ಬಿಜೆಪಿ ಮುಖಂಡರಿಗೆ ‘ಆಪರೇಷನ್’ ಭೀತಿ..!

ದಾವಣಗೆರೆ: ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಡೇಟ್ ಫೀಕ್ಸ್ ಆಗಿದೆ. ಶತಾಯಗತಾಯ ಅಧಿಕಾರ ಹಿಡಿಯಬೇಕೆಂದು ತಂತ್ರ ರೂಪಿಸಿರೋ ಬಿಜೆಪಿ, ತನ್ನೆಲ್ಲಾ ಸದಸ್ಯರನ್ನೂ ಪ್ರವಾಸಕ್ಕೆ ಕಳಿಸುವ ಮೂಲಕ, ಸ್ಥಳೀಯ ಚುನಾವಣೆಗಳಲ್ಲೂ ರೆಸಾರ್ಟ್‌ ರಾಜಕೀಯಕ್ಕೆ ಮುಂದಾಗಿದೆ.

ದಾವಣಗೆರೆ ಮಹಾನಗರ ಪಾಲಿಕೆಯ ಗದ್ದುಗೆಗಾಗಿ ಗುದ್ದಾಟ ಆರಂಭವಾಗಿದೆ. 45 ಸದಸ್ಯ ಬಲದ ಪಾಲಿಕೆಯಲ್ಲಿ 22 ಜನ ಕಾಂಗ್ರೆಸ್‌, 21 ಜನ ಬಿಜೆಪಿ ಸದಸ್ಯರಿದ್ದಾರೆ. ಹೀಗಾಗಿ ಗದ್ದುಗೆ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ, 8 ಜನ ಎಂಲ್​ಸಿ ಗಳನ್ನ ದಾವಣಗೆರೆ ನಿವಾಸಿಗಳಾಗಿ ಮಾಡಿದೆ. ಜೊತೆಯಲ್ಲಿ 21 ಪಾಲಿಕೆ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿದ್ದು, 18 ರಂದು ದಾವಣಗೆರೆಗೆ ಬರುವಂತೆ ಸೂಚನೆ ನೀಡಿದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಸಹ 5 ಜನ ಎಮ್‌ಎಲ್‌ಸಿಗಳನ್ನು ದಾವಣಗರೆ ನಿವಾಸಿಗಳೆಂದು ಮಾಡಿದ್ದು, ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರವಿದೆ ಎಂದಿದೆ. ಜೊತೆಗೆ ಬಿಜೆಪಿಯ ರೆಸಾರ್ಟ್ ರಾಜಕಾರಣವನ್ನು ಟೀಕೆ ಮಾಡಿದೆ. ಕಾಂಗ್ರೆಸ್, ಬಿಜೆಪಿ ನಡುವೆ ತಂತ್ರ-ಪ್ರತಿತಂತ್ರ ಜೋರಾಗಿದ್ದು, ಪಾಲಿಕೆ ಗದ್ದುಗೆ ಯಾರು ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ಇದೇ 19 ರಂದು ತೆರೆ ಬೀಳಲಿದೆ.

Recommended For You

About the Author: user

Leave a Reply

Your email address will not be published. Required fields are marked *