ಇವಳನ್ನು ಸಹಿಸಿಕೊಳ್ಳುವ ಶಕ್ತಿ ಕೊಡು ಎಂದೇ? ಎಂದು ಹಾಸ್ಯವಾಗಿ ಪ್ರಶ್ನಿಸಿದ್ದಾರೆ.

ಇನ್ನು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಪತಿ ರಿಷಬ್‌ಗೆ ವಿಶ್ ಮಾಡಿದ್ದು, ತಮ್ಮ ಮುದ್ದು ಕುಟುಂಬದ ಫೋಟೋ ಹರಿಬಿಟ್ಟಿದ್ದಾರೆ.

ಮೊನ್ನೆ ಮೊನ್ನೆ ತಾನೇ ಎಂಗೇಜ್‌ಮೆಂಟ್ ಮಾಡಿಕೊಂಡ ಸಂಭ್ರಮದಲ್ಲಿರುವ ನಿಖಿಲ್ ಕುಮಾರ್, ಸ್ವಲ್ಪ ಡಿಫ್ರೆಂಟ್ ಆಗಿಯೇ ಪ್ರೇಮಿಗಳ ದಿನ ಸೆಲೆಬ್ರೇಟ್ ಮಾಡಿದ್ದಾರೆ. ತಮ್ಮ ಸಂಗಾತಿ ರೇವತಿಯೊಂದಿಗೆ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ.

 

View this post on Instagram

 

✨♥️

A post shared by Rashmika Mandanna (@rashmika_mandanna) on

ಇನ್ನು ನಟಿ ರಶ್ಮಿಕಾ ಮಂದಣ್ಣ ಕೂಡ ತಮ್ಮ ಇನ್‌ಸ್ಟಾಗ್ರಾಮನಲ್ಲಿ ವ್ಯಾಲೆಂಟೈನ್ಸ್‌ ಡೇ ವಿಶ್ ಮಾಡಿದ್ದು, ಕೊಂಚ ಡಿಫ್ರೆಂಟ್ ಆಗಿತ್ತು. ನಿಮ್ಮನ್ನು ನೀವು ಪ್ರೀತಿಸಿ ಎಂಬ ಸಂದೇಶ ರವಾನಿಸಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *