ಶಿಕ್ಷಣದಲ್ಲೂ ಸರ್ಕಾರ ರಾಜಕೀಯ ಮಾಡೋಕ್ಕೆ ಹೊರಟಿದೆ: ರೇವಣ್ಣ

ಬೆಂಗಳೂರು: ಬೆಂಗಳೂರಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸುದ್ದಿಗೋಷ್ಠಿ ನಡೆಸಿದ್ದು, ಬಿಜೆಪಿ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಸಿಎಂ ದ್ವೇಷ ರಾಜಕಾರಣ ಮಾಡಲ್ಲ ಎಂದಿದ್ದರು. ಅಧಿಕಾರಕ್ಕೆ ಬಂದಾಗ ಈ ಮಾತನ್ನ ಹೇಳಿದ್ದರು. ಆದರೆ ಶಾಸಕರ ಕ್ಷೇತ್ರದ ಕಾಮಗಾರಿಗೆ ಅನುದಾನ ಇಲ್ಲ. ಇಲ್ಲಿಯವರೆಗೆ ಅನುದಾನವನ್ನೇ ಬಿಡುಗಡೆ ಮಾಡ್ತಿಲ್ಲ. ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ಎಂಜಿನಿಯರಿಂಗ್ ಕಾಲೇಜಿದೆ. ಇಂಡಿಯನ್ ಟೆಕ್ನಿಕಲ್ ಕೌನ್ಸಿಲ್ ಅನುಮತಿ ನೀಡಿದೆ. 50 ಕೋಟಿ ವೆಚ್ಚದಲ್ಲಿ ಬಿಲ್ಡಿಂಗ್ ನಿರ್ಮಿಸಲಾಗಿದೆ. ಆದರೆ ಎಂಜಿನಿಯರಿಂಗ್ ಕಾಲೇಜಿನ ಸಂಯೋಜನೆ ನೀಡ್ತಿಲ್ಲ ಎಂದು ರೇವಣ್ಣ ಆರೋಪಿಸಿದ್ದಾರೆ.

ಸಂಯೋಜನೆಯ ಪ್ರಸ್ತಾಪವನ್ನ ಸರ್ಕಾರ ತಿರಸ್ಕರಿಸಿದೆ. ಕಾಲೇಜಿನಲ್ಲಿ 174 ಮಂದಿ ಬಡ ವಿದ್ಯಾರ್ಥಿಗಳಿದ್ದಾರೆ. ಆದರೆ ದುರುದ್ದೇಶಪೂರಕವಾಗಿ ಸಂಯೋಜನೆ ತಿರಸ್ಕರಿಸಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್ ಕಾಲೇಜು ಮಾನ್ಯತೆ ರದ್ಧುಪಡಿಸಿದ್ದಾರೆ. ಕಟ್ಟಡವನ್ನ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ. ಒಂದು ಸರ್ಕಾರಿ ಸೀಟಿಗೆ 7,500 ರೂ. ಇದ್ರೆ ಕಾಲೇಜಿನ ಬಡ ವಿದ್ಯಾರ್ಥಿಗಳ ಪಾಡೇನು..? ಎಂದು ರೇವಣ್ಣ ಪ್ರಶ್ನಿಸಿದ್ದಾರೆ.

ರಾಜ್ಯದ 30 ಸರ್ಕಾರಿ ಪಾಲಿಟೆಕ್ನಿಕ್ ಮುಚ್ಚಲು ಹೊರಟಿದ್ದಾರೆ. ಹಾಸನದ ಸರ್ಕಾರಿ ಪಾಲಿಟೆಕ್ನಿಕ್ ಕೂಡ ಮುಚ್ಚುತ್ತಿದ್ದಾರೆ. 30 ಸರ್ಕಾರಿ ಪಾಲಿಟೆಕ್ನಿಕ್ ಅಡ್ಮಿಷನ್ ನಿಲ್ಲಿಸಿದ್ದಾರೆ. ಶಿಕ್ಷಣದಲ್ಲೂ ಸರ್ಕಾರ ರಾಜಕೀಯ ಮಾಡೋಕೆ ಹೊರಟಿದೆ ಎಂದು ಸರ್ಕಾರದ ವಿರುದ್ಧ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *