ಲಿಪ್​​ ಲಾಕ್​ ಮಾಡಿ ಎಲ್ಲರ ಹುಬ್ಬೇರಿಸಿದ ‘ಡಿಂಪಲ್‌ ಕ್ವೀನ್‌’ ರಚಿತಾ ರಾಮ್‌..?

ದಿ ವಿಲನ್​ ಗುಂಗಿನಿಂದ ಹೊರ ಬಂದಿರೋ ಜೋಗಿ ಪ್ರೇಮ್, ಮತ್ತೆ ಲವ್​ ಸ್ಟೋರಿ ಮೊರೆ ಹೋಗಿದ್ದಾರೆ. ಬಾವಮೈದುನ ರಾಣಾನ ಹೀರೋ ಮಾಡಿ ಏಕ್​​ ಲವ್​ ಯಾ ಅನ್ನೋ ರೊಮ್ಯಾಂಟಿಕ್​ ಆ್ಯಕ್ಷನ್​ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ವ್ಯಾಲಂಟೇನ್ಸ್​ ಡೇ ಸ್ಪೆಷಲ್ಲಾಗಿ ಸಿನಿಮಾ ಟೀಸರ್​​ ರಿಲೀಸ್​​ ಆಗಿದ್ದು, ರಚ್ಚು​ ಬೋಲ್ಡ್​ ಅವತಾರ ನೋಡಿದವರು ದಂಗಾಗಿದ್ದಾರೆ.

ಜೋಗಿ ಪ್ರೇಮ್​​ ಬಹಳ ವರ್ಷಗಳ ನಂತರ ಲವ್​ ಸ್ಟೋರಿ ಹೇಳೊಕ್ಕೆ ಬರ್ತಿದ್ದು, ಟೀಸರ್​​ ಮೂಲಕ ಸೆನ್ಸೇಷನ್​ ಕ್ರಿಯೇಟ್ ಮಾಡಿದ್ದಾರೆ. ಇವತ್ತಿನ ಜಮಾನಕ್ಕೆ ಪ್ರೇಮ್​​ ಅಪ್​ಡೇಟ್​ ಆಗಿರೋದು ಗೊತ್ತಾಗ್ತಿದ್ದು, ಬಹಳ ವಿಭಿನ್ನ ಕಥೆಯನ್ನ ಹೇಳೋ ಪ್ರಯತ್ನ ಮಾಡ್ತಿದ್ದಾರೆ ಅನ್ನಿಸ್ತಿದೆ. ಮೊದಲ ಬಾರಿಗೆ ರಾಣಾ ಹೀರೋ ಆಗಿ ಮಿಂಚಿದ್ದು, ರೀಷ್ಮ ಮತ್ತು ರಚಿತಾ ರಾಮ್​ ನಾಯಕಿಯರಾಗಿ ಸ್ಕ್ರೀನ್​ ಶೇರ್​ ಮಾಡ್ಕೊಂಡಿದ್ದಾರೆ.

ಚಿತ್ರಕ್ಕೆ ಪ್ರೇಮ್​​ ಆ್ಯಕ್ಷನ್​ ಕಟ್​ ಹೇಳಿದ್ರು, ಇದು ರಾಣಾ ಆರಂಗೇಟ್ರಂ ಸಿನಿಮಾ ಆಗಿದ್ರು, ಟೀಸರ್​ನಲ್ಲಿ ಎಲ್ಲರ ಹುಬ್ಬೇರಿಸಿರೋದು ಡಿಂಪಲ್​ ಕ್ವೀನ್​ ರಚಿತಾ ರಾಮ್.. ಏಕ್​ ಲವ್​ ಯಾ ಸಿನಿಮಾದಲ್ಲಿ ಡಿಂಪಲ್​ ಕ್ವೀನ್​ ಕೊಂಚ ಬೋಲ್ಡ್​ ಆಗಿಯೇ ದರ್ಶನ ಕೊಟ್ಟಿದ್ದಾರೆ. ರಾಣಾ ಜೊತೆ ರಚ್ಚು ಸಿಗರೇಟ್​ ಹಚ್ಚಿಕೊಳ್ಳೋದ್ರಿಂದ ಶುರುವಾಗೂ ಟೀಸರ್​, ಇಬ್ಬರು ತುಟಿಗೆ ತುಟಿ ಒತ್ತುವ ಮೂಲಕ ಕೊನೆಯಾಗುತ್ತದೆ.

ಟೀಸರ್​ಗೂ ಮೊದ್ಲೆ ರಚಿತಾ ರಾಮ್​ ಸಿಗರೇಟ್​ ಸೇದೋ ಸ್ಟಿಲ್ಸ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗಿತ್ತು. ಇದೀಗ ಟೀಸರ್​ನಲ್ಲೂ ಅದನ್ನ ಹೈಲೆಟ್​ ಮಾಡಲಾಗಿದೆ. ಐ ಲವ್​ ಯೂ ಚಿತ್ರದ ಹಾಡಿನಲ್ಲಿ ಬೋಲ್ಡ್​​​ ಆಗಿ ಕಾಣಿಸಿಕೊಂಡಿದ್ದ ರಚಿತಾ ಮುಂದೆ ಹೀಗೆ ನಟಿಸಲ್ಲ ಅಂದಿದ್ರು.. ಆದರೆ, ಏಕ್​ ಲವ್​ ಯಾ ಸಿನಿಮಾದಲ್ಲಿ ಮತ್ತೆ ಅದೇ ರೀತಿ ಕಾಣಿಸಿಕೊಂಡಿರೋದು ನೋಡ್ತಿದ್ರೆ, ಚಿತ್ರದಲ್ಲಿ ಅವರ ಪಾತ್ರ ಹೇಗಿರುತ್ತೆ..? ಇಷ್ಟು ಬೋಲ್ಡ್​ ಆಗಿ ಕಾಣಿಸಿಕೊಳ್ಳೋಕ್ಕೆ ಕಾರಣ ಏನಪ್ಪಾ ಅನ್ನೋ ಕುತೂಹಲ ಕೆರಳಿಸ್ತಿದೆ.

ರಕ್ಷಿತಾ ಪ್ರೇಮ್ ತಮ್ಮದೇ ಬ್ಯಾನರ್​​ನಲ್ಲಿ ಏಕ್​ ಲವ್​ ಯಾ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ಹೀರೋ ಆಗಿ ನಟಿಸ್ತಿರೋ ಮೊದಲ ಸಿನಿಮಾ ಇದು. ಟೀಸರ್​ನಲ್ಲಿ ರಾಣಾ ಎಲ್ಲರ ಗಮನ ಸೆಳೆದಿದ್ದಾರೆ. ರೊಮ್ಯಾನ್ಸ್​, ಆ್ಯಕ್ಷನ್​, ಡೈಲಾಗ್ ಡೆಲಿವರಿ ಎಲ್ಲದ್ರಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ಈ ಸಿನಿಮಾ ಪ್ರೇಮ್​ ತಮ್ಮ ಬಾವ ಮೈದನನನ್ನ ರೊಮ್ಯಾಂಟಿಕ್​ ಬಾಯ್​ ಅಷ್ಟೆ ಅಲ್ಲ ಆ್ಯಕ್ಷನ್​ ಹೀರೋ ಆಗಿಯೂ ಲಾಂಚ್​ ಮಾಡ್ತಿರೋದು ಟೀಸರ್​ನಲ್ಲಿ ಗೊತ್ತಾಗ್ತಿದೆ.

ಟೀಸರ್​​ ನೋಡ್ತಿದ್ರೆ, ಏಕ್​ ಲವ್​ ಯಾ ಮೇಕಿಂಗ್​ ಕೂಡ ಅದ್ಧೂರಿಯಾಗಿರೋದು ಗೊತ್ತಾಗ್ತಿದೆ. ಅಚ್ಚ ಹಸುರಿನ ಕಲರ್​​ಫುಲ್​ ಲೊಕೇಶನ್​ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕೆಲವೇ ಫ್ರೇಮ್​ಗಳಲ್ಲಿ ಬರೋ ಮತ್ತೊಬ್ಬ ನಾಯಕಿ ರೀಷ್ಮ ನಾಣಯ್ಯ ಗಮನ ಸೆಳೀತಾರೆ. ಮ್ಯಾಜಿಕಲ್​ ಕಂಪೋಸರ್​ ಅರ್ಜುನ್​ ಜನ್ಯಾ ಮ್ಯೂಸಿಕ್​ ಟೀಸರ್​ಗೆ ಮತ್ತಷ್ಟು ಶಕ್ತಿ ತುಂಬಿದೆ.ಪ್ರೇಮ್​ ಇದೊಂದು ಮ್ಯೂಸಿಕಲ್​ ಸಿನಿಮಾ ಅಂತ ಹೇಳಿದ್ದು, ಜನ್ಯಾ ಟ್ಯೂನ್​ ಮೇಲೆ ಬಹಳ ನಿರೀಕ್ಷ ಮೂಡಿದೆ.

ಏಕ್​ ಲವ್​ ಯಾ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದ್ದು, ಸಿನಿಮಾ ನೋಡೋ ಕುತೂಹಲ ಹೆಚ್ಚಿಸಿದೆ. ಮಹೇನ್​ ಸಿಂಹ ಛಾಯಾಗ್ರಹಣ ಚಿತ್ರದ ಮತ್ತೊಂದು ಹೈಲೆಟ್. ಎಕ್ಸ್​​ ಕ್ಯೂಸ್​ ಮಿ, ಪ್ರೀತಿ ಭೂಮಿ ಮೇಲಿದೆ ನಂತರ ಪ್ರೇಮ್​ ಮಾಡ್ತಿರೋ ಮ್ಯೂಸಿಕಲ್​ ಲವ್​ ಸ್ಟೋರಿ ಏಕ್​ ಲವ್​ ಯಾ. ಶೀಘ್ರದಲ್ಲೇ ಚಿತ್ರವನ್ನ ತೆರೆಗೆ ತರೋ ಪ್ರಯತ್ನದಲ್ಲಿರೋ ಪ್ರೇಮ್ ಅಂಡ್​ ಟೀಂ​, ಆ ಗ್ಯಾಪ್​ನಲ್ಲೇ ಟ್ರೈಲರ್, ಸಾಂಗ್ಸ್​ನಿಂದ ಮತ್ತಷ್ಟು ಸೌಂಡ್ ಮಾಡೋ ಲೆಕ್ಕಚಾರದಲ್ಲಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *