‘ಪಾಪ ಕುಮಟಳ್ಳಿ ಒಳ್ಳೆಯ ಮನುಷ್ಯ, ಮಂತ್ರಿ ಮಾಡಬೇಕಿತ್ತು. ಅದೇಕೆ ಸಿಗಲಿಲ್ವೋ ಗೊತ್ತಿಲ್ಲ’

ಬೆಂಗಳೂರು: ಬೆಂಗಳೂರಿನಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಈಗ ನಾನು ಇಲಾಖೆ ಚಾರ್ಜ್ ತೆಗೆದುಕೊಂಡಿದ್ದೇನೆ. ಇಂದು ಮಧ್ಯಾಹ್ನ ಅಧಿಕಾರಿಗಳ ಸಭೆ ಕರೆದಿದ್ದೇನೆ. ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಇನ್ನೆರಡು ದಿನದಲ್ಲಿ ಇಲಾಖೆ ಬಗ್ಗೆ ನಿಮ್ಮ ಗಮನಕ್ಕೆ ತರ್ತೇನೆ ಎಂದಿದ್ದಾರೆ.

ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಾರಕಿಹೊಳಿ, ಪಾಪ ಒಳ್ಳೆಯ ಮನುಷ್ಯ, ಮಂತ್ರಿ ಮಾಡಬೇಕಿತ್ತು. ಅದೇಕೆ ಸಿಗಲಿಲ್ವೋ ಗೊತ್ತಿಲ್ಲ. ಮುಂದೆ ಅವರಿಗೆ ಅವಕಾಶ ಸಿಗಲಿದೆ ಎಂದಿದ್ದಾರೆ.

ಸತೀಶ್ ಜಾರಕಿಹೊಳಿ ನನ್ನ ಮೇಲೆ ನಿಯಂತ್ರಣ ಇಡಬೇಕು ಅಂದಿದ್ದಾರೆ. ನಾನು ಆರು ಭಾರಿ ಶಾಸಕನಾಗಿದ್ದೇನೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಶಾಸಕನಾಗಿದ್ದೇನೆ. ನಾನು ಅಮಿತ್ ಶಾ,ಮೋದಿಗಿಂತ ದೊಡ್ಡವನಲ್ಲ. ಬಿಜೆಪಿ ಸಿದ್ಧಾಂತ ನಂಬಿ ಕೆಲಸ ಮಾಡ್ತೇನೆ. ಉತ್ತಮ ಕೆಲಸ ಮಾಡಿ ನಾನು ತೋರಿಸ್ತೇನೆ. ಅಸೂಯೆ ಪಡದಿದ್ದರೆ ಅವನಿಗೂ ಒಳ್ಳೆಯದಾಗುತ್ತೆ ಎಂದಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *