‘ಡಿ.ಕೆ.ಶಿವಕುಮಾರ್ ರಾಜ್ಯಾಧ್ಯಕ್ಷರಾದ್ರೆ ಸಿದ್ದರಾಮಯ್ಯಗೆ​​ ಗೇಟ್​ಪಾಸ್’

ದಾವಣಗೆರೆ: ಕಾಂಗ್ರೆಸ್​​ ರಾಜ್ಯಾಧ್ಯಕ್ಷರ ನೇಮಕವಾಗುತ್ತಿದ್ದಂತೆ ಕಾಂಗ್ರೆಸ್​ ಹೊಡೆದ ಮನೆಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್​ ಅವರು ಹೇಳಿದರು.

ಶನಿವಾರ ದಾವಣಗೆರೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯಾಧ್ಯಕ್ಷರಾದರೆ, ಡಿ.ಕೆ.ಶಿವಕುಮಾರ್ ಹೊರ ಹೋಗ್ತಾರೆ, ಡಿ.ಕೆ.ಶಿವಕುಮಾರ್ ಆದರೆ ಸಿದ್ದರಾಮಯ್ಯ ಹೊರ ಹೋಗ್ತಾರೆ, ಇಬ್ಬರೂ ಒಳ ಹೋದ್ರೆ ಪರಮೇಶ್ವರ್ ಹೊರ ಹೋಗ್ತಾರೆಂದು ಎಂದು ಕೈ ನಾಯಕರ ವಿರುದ್ಧ ಲೇವಡಿ ಮಾಡಿದರು.

ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲು ಕಾಂಗ್ರೆಸ್​ಗೆ ಆಗ್ತಾ ಇಲ್ಲ, ಕುಮಾರಸ್ವಾಮಿ ಕಣ್ಣೀರು ಹಾಕುವ ಸಿಎಂ, ಸಿದ್ದರಾಮಯ್ಯ ಜನರ ಕಣ್ಣಲ್ಲಿ ನೀರು ಹಾಕಿಸುವ ಸಿಎಂ ಆದರೆ ಯಡಿಯೂರಪ್ಪ ಅವರು ಜನರ ಕಣ್ಣೀರು ಹೊರೆಸುವ ಸಿಎಂ ಎಂದರು.

ಇನ್ನು ನುಡಿದಂತೆ ನಡೆಯುವ ಏಕೈಕ ಸಿಎಂ ಅಂದರೆ ಯಡಿಯೂರಪ್ಪ. ನಮ್ಮ ಸರ್ಕಾರ ಬರಲು ಕಾರಣರಾದವರಿಗೆ ಸಚಿವ ಸ್ಥಾನ ನೀಡ್ತೀನಿ ಎಂದು ಹೇಳಿದ್ದರು. ಅದರಂತೆ ನುಡಿದಂತೆ ನಡೆದು ಅವರಿಗೆ ಸಚಿವ ಸ್ಥಾನ ನೀಡಿದ್ದಾರೆ. ನರಹಂತಕ ವೀರಪ್ಪನ್ ನೋಡಿದ್ವಿ, ನರಹಂತಕ ಹುಲಿ ನೋಡಿದ್ವಿ ಆದರೆ ನರಹಂತಕ ಸರ್ಕಾರ ಇದ್ದರೇ ಅದು ಕಾಂಗ್ರೆಸ್​ ಸರ್ಕಾರ. ಮತ ಬ್ಯಾಂಕ್​ಗಾಗಿ ಕಾಂಗ್ರೆಸ್​ ಸಿಎಎ ಬಳಸಿಕೊಳ್ಳುತ್ತಿದೆ ಎಂದು ನಳೀನ್​ ಕುಮಾರ್​ ಕಟೀಲ್​ ಅವರು ಗುಡುಗಿದರು.

Recommended For You

About the Author: user

Leave a Reply

Your email address will not be published. Required fields are marked *