ವಿಶ್ವ ಏಕದಿನ ಕ್ರಿಕೆಟ್​​ನ ನಂ.1 ಬ್ಯಾಟ್ಸ್​ಮನ್ ಮತ್ತು​ ಬೌಲರ್ ಫ್ಲಾಪ್

ಆತ ಟೀಮ್ ಇಂಡಿಯಾದ ರನ್‌ ಮಷಿನ್, ವಿಶ್ವದ ಏಕದಿನ ಕ್ರಿಕೆಟ್​ನ ನಂ.1 ಬ್ಯಾಟ್ಸ್​ಮನ್. ವಿಶ್ವ ಕ್ರಿಕೆಟ್​ನ ಕಿಂಗ್ ಕೊಹ್ಲಿ. ಈತ ಟೀಮ್ ಇಂಡಿಯಾದ ಯಾರ್ಕರ್​ ಕಿಂಗ್ ಜಸ್​ಪ್ರೀತ್ ಬೂಮ್ರಾ. ಏಕದಿನ ಕ್ರಿಕೆಟ್​ ನಂ.1 ಬೌಲರ್. ಆದರೆ, ಈ ಇಬ್ಬರು ಆಟಗಾರರು ನ್ಯೂಜಿಲೆಂಡ್​ ವಿರುದ್ಧ ಫ್ಲಾಪ್ ಆಟ ಪ್ರದರ್ಶನ ಮಾಡಿದ್ದಾರೆ. ಯಾವುದೇ ಅಂಗಳದಲ್ಲಿ ಘರ್ಜಿಸುತ್ತಿದ್ದ ಆತನ ಬ್ಯಾಟ್​ ಸದ್ದು ಮಾಡದೇ ಸುಮ್ಮನಿದ್ರೆ, ಈತನ ಬಾಲ್ ಎದುರಾಳಿ ಮೇಲೆ ದಾಳಿಯೇ ನಡೆಸಲಿಲ್ಲ. ಪರಿಣಾಮ ಟೀಮ್ ಇಂಡಿಯಾ 31 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ವೈಟ್​ವಾಷ್​ ಮುಖಭಂಗ ಅನುಭವಿಸಿತು.

ಟಿ20 ಸರಣಿಯಲ್ಲಿ 5-0 ಅಂತರದಲ್ಲಿ ಗೆದ್ದು ಬೀಗಿದ್ದ ವಿರಾಟ್‌ ಕೊಹ್ಲಿ ಬಳಗ ಏಕದಿನ ಸರಣಿಯಲ್ಲಿ 0-3 ಅಂತರದಲ್ಲಿ ಮಕಾಡೆ ಮಲಗಲು ಹಲವು ಕಾರಣಗಳಿವೆ. ಇದರಲ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಬ್ಯಾಟ್​ ಮಂಕಾಗಿದ್ದು, ಕೂಡ ಒಂದು. ಬೌಲರ್​​ಗಳಿಗೆ ಕಂಟಕವಾಗಿ ಕಾಡುತ್ತಿದ್ದ ಈ ರನ್ ಮಷಿನ್​ ಒಡಿಐ ಸರಣಿಯಲ್ಲಿ ರನ್ ಬರ ಎದುರಿಸಿದೆ.

ವಿರಾಟ್​ ಕೊಹ್ಲಿ, ಟೀಮ್ ಇಂಡಿಯಾದ ಬ್ಯಾಟಿಂಗ್​ನ ಆಧಾರ ಸ್ಥಂಭ. ಕಿವೀಸ್​ ಸರಣಿಯಲ್ಲಿ ಇದ್ದ ಏಕೈಕ ಹಿರಿಯ ಅನುಭವಿ ಬ್ಯಾಟ್ಸ್​ಮನ್. ರೋಹಿತ್​ ಶರ್ಮಾ, ಶಿಖರ್​ ಧವನ್ ಅನುಪಸ್ಥಿಯಲ್ಲಿ ವಿರಾಟ್​ ಟೀಮ್ ಇಂಡಿಯಾದ ಆಧಾರಸ್ಥಂಭವಾಗಿ ನಿಲ್ತಾರೆ ಅಂತಾಲೇ ಊಹಿಸಲಾಗಿತ್ತು. ಆದರೆ, ಆಗಿದ್ದೆ ಬೇರೆ. ಟಿ20 ಸರಣಿಯಲ್ಲಿ ಅಷ್ಟಾಗಿ ಸದ್ದು ಮಾಡದ ವಿರಾಟ್​ ಕೊಹ್ಲಿ ಏಕದಿನ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದರು. ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಗಳಿಸಿದ್ದು ಕೇವಲ 75 ರನ್. ಮೊದಲ ಏಕದಿನ ಪಂದ್ಯದಲ್ಲಿ 51 ರನ್ ಬಿಟ್ಟರೆ ಉಳಿದೆರಡು ಪಂದ್ಯಗಳಲ್ಲಿ ಕ್ರಮವಾಗಿ 15 ಹಾಗೂ 9 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಈ ಮೂಲಕ ಸರಣಿಯಲ್ಲಿ ಫ್ಲಾಪ್ ಶೋ ಪ್ರದರ್ಶಿಸಿದರು.

ಜಸ್‌ಪ್ರೀತ್‌ ಬೂಮ್ರಾ, ಟೀಮ್ ಇಂಡಿಯಾದ ಬೌಲಿಂಗ್ ಶಕ್ತಿ, ಟೀಮ್ ಇಂಡಿಯಾದ ಯಾರ್ಕರ್​ ಕಿಂಗ್​, ಡೆತ್​ ಓವರ್ ಸ್ಪೆಷಲಿಸ್ಟ್​. ಎದುರಾಳಿ ಬ್ಯಾಟ್ಸ್​​ಮನ್ ಯಾರೇ ಆಗಲಿ ಬೂಮ್ರಾ ಅನ್ನೋ ಮಿಸೈಲ್ ಅಟ್ಯಾಕಿಂಗ್​​ ಬಂದರೆ, ಆತ ಪೆವಿಲಿಯನ್ ಸೇರಲೇ ಬೇಕು. ಆದರೆ, ಆದ್ಯಾಕೋ ಈ ಮಿಸೈಲ್ ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಒಂದೇ ಒಂದು ವಿಕೆಟ್‌ ಪಡೆಯಲಾಗದೆ ನಿರಾಸೆ ಅನುಭವಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್‌ ಸೋಲುಂಡ ಟೀಮ್‌ ಇಂಡಿಯಾ, ಕಿವೀಸ್‌ ವಿರುದ್ಧದ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಯಲ್ಲಿ ಕಳೆದ 31 ವರ್ಷಗಳಲ್ಲಿ ಇದೇ ಮೊದಲ ಬಾರಿ ವೈಟ್‌ವಾಷ್‌ ಸೋಲಿನ ಮುಖಭಂಗ ಅನುಭವಿಸಿದೆ.

ಏಕದಿನ ಸರಣಿಯಲ್ಲಿ ಮಕಾಡೆ ಮಲಗಲು ಸ್ಟಾರ್‌ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಏಕೈಕ ವಿಕೆಟ್‌ ಕೂಡ ಪಡೆಯಲು ಸಾಧ್ಯವಾಗದೇ ಇರುವುದು ಪ್ರಮುಖವಾದದ್ದು. ಟಿ20 ಸರಣಿಯಲ್ಲಿ ಕಿವೀಸ್​ ಬ್ಯಾಟ್ಸ್​ಮನ್​​​ಗಳಿಗೆ ಕಂಟಕವಾಗಿ ಕಾಡಿದ್ದ ಈ ಡೆತ್​ ಓವರ್​​ ಸ್ಪೆಷಲಿಸ್ಟ್​ ಒಡಿಐ ಸರಣಿಯಲ್ಲಿ ವಿಕೆಟ್‌ಗಳ ಬರ ಎದುರಿಸಿ ಟೀಮ್ ಇಂಡಿಯಾದ ಸೋಲಿಗೂ ಕಾರಣರಾಗಿದ್ದಾರೆ. ನ್ಯೂಜಿಲೆಂಡ್ಗ್ ವಿರುದ್ಧದ ಏಕದಿನ ಸರಣಿವೊಂದರಲ್ಲಿ ಯಾವುದೇ ವಿಕೆಟ್​ ಪಡೆದುಕೊಳ್ಳದ ಕಳಪೆ ಸಾಧನೆಯನ್ನ ಟೀಮ್​​ ಇಂಡಿಯಾದ ಡೆತ್​ ಓವರ್​ ಸ್ಪೆಷಲಿಸ್ಟ್ ಜಸ್​ಪ್ರೀತ್​ ಬೂಮ್ರಾ ನಿರ್ಮಿಸಿದ್ದಾರೆ. ಯಾರ್ಕರ್​ ಕಿಂಗ್​, ಡೆತ್​ ಓವರ್​​​ ಮಾಸ್ಟರ್​ ಎಂದು ಕರೆಯಿಸಿಕೊಳ್ಳುವ ಜಸ್​ಪ್ರೀತ್​ ಬೂಮ್ರಾ ಏಕದಿನ ಸರಣಿಯ ಮೂರು ಪಂದ್ಯಗಳಲ್ಲೂ ಹೀನಾಯ ಬೌಲಿಂಗ್​ ಪ್ರದರ್ಶನ ನೀಡಿದ್ದಾರೆ.

ಏಕದಿನ ಸರಣಿಯ 3 ಏಕದಿನ ಪಂದ್ಯಗಳಿಂದ ಒಟ್ಟು 30 ಓವರ್​ ಎಸೆದಿರುವ ಬೂಮ್ರಾ​​​ 167 ರನ್​ ಬಿಟ್ಟುಕೊಟ್ಟು ಒಂದೇ ಒಂದು ವಿಕೆಟ್​ ಪಡೆಯುವಲ್ಲೂ ಕೂಡ ವಿಫಲರಾಗಿದ್ದಾರೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ಶಕ್ತಿಯಾಗಿದ್ದ ಸ್ಟಾರ್​ ಆಟಗಾರರೇ ಕಿವೀಸ್​ ನಾಡಲ್ಲಿ ಪರಿಣಾಮಕಾರಿ ಆಟವಾಡದೇ ಕ್ಲೀನ್​​ಸ್ವೀಪ್ ಮುಖಭಂಗ ಅನುಭವಿಸುವಂತೆ ಮಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *