ಮದುವೆ ಮಾಡಿಸಿ ‘ಪ್ರೇಮಿಗಳ ದಿನಾಚರಣೆ’ ಆಚರಿಸಿದ ವಾಟಾಳ್​ ನಾಗರಾಜ್​

ಬೆಂಗಳೂರು: ಇಂದು ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಕನ್ನಡ ಒಕ್ಕೂಟದಿಂದ ವಿಶಿಷ್ಟವಾಗಿ ಈ ದಿನವನ್ನು ಆಚರಣೆ ಮಾಡಲಾಯಿತು. ಸಂಘಟನೆ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕಬ್ಬನ್ ಪಾರ್ಕ್​ನಲ್ಲಿರುವ ಟೆನ್ನಿಸ್ ಕೋರ್ಟ್ ಪ್ರಾಣಿಗಳಿಗೆ ಮದುವೆ ಮಾಡಿಸುವ ಮೂಲಕ ಸಂಭ್ರಮಿಸಲಾಯಿತು.

ಒಂದು ಗಂಡು ಮತ್ತೊಂದು ಹೆಣ್ಣು ಕುದುರೆಗಳಿಗೆ ಮದುವೆ ಮಾಡಿಸುವ ಮೂಲಕ ವ್ಯಾಲೆಂಟೆನ್ಸ್ ಡೇ ಸೆಲೆಬ್ರೇಷನ್ ಮಾಡಲಾಗಿದ್ದು, ಮದುವೆಯ ವೇಳೆ ವಾದ್ಯ-ಮೇಳಗಳು ಸಹ ಇದ್ದವು. ಅಷ್ಟೇ ಅಲ್ಲದೆ, ಶಾಸ್ತ್ರೋಪ್ತವಾಗಿ ಮದುವೆಯನ್ನು ನಡೆಸಿಕೊಡಲಾಯಿತು.

ಅಂತೆಯೇ ನವ ವಧು -ವರರೊಂದಿಗೆ (ಪ್ರಾಣಿಗಳ) ಮೆರವಣಿಗೆ ನಡೆಸಿದ ವಾಟಾಳ್ ನಾಗರಾಜ್ ಅವರು, ಬೆಳ್ಳಿ ರಥದಲ್ಲಿ ಕಬ್ಬನ್​ ಪಾರ್ಕ್​ನಿಂದ ಎಂಜಿ (ಮಹಾತ್ಮ ಗಾಂಧಿ) ರಸ್ತೆ ವರೆಗೂ ಮೆರವಣಿಗೆಯನ್ನು ಮಾಡಿದರು.

ಇದೇ ವೇಳೆ ಮಾತನಾಡಿದ ಅವರು, ಪ್ರೇಮಿಗಳ ದಿನದಂದು ರಜೆ ನೀಡಬೇಕು. ಪ್ರೇಮಿಗಳಿಗೆ ಕೇಂದ್ರ 1 ಲಕ್ಷ ಮತ್ತು ರಾಜ್ಯ ಸರ್ಕಾರದಿಂದ 50 ಸಾವಿರ ರೂಪಾಯಿ ನೀಡುವಂತೆ ಮನವಿ ಮಾಡಿದರು.

ಇನ್ನು ಪ್ರೇಮಿಗಳ ದಿನಾಚರಣೆಯನ್ನು ಯಾರೂ ವಿರೋಧಿಸಬಾರದು, ಪ್ರೀತಿ ಮಾಡೋದು ತಪ್ಪಲ್ಲ, ಎಲ್ಲರಿಗೂ ಸ್ವಾತಂತ್ರ್ಯ ಇದೆ. ದ್ವೇಷಿಸುವವರು ನಮ್ಮ ಜೊತೆಗೂಡಿ ಈ ವಿನೂತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

Recommended For You

About the Author: user

Leave a Reply

Your email address will not be published. Required fields are marked *