ಬಾಲಿವುಡ್ ಮಂದಿ ಮೆಚ್ಚಿದ ಕನ್ನಡ ಸಿನಿಮಾ ನೋಡಲು ಕನ್ನಡಿಗರೇ ಮನಸ್ಸು ಮಾಡುತ್ತಿಲ್ಲ..!

ಸ್ವಾಮಿ ವಿವೇಕನಂದರ ‘‘ಏಳಿ ಎದ್ದೇಳಿ ಗುರಿ ಮುಟ್ಟವ ತನಕ ನಿಲ್ಲದಿರಿ’’ ಅನ್ನೋ ಸ್ಲೋಗನ್​​ನ ಕನ್ನಡ ಚಿತ್ರರಂಗ ಕೊಂಚ ಬದಲಾವಣೆ ಮಾಡಿಕೊಂಡು ಅಭಿಮಾನಿಗಳಿಗೆ ಕರೆ ಕೊಡೊವ ಪರಿಸ್ಥಿತಿ ಬಂದಿದೆ. ಅದ್ಭುತ​​ ರೆಸ್ಪಾನ್ಸ್ ಸಿಕ್ಕಿರೋ ಜಂಟಲ್​ಮನ್ ಸಿನಿಮಾ ನೋಡುವಂತೆ ಚಿತ್ರತಂಡ ಏಳಿ ಎದ್ದೇಳಿ ಕೂಗಿ ಕರೀತಿದೆ.

ಏಳಿ ಎದ್ದೇಳಿ ಅಂತ ಕೂಗುತ್ತಿದ್ದಾನೆ ಜಂಟಲ್​​ಮನ್..!
ಪ್ರೇಕ್ಷಕರನ್ನ ಎಬ್ಬಿಸೋಕ್ಕೆ ಚಿತ್ರತಂಡದಿಂದ ಬ್ಲ್ಯಾಕ್​ ಡೇ..!
ಅದ್ಭುತ ರೆಸ್ಪಾನ್ಸ್ ಸಿಕ್ರು ಥಿಯೇಟರ್​​ಗೆ ಬರ್ತಿಲ್ಲ ಪ್ರೇಕ್ಷಕ..!
ಕುಂಭಕರ್ಣನ ನಿದ್ದೆಯನ್ನ ಮೆಚ್ಚಿದ ಬಾಲಿವುಡ್​ ಮಂದಿ..!
ಒಳ್ಳೆಯ ಸಿನಿಮಾಗಳು ಕನ್ನಡದಲ್ಲಿ ಬರ್ತಿಲ್ಲ ಅನ್ನೋ ಪೂರ್ವಗ್ರಹ ಪೀಡಿತರಿರುವ ಈ ಕಾಲದಲ್ಲಿ ಕನ್ನಡ ಸಿನಿಮಾಗಳಿಗೆಲ್ಲಿದೆ ಉಳಿಗಾಲ. ಒಂದು ಕಡೆ ಕನ್ನಡ ಸಿನಿಮಾಗಳು ಕರ್ನಾಟಕದಲ್ಲಿಯೇ ತೆರೆಕಾಣಲು ಪ್ರತಿಭಟಿಸುವ ಪರಿಸ್ಥಿತಿ ಎದುರಾಗಿದೆ. ಮತ್ತೊಂದು ಕಡೆ ಕನ್ನಡ ಪ್ರೇಕ್ಷಕರಿಲ್ಲದೆ ಚಿತ್ರಮಂದಿರ ಬಿಕೋ ಎನ್ನುತ್ತಿದೆ. ಒಂದೊಳ್ಳೆ ಸಿನಿಮಾ ಬಂದಿದೆ ಕನ್ನಡ ಪ್ರೇಕ್ಷಕರೇ , ದಯವಿಟ್ಟು ಥಿಯೇಟರ್​ಗೆ ಬನ್ನಿ ನಮ್ಮನ್ನ ಉಳಿಸಿ ಅಂತ ವಿಭಿನ್ನ ಪ್ರತಿಭಟನೆಯನ್ನ ಮಾಡುತ್ತಿದೆ ಜಂಟಲ್​ಮನ್ ಚಿತ್ರತಂಡ.

ಪ್ರಜ್ವಲ್​ ದೇವರಾಜ್​​ ಅಭಿನಯದ ಜಂಟಲ್​ಮನ್​​​ ಚಿತ್ರತಂಡ ಸೋಷಿಯಲ್​ ಮೀಡಿಯಾದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದೆ. ಜಡೇಶ್​ ಕುಮಾರ್​ ನಿರ್ದೇಶನದ ಸಸ್ಪೆನ್ಸ್​ ಥ್ರಿಲ್ಲರ್​ ಜಂಟಲ್​ಮನ್​ಗೆ ಒಳ್ಳೆ ಪ್ರತಿಕ್ರಿಯೆ ಸಿಕ್ರು, ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಚಿತ್ರತಂಡದ ಸದಸ್ಯರು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯ ಕವರ್​​ ಪಿಕ್ಚರ್ ಮತ್ತು ಪ್ರೊಪೈಲ್​ ಪಿಕ್ಚರ್​​ನ ಬ್ಲ್ಯಾಕ್​ ಮಾಡಿ ವಿಭಿನ್ನವಾಗಿ ಪ್ರತಿಭಟಿಸುತ್ತಿದ್ದಾರೆ.

ಕನ್ನಡ ಪ್ರೇಕ್ಷಕರು ಮಾತ್ರವಲ್ಲ, ಸ್ಯಾಂಡಲ್​ವುಡ್​ ಸೆಲೆಬ್ರೆಟೀಸ್​​ ಜಂಟಲ್​​ಮನ್​​ ಜಾದೂ ಮೆಚ್ಚಿಕೊಂಡಿದ್ದಾರೆ. ಗುರುದೇಶ್ ಪಾಂಡೆ ಸಾರಥ್ಯ ಜಂಟಲ್​ಮನ್​​ ಚಿತ್ರಕ್ಕೆ ಹಿಂದಿ ಸಿನಿಮಾ ವಿಶ್ಲೇಷಕನ ರಿಯಲ್ ರಿವ್ಯೂ ಸಂತೋಷದ ಜೊತೆ ಆತ್ಮಸ್ಥೈರ್ಯವನ್ನು ತುಂಬಿದೆ. ಬಾಲಿವುಡ್​ ಸಿನಿಮಾಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ಲೇಸಿಸುವ ವಿಶ್ಲೇಷಕ ಜಂಟಲ್​ಮನ್ ಚಿತ್ರವನ್ನು ಕೊಂಡಾಡಿದ್ದಾನೆ.

ನಿರ್ದೇಶಕ ನಿರ್ಮಾಪಕನಾಗಿ ಒಬ್ಬ ನಿರ್ದೇಶಕನಿಗೆ ಅವಕಾಶ ಕೊಟ್ಟಿರುವ ಸಿನಿಮಾ ಜಂಟಲ್​ಮನ್. ಅವರವರ ವೈಯಕ್ತಿಕ ಕಷ್ಟ-ಸುಖ , ಲಾಭ-ನಷ್ಟಕ್ಕಿಂತ ಜಂಟಲ್ ಮನ್ ಚಿತ್ರಕ್ಕೆ ಸೂಪರ್​​​ ರೆಸ್ಪಾನ್ಸ್ ಇದೆ. ನೋಡಿದ ಮಂದಿ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಆದ್ರೆ ಜಂಟಲ್​ಮನ್ ಸಿನಿಮಾವನ್ನು ಮತ್ತಷ್ಟು ಮಗದಷ್ಟು ಕನ್ನಡಿಗರು ನೋಡುವ ಅಗತ್ಯ ಅನಿವಾರ್ಯತೆಯಿದೆ. ಪ್ರೇಕ್ಷಕನ ನಡಿಗೆ ಥಿಯೇಟರ್​​ ಕಡೆಗೆ ಆದ್ರೆ ಖಂಡಿತ ಕನ್ನಡ ಚಿತ್ರರಂಗ ಉಳಿಯುತ್ತೆ , ಬೆಟ್ಟದಂಗೆ ಬೆಳೆಯುತ್ತೆ. ತಪ್ಪದೇ ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ.
ಶ್ರೀಧರ್ ಶಿವಮೊಗ್ಗ _ ಎಂಟರ್​​ಟೈನ್ಮೆಂಟ್ ಬ್ಯೂರೋ_ಟಿವಿ5

Recommended For You

About the Author: user

Leave a Reply

Your email address will not be published. Required fields are marked *