ಬಿಲ್​ಗೇಟ್ಸ್​​ ಚಿತ್ರತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.. ಅದೇನು..?

ಕಾಮಿಡಿ ಕಿಲಾಡಿ ಚಿಕ್ಕಣ್ಣ ಮತ್ತು ಶಿಶಿರ್​​​ ಜೋಡಿಯ ಬಿಲ್​ಗೇಟ್ಸ್​ ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್​ ಸಿಕ್ತಿದ್ದು, ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಶ್ರೀನಿವಾಸ .ಸಿ ನಿರ್ದೇಶನದ ಬಿಲ್​ಗೇಟ್ಸ್​​ ಪ್ರೇಕ್ಷಕರನ್ನ ರಂಜಿಸುವಲ್ಲಿ ಸಕ್ಸಸ್​ ಕಂಡಿದೆ. ಬೈಟು ಬ್ರದರ್ಸ್​​ ಆಗಿ ಶಿಶಿರ್​ ಮತ್ತು ಚಿಕ್ಕಣ್ಣ ಕಮಾಲ್​ ಮಾಡಿದ್ದು, ತೆರೆಮೇಲೆ ಇವರಿಬ್ಬರ ಹಾವಳಿ ಪ್ರೇಕ್ಷಕರಿಗೆ ಸಖತ್​ ಮಜಾ ಕೊಡ್ತಿದೆ.

ಬಿಲ್​ಗೇಟ್ಸ್​​ ಸಾಧನೆ ಬಗ್ಗೆ ಕೇಳಿ, ನಾವಿಬ್ಬರು ಯಾಕೆ ಬಿಲ್​ಗೇಟ್ಸ್​ ತರ ಫೇಮಸ್​ ಆಗ್ಬಾರ್ದು, ಏನೇನೋ ಕಿತಾಪತಿಗಳನ್ನ ಮಾಡೋ ಕಿಲಾಡಿಗಳ ಕಥೆ ಇದು. ಎರಡನೇ ಪ್ರಯತ್ನದಲ್ಲಿ ಶಿಶಿರ್ ಗೆದ್ದಿದ್ದು, ಚಿಕ್ಕಣ್ಣನ ಜೊತೆ ಸೇರಿ ಪ್ರೇಕ್ಷಕರನ್ನ ರಂಜಿಸುವಲ್ಲಿ ಸಕ್ಸಸ್​ ಕಂಡಿದ್ಧಾರೆ. 150ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ರಿಲೀಸ್​ ಆದ ಸಿನಿಮಾ ಇದೀಗ ಮತ್ತಷ್ಟು ಸ್ಕ್ರೀನ್​ ಮತ್ತು ಶೋಗಳನ್ನ ಹೆಚ್ಚಿಸಿಕೊಳ್ತಿದೆ.

ರಶ್ಮಿತಾ, ಅಕ್ಷರಾ ರೆಡ್ಡಿ, ಚಿಕ್ಕಣ್ಣ, ಕುರಿ ಪ್ರತಾಪ್, ಯತಿರಾಜ್ ಸೇರಿದಂತೆ ದೊಡ್ಡ ತಾರಾಗಣ ಬಿಲ್​ಗೇಟ್ಸ್​ ಸಿನಿಮಾದಲ್ಲಿದೆ. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಿರೋ ಬಿಲ್​ಗೇಟ್ಸ್​​ ಚಿತ್ರ ರೀಮೇಕ್​ ರೈಟ್ಸ್​​ಗೂ ಬೇಡಿಕೆ ಶುರುವಾಗಿದೆ. ಈಗಾಗಲೇ ತಮಿಳು ರೀಮೇಕ್​ ರೈಟ್ಸ್​ ಮಾರಾಟದ ಬಗ್ಗೆ ಮಾತುಕತೆ ನಡೀತಿದೆ.

ಕನ್ನಡ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಭರ್ಜರಿ ಸದ್ದು ಮಾಡ್ತಿದ್ದು, ಬಿಲ್​ಗೇಟ್ಸ್​​ ಚಿತ್ರಕ್ಕೂ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ನೀವು ಬಿಡುವು ಮಾಡ್ಕೊಂಡು ಬಿಲ್​ಗೇಟ್ಸ್​​​ ಕಾಮಿಡಿ ಕಹಾನಿ ನೋಡಿ ಎಂಜಾಯ್​ ಮಾಡಿ.

Recommended For You

About the Author: user

Leave a Reply

Your email address will not be published. Required fields are marked *