‘ಅಪ್ಪಟ ಮಂಡ್ಯದ ದೇಸಿತನ ‘ಆನೆಬಲ’ ಚಿತ್ರದಲ್ಲಿದೆ’

ಬೆಂಗಳೂರು: ಹಳ್ಳಿಯ ಸೊಗರಿನ ಬಗ್ಗೆ ಅಲ್ಲಿನ ರಾಗಿ ಮುದ್ದೆ ಬಗ್ಗೆ ತಾತ್ಸಾರ ಇರುವವರಿಗೆ ಆನೆಬಲ ಬೇರೆಯದ್ದೇ ಅನುಭವ ನೀಡುತ್ತದೆ’ ಎಂದು ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಆನೆಬಲ’ ಚಿತ್ರದ ಟ್ರೈಲರ್​ ಬಿಡುಗಡೆಗೊಳಿಸಿದ ಮಾತನಾಡಿದ ಅವರು, ಸ್ಯಾಂಡಲ್​ವುಡ್​ನಲ್ಲಿ ಮುಂಗಾರು ಮಳೆ ಸಿನಿಮಾ ಮಾಡುವಾಗ ನಾನು ಹೊಸಬ ಆದರೆ, ನಮ್ಮ ಜನ ಆ ಚಿತ್ರಕ್ಕೆ ಉತ್ತಮ ಬೆಂಬಲ ನೀಡಿ ದೊಡ್ಡ ಗೆಲುವನ್ನು ತಂದುಕೊಟ್ಟರು. ಈಗ ‘ಆನೆಬಲ’ಕ್ಕೂ ಅಂಥದ್ದೇ ಬೆಂಬಲ ನೀಡಲಿ. ಈ ಚಿತ್ರದ ಟ್ರೈಲರ್​ ಮತ್ತು ಹಾಡುಗಳನ್ನು ನೋಡುತ್ತಿದ್ದರೆ ನಮ್ಮ ಹಳ್ಳಿಗಳ ಕಥೆ ಹೇಳಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಸೂನಗಹಳ್ಳಿ ರಾಜು, ಪಕ್ಕಾ ನಾಟಿ ಶೈಲಿಯಲ್ಲಿ ಸಿನಿಮಾ ಮಾಡಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಚಿತ್ರ ತಂಡಕ್ಕೆ ಶುಭಹಾರೈಸಿದರು.

ತದನಂತರ ಈ ಚಿತ್ರ ಬಗ್ಗೆ ಮಾತನಾಡಿದ ನಿರ್ಮಾಪಕ ವೇಣುಗೋಪಾಲ್​ ಅವರು, ಗ್ರಾಮೀಣ ಸೊಗಡಿನ ಚಿತ್ರ ಮಾಡಬೇಕು ಎಂದು ಆನೆಬಲ ಚಿತ್ರವನ್ನು ನಿರ್ವಿುಸಿದ್ದೇನೆ. ಹಾಸ್ಯದ ಜತೆಗೆ ಕಲೆ-ಸಂಸ್ಕೃತಿಯೂ ಚಿತ್ರದಲ್ಲಿದೆ. ಈ ಚಿತ್ರದ ಹಾಡುಗಳನ್ನು ಕೇಳಿದ ಕವಿ ಎಚ್.ಎಸ್.ವೆಂಕಟೇಶ್​ ಮೂರ್ತಿ ಮೆಚ್ಚುಗೆ ಮಾತುಗಳನ್ನು ತಿಳಿಸಿದಲ್ಲದೇ ಬಹಳ ದಿನ ಉಳಿಯುತ್ತವೆ ಎಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಅಪ್ಪಟ ಮಂಡ್ಯದ ದೇಸಿತನ ಆನೆಬಲದಲ್ಲಿದೆ. ಇದು ನನ್ನ ಊರಿನ ಚಿತ್ರವಾದ್ದರಿಂದ ನನಗೆ ಬಹಳ ಹತ್ತಿರದ ಸಿನಿಮಾ’ ಎಂದು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಹರ್ಷ ವ್ಯಕ್ತಪಡಿಸಿದರು.

ಇನ್ನು ಈ ಚಿತ್ರದ ಮೂಲಕ ಕಲಾ ನಿರ್ದೇಶಕ ಈಶ್ವರಿ ಕುಮಾರ್ ಅವರ ಪುತ್ರ ಸಾಗರ್ ಚಿತ್ರರಂಗಕ್ಕೆ ನಾಯಕರಾಗಿ ಎಂಟ್ರಿ ಆಗಿದ್ದಾರೆ. ತಮ್ಮ ಮೊದಲ ಸಿನಿಮಾದ ಬಗ್ಗೆ ಮಾತನಾಡಿದ ಸಾಗರ್, ‘ಈ ಚಿತ್ರದಲ್ಲಿ ಟೆಕ್ನಿಷಿಯನ್​ಗಳೇ ಹೀರೋಗಳು. ಇನ್ನು ಕೋ-ಡೈರೆಕ್ಟರ್ ಶಿವು ಅವರಿಲ್ಲದಿದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ. ಕಳೆದು ಹೋಗುತ್ತಿರುವ ಸಾಕಷ್ಟು ಅಂಶಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಫೆ. 21ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ ಎಲ್ಲರೂ ನೋಡಿ’ ಎಂದು ಹೇಳಿದರು

Recommended For You

About the Author: user

Leave a Reply

Your email address will not be published. Required fields are marked *