ಹಿರಿಯ ಕಲಾವಿದರ ಅಭಿನಯಕ್ಕೆ ಪ್ರೇಕ್ಷಕರು ಏನಂದ್ರು..? ಹೇಗಿದೆ ಕಾಮಿಡಿ ಡಾನ್​ಗಳ ಕಾದಾಟ..?

ಯಾರಿಗೆ ಅದ್ಯಾವಾಗ ಅದೃಷ್ಟದ ಕಲಾ ರೇಖೆ ಮೂಡುತ್ತೋ ಗೊತ್ತಿಲ್ಲ. ತಿಥಿ ಸಿನಿಮಾದ ಮೂಲಕ 85 ವರ್ಷ ಗಡ್ಡಪ್ಪನವರಿಗೆ ಹಾಗೂ 97 ವರ್ಷದ ಸೆಂಚುರಿ ಗೌಡರಿಗೆ ಆ ಅದೃಷ್ಟದ ಕಲಾ ರೇಖೆ ಹಣೆಯಲ್ಲಿ ಮೂಡಿದೆ. ಮಗು ಮನಸಿನ ಹಿರಿಯ ಕಲಾವಿದರು ಹೀರೋ ಮತ್ತು ವಿಲನ್​ಗಳಾಗಿ ಬೆಳ್ಳಿತೆರೆಯನ್ನು ಗಡ್ಡಪ್ಪನ ಸರ್ಕಲ್​​ ಚಿತ್ರದ ಮೂಲಕ ಬೆಳಗುತ್ತಿದ್ದಾರೆ.

ಸಿನಿಮಾ ಹೇಗಿದೆ , ಸಿನಿಮಾದ ಪ್ಲಸ್ ಏನ್ ಮೈನಸ್ ಏನು ಅನ್ನೋದನ್ನು ಕೂಡಿ ಕಳೆಯೋದಕ್ಕಿಂತ ಈ ಹಿರಿ ಹಿರಿ ವಯಸ್ಸಿನಲ್ಲಿ ನಟನೆಯ ಮಾಡಿದ್ದಾರಲ್ಲ ಅದಕ್ಕೆ ಭೇಷ್ ಅನಲ್ಲೇ ಬೇಕು. ಬಿ.ಆರ್​​.ಕೇಶವ್​​ ಕಲ್ಪನೆಯ ಕಾಮಿಡಿ ಎಂಟರ್​ಟೈನರ್ ಮೂವಿ ಗಡ್ಡಪ್ಪನ ಸರ್ಕಲ್ ಚಿತ್ರದಲ್ಲಿ ಒಳ್ಳೆಯ ಅಭಿನಯ ತೋರಿದ್ದಾರೆ ಗಡ್ಡಪ್ಪ ಮತ್ತು ಸೆಂಚುರಿ ಗೌಡ.

ತಿಥಿ ಮೂಲಕ ಕರುನಾಡಿನ ಮನೆ ಮಾತಾದವರು ಗಡ್ಡಪ್ಪ ಮತ್ತು ಸೆಂಚುರಿ ಗೌಡ್ರು. ತಿಥಿಯ ನಂತರ ಎರಡ್ಮೂರು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ತೆರೆ ಕೂಡ ಹಂಚಿಕೊಂಡಿದ್ರು. ಆದರೆ ಈಗ ನೇರಾ ನೇರ ಎದುರಾಳಿ ಪಾತ್ರಗಳಲ್ಲಿ ಸ್ಯಾಂಡಲ್​​ವುಡ್ ಗ್ರ್ಯಾಂಡ್ ಫಾದರ್ಸ್ ಡಾನ್​​ಗಳಾಗಿ ಅಭಿನಯಿಸದ್ದಾರೆ.

ಔಟ್ ಆಂಡ್ ಔಟ್ ಕಾಮಿಡಿ ಎಂಟರ್​​ಟೈನರ್​ ಚಿತ್ರಲ್ಲಿ ಗಡ್ಡಪ್ಪ , ಸೆಂಚುರಿ ಗೌಡರ ಜೊತೆಗೆ ತಿಥಿ ಖ್ಯಾತಿಯ ವಿಲೇಜ್ ರೋಮಿಯೋ ಅಭಿ, ಸುಕನ್ಯಾ, ವಿಶ್ವಾಸ್ ಹಾಗೂ ಕನ್ನಡಿಗ ಯೋಗಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಸ್ಯಾಂಡಲ್​ವುಡ್​​ ನಲ್ಲಿ ವಾರಕ್ಕೆ ಡಜನ್ಗಟ್ಟಲೇ ಸಿನಿಮಾಗಳು ತೆರೆಕಾಣುತ್ತಿರುವ ಈ ಟೈಮ್​​ನಲ್ಲಿ ಗಡ್ಡಪ್ಪ ಮತ್ತು ಸೆಂಚುರಿ ಗೌಡರ ಹಿರಿ ಪ್ರಯತ್ನಕ್ಕೆ ಪ್ರೇಕ್ಷಕ ಪ್ರಭು ಮುಂದಿನ ದಿನಗಳಲ್ಲಿ ಹೇಗೆ ಸ್ಪಂದಿಸುತ್ತಾನೋ ಕಾದು ನೋಡಬೇಕು.

Recommended For You

About the Author: user

Leave a Reply

Your email address will not be published. Required fields are marked *