‘ರೈತರ ಪರ ಕೆಲಸ ಮಾಡಿ ರೈತರ ಕಣ್ಣೀರು ಒರೆಸುವ ಕೆಲಸ ಮಾಡ್ತೀನಿ’

ಚಿತ್ರದುರ್ಗ: ಹಿರಿಯೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿದ್ದು, ಹಿರಿಯೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ದಿನಗಳನ್ನು ಪಾಟೀಲ್ ನೆನೆದಿದ್ದಾರೆ.

ಈ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದಾಗ, ರೌಡಿಗಳಿಗೆ ಮತ್ತು ಕಳ್ಳರಿಗೆ ಕಠಿಣವಾಗಿದ್ದೆ, ಒಳ್ಳೆಯವರಿಗೆ ಒಳ್ಳೆಯವಾನಾಗಿದ್ದೆ. ಒಮ್ಮೆ ಹಿರಿಯೂರಿನಲ್ಲಿ ನಾಟಕದಲ್ಲಿ ಅಭಿನಯಿಸಿದ್ದೆ ಎಂದು ತಮ್ಮ ಹಳೆಯ ದಿನಗಳನ್ನು ನೆನೆದಿದ್ದಾರೆ.

ಮಂತ್ರಿಯಾಗಿ 3 ದಿನ ಆಗಿದೆ. ಇಲಾಖೆಯನ್ನ ಅರ್ಥ ಮಾಡಿಕೊಳ್ಳಬೇಕಿದೆ . ಮೂರು ದಿನಗಳಿಂದ ಸಿಎಂ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ರೈತರ ಅನುಕೂಲಕ್ಕಾಗಿ ರಾಜ್ಯದ ರೈತರ ಜೊತೆ ಚರ್ಚಿಸಿದ್ದೇನೆ. ನಾನು ರೈತರ ಕುಟುಂಬದಿಂದ ಬಂದವನು. ರೈತರ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದೇನೆ ಮುಂದಿನ ದಿನಗಳಲ್ಲಿ ಸ್ಪಂದನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅಲ್ಲದೇ, ರೈತರ ಹೋರಾಟದಲ್ಲಿ 9 ದಿನಗಳ ಕಾಲ ಜೈಲಿನಲಿದ್ದೆ. ನನಗೆ ಅರಣ್ಯ ಇಲಾಖೆ ಖಾತೆ ಕೊಟ್ಟಿದ್ದರು. ನನಗೆ ಜನರ ಜೊತೆ ಇರುವ ಖಾತೆ ಕೊಡಿ ಎಂದಿದ್ದೆ, ಅದಕ್ಕೆ ಕೃಷಿ ಖಾತೆ ಕೊಟ್ಟಿದ್ದಾರೆ. ರೈತರ ಸಮಸ್ಯೆಯನ್ನು ಬಗೆಹರಿಸಲು ಸಿಎಂ ಬಳಿ ಕೃಷಿ ಖಾತೆ ಪಡೆದುಕೊಂಡು ಬಂದಿದ್ದೇನೆ. ರಾಜ್ಯದ್ಯಾಂತ ಪ್ರವಾಸ ಮಾಡಿ, ರೈತರ ಸಮಸ್ಯೆ ಬಗೆಹರಿಸುತ್ತೇನೆ. ರೈತರ ಪರ ಕೆಲಸ ಮಾಡಿ ರೈತರ ಕಣ್ಣೀರು ಒರೆಸುವ ಕೆಲಸ ಮಾಡ್ತೀನಿ ಎಂದು ಬಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *