Top

ರಾಷ್ಟ್ರಪತಿಯಿಂದ ಸಾಮಾನ್ಯ ವ್ಯಕ್ತಿಗೂ ಕಾನೂನು ಒಂದೇ - ಲಕ್ಷ್ಮಣ ಸವದಿ

ರಾಷ್ಟ್ರಪತಿಯಿಂದ ಸಾಮಾನ್ಯ ವ್ಯಕ್ತಿಗೂ ಕಾನೂನು ಒಂದೇ - ಲಕ್ಷ್ಮಣ ಸವದಿ
X

ಹುಬ್ಬಳ್ಳಿ: ಆನಂದ ಸಿಂಗ್ ಗೆ ಅರಣ್ಯ ಖಾತೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಲಕ್ಷ್ಮಣ ಸವದಿ ಆನಂದ್ ಸಿಂಗ್ ಪರ ಬ್ಯಾಟಿಂಗ್ ಮಾಡಿದ್ದಾರೆ.‌

ಹುಬ್ಬಳ್ಳಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸವದಿ, ನಾನು ಕೂಡ ಅದರ ಬಗ್ಗೆ ಆನಂದ ಸಿಂಗ್ ಜೊತೆ ಚರ್ಚೆ ಮಾಡಿದ್ದೇನೆ. ಅವರ ಮೇಲೆ ಅನೇಕ ಆರೋಪಗಳಿವೆ. ಆದರೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಕೇಸ್‌ಗಳಿಲ್ಲ ಅಂತಾ ಹೇಳಿದರು.

ಇನ್ನು ಬಳ್ಳಾರಿ ಕಾರು ಅಪಘಾತ ಪ್ರಕರಣದ ವಿಚಾರದ ಬಗ್ಗೆ ತಮಗೆ ಮಾಹಿತಿ ಇಲ್ಲ ಅಂದ ಅವರು, ಆ ಬಗ್ಗೆ ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡುತ್ತಾರೆ. ಕಾನೂನು ಎಲ್ಲರಿಗೂ ಒಂದೇ‌. ರಾಷ್ಟ್ರಪತಿಯಿಂದ ಸಾಮಾನ್ಯ ವ್ಯಕ್ತಿಗೂ ಕಾನೂನು ಒಂದೇ ಯಾರು ತಪ್ಪು ಮಾಡಿದರೂ ಕ್ರಮ‌ ತೆಗೆದುಕೊಳ್ಳುತ್ತದೆ ಎಂದರು.

ಇನ್ನು ಉತ್ತರ ಕರ್ನಾಟಕ ಅಂದರೇ ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲ ಅನ್ನೋ ಶಾಸಕ ಯತ್ನಾಳ ಹೇಳಿಕೆಯನ್ನು ಸಮರ್ಥಿಸಿದ ಸವದಿ, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಈ ಭಾಗದಲ್ಲಿ ಔದ್ಯೋಗಿಕ ಸಮ್ಮೇಳನ ಆಗುತ್ತಿದೆ. ಹೊಸ ಕಾರ್ಖಾನೆಗಳು ಬರಬೇಕು. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು.‌ ಎಲ್ಲರೂ ಸೇರಿ ಅಭಿವೃದ್ಧಿ ಮಾಡುತ್ತೇವೆ ಅಂದರು.‌

ಇನ್ನು ಎಂ.ಎಲ್.ಸಿ ಎಲೆಕ್ಷನ್ ಗೆ ಮೈತ್ರಿ ಅಭ್ಯರ್ಥಿ ಹಾಕಿದ ವಿಚಾರದ ಬಗೆಗಿನ ಪ್ರಶ್ನೆಗೆ, ಎರಡು ಗಂಟೆಯಲ್ಲಿ ಫಲಿತಾಂಶ ಬರುತ್ತದೆ. ಆಮೇಲೆ ಅದರ ಬಗ್ಗೆ ಚರ್ಚೆ ಮಾತಾಡೋಣ ಅಂತಾ ಹೇಳಿದರು.

ಇನ್ನು ಉಮೇಶ ಕತ್ತಿ‌ ಕೆಲವೇ ದಿನಗಳಲ್ಲಿ ಸಚಿವರಾಗುತ್ತಾರೆ. ಉನ್ನತ ಖಾತೆಯನ್ನು ಅವರಿಗೆ ನೀಡಲಾಗುತ್ತದೆ. ನಾವೆಲ್ಲರೂ ಒಟ್ಟಾಗಿ ಸೇರಿ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುತ್ತೇವೆ ಅಂತಾನೂ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

Next Story

RELATED STORIES