KSRTC ಸಿಬ್ಬಂದಿಗೆ ಸಿಹಿಸುದ್ದಿ ನೀಡಿದ ಸಾರಿಗೆ ಇಲಾಖೆ.!

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ)ವು ಸಾರಿಗೆ ನಿಗಮದ ಚಾಲಕ ಹಾಗೂ ನಿರ್ವಾಹಕರಿಗೆ ಕೆಎಸ್​ಆರ್​ಟಿಸಿ ಸಿಹಿಸುದ್ದಿ ನೀಡಿದೆ.

ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ, ಈಶಾನ್ಯ ಕರ್ನಾಟಕದ ನಿಗಮದ ಚಾಲಕ ಹಾಗೂ ನಿರ್ವಾಹಕರಿಗೆ ಕರ್ತವ್ಯ ನಿರತ ವೇಳೆ ನೌಕರರಿಗೆ ಮೊಬೈಲ್ ಬಳಕೆಗೆ ಅವಕಾಶ ನೀಡಿದೆ.

ಈ ಬಗ್ಗೆ ಕೆಎಸ್ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾತನಾಡಿ, ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ ಮೊಬೈಲ್ ಬಳಕೆಗೆ ಅವಕಾಶ ನೀಡಿದೆ. ವೇಗದೂತ, ಸಾಮಾನ್ಯ ಹಾಗೂ ನಗರ ಸಾರಿಗೆ ಚಾಲಕ ನಿರ್ವಾಹಕರು ಕರ್ತವ್ಯ ವೇಳೆ ಮೊಬೈಲ್ ಬಳಸಲು ಅನುಮತಿ ನೀಡಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಮೊಬೈಲ್ ಬಳಕೆ ಮಾಡಬಹುದು.

ಮಾರ್ಚ್1 ರಿಂದ ಈ ನೂತನ ನಿಯಮವನ್ನು ಜಾರಿಗೆ ಬರುವಂತೆ ಕೆಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಆದೇಶಿಸಿದ್ದಾರೆ.

ಬಸ್​ ಅಪಘಾತ, ಅವಘಡಗಳ ವೇಳೆ ಅನುಕೂಲ ಆಗಬೇಕೆನ್ನುವ ದೃಷ್ಟಿಯಿಂದ ಸಾರಿಗೆ ನಿಗಮವು ಮೊಬೈಲ್ ಬಳಕೆಗೆ ಅವಕಾಶ ನೀಡಿದೆ. ಅವಶ್ಯಕತೆ ಇದ್ದಾಗ ಮಾತ್ರ ಪ್ರಯಾಣಿಕರಿಗೆ ತೊಂದರೆಯಾಗದಂತೆ ಮೊಬೈಲ್ ಬಳಕೆ ಮಾಡಬೇಕು ಅಂತ ಆದೇಶಿಸಿದೆ.

Recommended For You

About the Author: user

Leave a Reply

Your email address will not be published. Required fields are marked *