ನಾಳೆಯ ಬಂದ್​ ಬಗ್ಗೆ ಸಿಎಂ​ ಯಡಿಯೂರಪ್ಪ ಪ್ರತಿಕ್ರಿಯೆ.!

ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಮಾಡುವಂತೆ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ನಾಳೆ ರಾಜ್ಯಾದಾದ್ಯಂತ ಬಂದ್​ಗೆ ಕರೆ ನೀಡಿವೆ. ಈ ಬಗ್ಗೆ ಮಾತನಾಡಿದ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.

ಸರೋಜಿನಿ ಮಹಿಷಿ ವರದಿ ಜಾರಿಗೆ ಮಾಡುವಂತೆ ಹೋರಾಟ ಮಾಡುತ್ತಿರುವರು ಬಂದು ನನ್ನ ಜೊತೆ ಮಾತನಾಡಲಿ. ಈ ಬಗ್ಗೆ ನಾನು ಮಾತನಾಡಲು ಸಿದ್ಧ. ಇಂದೇ ಬಂದು ಬೇಕಾದರೆ ನನ್ನನ್ನು ಭೇಟಿ ಮಾಡಲಿ, ನಾನು ಅವರಿಗಾಗಿ ನಾಳೆಯ ಕಾರ್ಯಕ್ರಮ ರದ್ದುಗೊಳಿಸಿ ಅವರು ಮಾತುಕತೆಗೆ ಕಾಯುತ್ತಿರುತ್ತೇನೆ ಎಂದು ಸಿಎಂ ಬಿಎಸ್​ವೈ ಅವರು ಹೇಳಿದರು.

ಕನ್ನಡದ ಮಕ್ಕಳಿಗೆ ಉದ್ಯೋಗ ಸಿಗಲಿ ಅಂತ ನಾವೂ ಹೇಳ್ತಿದ್ದೇವೆ. ಈ ವರದಿಯಲ್ಲಿ ಏನೇನು ಮಾಡಬೇಕು ಅದನ್ನ ನಾನು ಈಗಲೂ ಮಾಡಲು ಸಿದ್ದನಿದ್ದೇನೆ. ನಾನು ಸಹ ಕನ್ನಡಿಗರ ಪರ ಇರೋರು. ದಯಮಾಡಿ ಪ್ರತಿಭಟನೆ ಮಾಡುವವರು ಬಂದು ನಮ್ಮ ಜೊತೆ ಮಾತನಾಡಲಿ. ಇವತ್ತು ನಮ್ಮ ಮನೆಗೆ ಬನ್ನಿ ಮಾತನಾಡಿ ಎಂದು ಸಿಎಂ ಅವರು ನಾಳೆ ಬಂದ್​ಗೆ ಕರೆಕೊಟ್ಟ ಸಂಘಟನೆಗಳಿಗೆ ಮನವಿ ಮಾಡಿದರು.

ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆಕೊಡುವ ಅಗತ್ಯ ಇಲ್ಲ. ನಾನು ಈ ಬಗ್ಗೆ ಮಾತುಕತೆಗೆ ಸಿದ್ದನಿದ್ಧೇನೆ ಬನ್ನಿ ಎಂದು ಬಿಎಸ್​ವೈ ತಿಳಿಸಿದರು. ನಾಳಿನ ಬಂದ್ ಗೆ ಕಾಂಗ್ರೆಸ್ ನಿಂದ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿ, ಬೇರೆಯವರ ಬಗ್ಗೆ ನಾನು ಮಾತನಾಡಲ್ಲ. ಕಾಂಗ್ರೆಸ್​ನವರು ಅಧಿಕಾರದಲ್ಲಿದ್ದಾಗ ಆಗ ಏನು ಮಾಡಿದರು? ವಿರೋಧ ಪಕ್ಷದಲ್ಲಿದ್ದಾಗ ಬೆಂಬಲ ನೀಡುತ್ತಿದ್ದಾರೆ. ಆಡಳಿತದಲ್ಲಿದ್ದ ಸಂದರ್ಭದಲ್ಲಿ ಒಂದು ಇರದೇ ಇದ್ದಾಗ ಒಂದು. ಪಕ್ಷ ಬೇಧ ಮರೆತು ಕಾಂಗ್ರೆಸ್ – ಜೆಡಿಎಸ್ ನವರು ಸಹಕಾರ ನೀಡಲಿ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರು ಹೇಳಿದರು.

Recommended For You

About the Author: user

Leave a Reply

Your email address will not be published. Required fields are marked *