ರೈತನ ಮಗನಾಗಿ ಕೃಷಿ ಮಂತ್ರಿ ಆಗಿರುವುದು ಸಂತಸ ತಂದಿದೆ – ಬಿ.ಸಿ ಪಾಟೀಲ್​

ಹಾವೇರಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಉದ್ಧಟತನದ ಮಾತು ಆಡುತ್ತಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಪುಲ್ವಾಮಾ ದಾಳಿಯಿಂದ ಯಾರಿಗೆ ಹೆಚ್ಚು ಲಾಭ ಆಗಿದೆ ಎಂಬ ರಾಹುಲ್ ಗಾಂಧಿ ಪ್ರಶ್ನೆಗೆ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಬತ್ತಿಕೊಪ್ಪ ಕ್ರಾಸ್ ಬಳಿ ಮಾತನಾಡಿದ ಅವರು, ನಮ್ಮ ವೀರ ಸೈನಿಕರನ್ನು ಬಲಿಕೊಟ್ಟು ರಾಜಕೀಯ ಮಾಡುವ ಅವಶ್ಯಕತೆ ಬಿಜೆಪಿ ಒದಗಿ ಬಂದಿಲ್ಲ. ರಾಹುಲ್ ಗಾಂಧಿ ಅವರಿಗೆ ಎಷ್ಟು ಪ್ರಭುದ್ಧತೆ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯಾರು ಜೀವಹಾನಿಯ ಜೊತೆ ಸರಸ ಆಡೋದಿಲ್ಲ. ಇನ್ನೊಬ್ಬರನ್ನ ಬಲಿಕೊಟ್ಟು, ಅವರ ಸಮಾಧಿ ಮೇಲೆ ರಾಜಕೀಯ ಮಾಡುಬೇಕು ಎಂಬುದು ಯಾರಿಗೂ ಇರೋದಿಲ್ಲ ಎಂದರು.

ಮೊದಲು ಅರಣ್ಯ ಇಲಾಖೆ ಕೊಟ್ಟಿದ್ದರು. ಅದನ್ನು ಯಾರು ಬೇಡ ಎನ್ನೋದಿಲ್ಲ. ನಾನು ಸಿಎಂ ಬಿಎಸ್​ವೈ ಬಳಿ ಜನರು ಇರೋ ಬಳಿ ಕೊಡಿ ಎಂದು. ಆಗ ಪ್ರಾಣಿಗಳು ಇರೋ ಕಡೆ ಬೇಡ ಎಂದಿದ್ದೆ, ಅದಕ್ಕೆ ಸಿಎಂ ಸಿಎಂ ನನ್ನ ಕೃಷಿ ಸಚಿವರನ್ನಾಗಿ ಮಾಡಿದ್ದಾರೆ. ಕೃಷಿ ಇಲಾಖೆ ಬಹಳ ದೊಡ್ಡ ಖಾತೆ. ಕೃಷಿ ಇಲಾಖೆ ನೀಡಿರೋದು ತುಂಬಾ ಸಂತೋಷವಾಗಿದೆ ಎಂದು ಬಿಸಿ ಪಾಟೀಲ್ ಅವರು ಹೇಳಿದರು.

ನಾನು ರೈತನ ಮಗನಾಗಿ, ಕೃಷಿ ಸಚಿವನಾಗಿ ಕ್ಷೇತ್ರಕ್ಕೆ ಬರುತ್ತಿರುವುದು ಸಂತಸವಾಗಿದೆ. ಸಿಎಂ ಅವರು ಸಮರ್ಥವಾಗಿ ನೀಡಿದ ಜವಾಬ್ದಾರಿ ನಿಭಾಯಿಸುವೆ ಎಂದರು.

ಅಲ್ಲದೇ, ಕಾಂಗ್ರೆಸ್​-ಜೆಡಿಎಸ್​ ತೊರೆದು ಬಿಜೆಪಿ ಬಂದ ಕೆಲವರಿಗೆ ಮಂತ್ರಿ ಸ್ಥಾನ ಸಿಗದ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರಿಗೂ ಅನ್ಯಾಯ ಮಾಡೋದಿಲ್ಲ. ಅವರ ಹಿತಾಸಕ್ತಿ ಕಾಪಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕಾನೂನಿನ ತೊಡಕು ಇರೋದ್ರಿಂದ ಹೆಚ್ಚು ಕಡಿಮೆಯಾಗಿದೆ. ಮುಂದಿನ ದಿನದಲ್ಲಿ ಸರಿಪಡಿಸುತ್ತಾರೆ ಎಂದು ಸಚಿವ ಬಿ.ಸಿ ಪಾಟೀಲ್ ಅವರು ಹೇಳಿದರು.

Recommended For You

About the Author: user

Leave a Reply

Your email address will not be published. Required fields are marked *