ಮಿನಿಸ್ಟರ್ ಆದನಂತರ ರಮೇಶ್ ಜಾರಕಿಹೊಳಿ ಮೊದಲು ಮಾಡಿದ್ದು ಈ ಕೆಲಸ..!

ಬೆಂಗಳೂರು: ಜಲಸಂಪನ್ಮೂಲ ಸಚಿವರಾಗಿ ರಮೇಶ್ ಜಾರಕಿಹೊಳಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ವಾಸ್ತು ಪ್ರಕಾರ ಕಚೇರಿ ಬದಲಾವಣೆಗೆ ಜ್ಯೋತಿಷ್ಯರ ಮೊರೆ ಹೋಗಿದ್ದಾರೆ.

ಜ್ಯೋತಿಷಿಗಳ ಸಲಹೆಯಂತೆ ವಾಸ್ತುಪ್ರಕಾರ ಕೋಣೆ ಬದಲಾವಣೆ ಮಾಡಿದ್ದು, ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ನಂ 342/342(ಎ)ಕೊಠಡಿಗಳನ್ನ ಜಾರಕಿಹೊಳಿ ನವೀಕರಣಗೊಳಿಸಿದ್ದಾರೆ.

ಇವತ್ತು ಶುಕ್ರವಾರವಾಗಿದ್ದು, ಲಕ್ಷ್ಮಿ ದಿನವಾಗಿದ್ದರಿಂದ ತಮ್ಮ ಕಚೇರಿಯಲ್ಲಿ ಜಾರಕಿಹೊಳಿ ಪೂಜೆ ಇರಿಸಿಕೊಂಡಿದ್ದು, ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿ, ಕಚೇರಿಗೆ ಕಾಲಿರಿಸಿದ್ದಾರೆ.

ಇನ್ನು ರಾಜೀನಾಮೆ ನೀಡಿದ ನಂತರ ರಮೇಶ್ ಜಾರಕಿಹೊಳಿ ಟೆಂಪಲ್‌ರನ್ ಮಾಡುತ್ತಿದ್ದು, ಸುಪ್ರೀಂ ತೀರ್ಪು ಬರುವವರೆಗೆ, ಬಂದ ಮೇಲೂ ರಮೇಶ್ ದೇಗುಲಗಳಿಗೆ ಭೇಟಿ ನೀಡಿದ್ದರು. ಕಾಮಾಕ್ಯ, ತಿರುಪತಿ, ಚಾಮುಂಡೇಶ್ವರಿ, ಕೊಲ್ಹಾಪುರ ಮಹಾಲಕ್ಷ್ಮಿ ಸೇರಿ ಹಲವು ದೇಗುಲಗಳಿಗೆ ಜಾರಕಿಹೊಳಿ ಭೇಟಿ ನೀಡಿದ್ದರು.

Recommended For You

About the Author: user

Leave a Reply

Your email address will not be published. Required fields are marked *