Top

2020ರ ಐಪಿಎಲ್​ಗೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದೇಯಾ ಆರ್​ಸಿಬಿ.?

2020ರ ಐಪಿಎಲ್​ಗೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದೇಯಾ ಆರ್​ಸಿಬಿ.?
X

ಬೆಂಗಳೂರು: ಕಲ್ಲರ್ ಫುಲ್ ಟೂರ್ನಿ ಐಪಿಎಲ್​ನ ಬಲಿಷ್ಠ ತಂಡಗಳಲ್ಲೊಂದಾದ ಆರ್​ಸಿಬಿ ಫ್ರಾಂಚೈಸಿ ಕ್ರಿಕೆಟ್​ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಬಲಿಷ್ಠ ತಂಡೆವೆನಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ 13ನೇ ಸೀಸನ್​ನಲ್ಲಿ ಪ್ರಶಸ್ತಿ ಗೆಲ್ಲಲ್ಲೇಬೇಕೆಂದು ತೊಡೆ ತಟ್ಟಿ ಕಣಕ್ಕಿಳಿಯುತ್ತಿದೆ. ಇದಕ್ಕಾಗಿ ಬಲಿಷ್ಠ ತಂಡವನ್ನೆ ಕಟ್ಟಿಕೊಂಡು ಕಣಕ್ಕಿಳಿಯುತ್ತಿದೆ.

ಇತ್ತೀಚೆಗಷ್ಟೆ ಆರ್​​ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರು ಹೆಸರನ್ನು ಕಿತ್ತುಹಾಕಿ ಕೇವಲ ರಾಯಲ್ ಚಾಲೆಂಜರ್ಸ್​ ಎಂದು ಬರೆದುಕೊಂಡಿತ್ತು. ಇದರಿಂದ ರೊಚ್ಚಿಗೆದಿದ್ದ ಅಭಿಮಾನಿಗಳು ಫ್ರಾಂಚೈಸಿ ವಿರುದ್ಧ ಕಿಡಿಕಾರಿದ್ದರು. ಆದರೆ, ಇದೀಗ ಆರ್​ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟ್ಟರ್, ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಅಕೌಂಟ್​​ಗಳಲ್ಲಿನ ಆರ್​ಸಿಬಿ ಲೋಗೋ, ಕವರ್ ಫೋಟೋ ಡಿಲೀಟ್​ ಮಾಡಿದೆ.

ಇದನ್ನ ನೋಡಿದ ಅಭಿಮಾನಿಗಳು ತಲೆಗೆ ಹುಳ ಬಿಟ್ಟುಕೊಂಡಿದ್ದರು, ಅಲ್ಲದೆ ಇದುವರೆಗೂ ಪೋಸ್ಟ್ ಮಾಡಿದ್ದ ಎಲ್ಲಾ ಪೋಟೋ​ಗಳನ್ನ ಡಿಲೀಟ್ ಮಾಡಿದೆ. ಈ ನಡೆ ಆರ್​ಸಿಬಿ ತಂಡದ ಆಟಗಾರರು ಸೇರಿದಂತೆ ಆರ್​ಸಿಬಿ ಡೈ ಆರ್ಡ್​ ಫ್ಯಾನ್ಸ್​ಗೂ ಅಚ್ಚರಿ ಮೂಡಿಸಿದೆ.

ಆರ್​ಸಿಬಿ ಫ್ರಾಂಚೈಸಿ ಸೋಶಿಯಲ್ ಮೀಡಿಯಾದಲ್ಲಿ ತನ್ನ ಲೋಗೋ ತೆಗೆದುಹಾಕಿರುವುದು ಹಾಗೂ ಪೋಸ್ಟ್‌ಗಳನ್ನ ಡಿಲೀಟ್​ ಮಾಡಿರುವುದು ಸ್ವತಃ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಗಮನಕ್ಕೂ ಸಹ ಬಂದಿಲ್ಲ. ಈ ಬಗ್ಗೆ ಸ್ವತಃ ಕೊಹ್ಲಿಯೇ ಟ್ವಿಟರ್​ನಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೇ ಬಗ್ಗೆ ಆರ್​ಸಿಬಿ ಆಟಗಾರ ಎಬಿಡಿ ವಿಲಿಯರ್ಸ್, ಯುಜುವೇಂದ್ರ​ ಚಾಹಲ್​​ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿರಾಟ್​ ತಮ್ಮ ಟ್ವೀಟರ್​ನಲ್ಲಿ ನಾಯಕನಿಗೆ ಮಾಹಿತಿ ನೀಡದೆಯೇ ಪೋಸ್ಟ್‌ಗಳು ಕಣ್ಮರೆಯಾಗಿವೆ. ಏನಾದರೂ ಸಹಾಯ ಬೇಕಾ? ಎಂದಿದ್ದಾರೆ.

ಅಲ್ಲದೇ, ಎಬಿಡಿ ಕೂಡ ಟ್ವೀಟ್​ ಮೂಲಕ ಆರ್​​ಸಿಬಿ ಸಾಮಾಜಿಕ ಆಕೌಂಟ್​​ಗಳು ಏನಾಯಿತು? ನನಗೆ ಭರವಸೆ ಇದೆ. ಇದು ಕೇವಲ ಸ್ಟ್ರಾಟರ್ಜಿ ಹಾಗೂ ಬ್ರೇಕ್ ಎಂದಿದ್ದಾರೆ.

ಅಂತೆಯೇ ಆರ್​ಸಿಬಿಯ ಸಹ ಆಟಗಾರ ಚಹಾಲ್​ ಕೂಡ, ಆರ್​ಸಿಬಿಯಿಂದ ಇದು ಯಾವ ರೀತಿಯ ಗೂಗ್ಲಿ? ಇನ್​ಸ್ಟಾಗ್ರಾಂನ ಪ್ರೊಫೈಲ್ ಫೋಟೋ ಹಾಗೂ ಪೋಸ್ಟ್​ಗಳು ಎಲ್ಲಿ ಹೋದವು? ಎಂದಿದ್ದಾರೆ.

ಟ್ವಿಟರ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಅಕೌಂಟ್​ಗಳಲ್ಲಿನ ಆರ್​ಸಿಬಿ ಲೋಗೋ, ಕವರ್ ಫೋಟೋ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ ಆರ್‌ಸಿಬಿ ಫ್ರಾಂಚೈಸಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಅದರಲ್ಲೂ ಪ್ರಮುಖವಾಗಿ ಈ ವಿಚಾರ ನಾಯಕ ಹಾಗೂ ತಂಡದ ನಿರ್ದೇಶಕರ ಗಮನಕ್ಕೆ ಬಾರದಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಪ್ರತಿ ಬಾರಿ ಈ ಸಲ ಕಪ್ ನಮ್ದೇ ಅಂತ ಕಣಕ್ಕಿಳಿಯವ ಆರ್​ಸಿಬಿ ಇಲ್ಲಿಯವೆರೆಗೆ ಪ್ರಶಸ್ತಿಯನ್ನ ಗೆಲ್ಲೋಕೆ ಆಗಿಲ್ಲ. ಕಿಂಗ್ ಕೊಹ್ಲಿಯೇ ಸತತ 7 ಬಾರಿ ನಾಯಕನಾಗಿದ್ದರು. ಫೈನಲ್​​​ಗೇರಿದ್ದೆ ಆರ್​ಸಿಬಿಯ ಸಾಧನೆ ಆಗಿತ್ತು. ಈ ಬಾರಿ ಕಪ್​​ ಗೆಲ್ಲಲು ಪಣತೊಟ್ಟಿರುವ ಆರ್​ಸಿಬಿ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನೇ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಈ ಮೂಲಕ ಹಲವು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಅದರಲ್ಲೂ ತಂಡದ ಪ್ರಯೋಜಕರು ಕೂಡ ಬದಲಾಗಿರುವ ಕಾರಣ, ಆರ್​ಸಿಬಿ ತಂಡದ ಜರ್ಸಿ ಹಾಗೂ ಲೋಗೋ ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಆರ್​ಸಿಬಿಯ ನ್ಯೂ ಜೆರ್ಸಿ ಎಂದು ಒಂದು ಪೋಟೋ ವೈರಲ್​ ಆಗುತ್ತಿದೆ.

ಐಪಿಎಲ್ ಹರಾಜಿಗೂ ಮುನ್ನ ಟ್ವಿಟ್ಟರ್​ನಲ್ಲಿ ಬೆಂಗಳೂರು ಎಂಬ ಹೆಸರನ್ನ ತೆಗೆದಿದ್ದ ಆರ್​ಸಿಬಿ ಫ್ರಾಂಚೈಸಿ Bangalore ಎಂಬ ಪದದ ಬದಲಾಗಿ Bengaluru ಎಂದು ಹೆಸರು ಬದಲಾಯಿಸುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಅಧಿಕೃತವಾಗಿ ಈ ಹೆಸರು ಇಂದೇ ಬದಲಾಗುವ ಸಾಧ್ಯತೆ ಇದೆ. ಇದರಿಂದ ಡಿಲೀಟ್​ ಆಗಿರುವ ಕವರ್​ ಪೋಟೋ ಇಂದು ಅಪ್​ಲೋಡ್​ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

Next Story

RELATED STORIES