ಕನ್ನಡ ಕಲರವ ಕೇಳಿ ಖುಷಿಯಾಯಿತು – ಡಿಸಿಎಂ ಅಶ್ವಥ್​ ನಾರಾಯಣ್​

ಬೆಂಗಳೂರು: ನ್ಯೂಜಿಲೆಂಡ್​ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್​ ತಂಡವು ಏಕದಿನ ಸರಣಿಯಲ್ಲಿ ಹೀನಾಯವಾಗಿ ಸರಣಿ ಸೋಲು ಖಂಡಿದೆ.

ಮೌಂಟ್ ಮೌಂಗನೂಯಿ ಅಂಗಳದಲ್ಲಿ ಕಿವೀಸ್ ವಿರುದ್ಧ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಕರುನಾಡ ಕುವರ ಕೆ.ಎಲ್​. ರಾಹುಲ್ ಶತಕ ಸಿಡಿಸಿ ಅಬ್ಬರಿಸಿದರೆ, ಮನೀಶ್ ಪಾಂಡೆ 42 ಸಿಡಿಸಿದ್ದರು. ಈ ಹಬ್ಬರದ ಬ್ಯಾಟಿಂಗ್ ವೇಳೆಯಲ್ಲಿ ಒಂದು ಇಂಟ್ರೆಸ್ಟಿಂಗ್ ವಿಷಯವೊಂದು ನಡೆಯಿತು. ಅದು ಇವರಿಬ್ಬರು ರನ್​ಗಾಗಿ ಓಡುವಾಗ ಕನ್ನಡದಲ್ಲಿ ಮಾತನಾಡಿದರು. ಈ ಮಾತನಾಡಿರುವ ಆಡಿಯೋ ಅಲ್ಲಿದ್ದ ಮೈಕ್​ಸ್ಟಂಪ್ ಮೂಲಕ ಸ್ಪಷ್ಟವಾಗಿ ಕೇಳಿಸಿತ್ತು.

ಮನೀಶ್ ಪಾಂಡೆ ಚೆಂಡನ್ನು ತಳ್ಳಿ ರನ್‌ಗೆ ಓಡಲು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಕೆಲ್​ ರಾಹುಲ್​ ‘ಬೇಡ ಬೇಡ’ ಎಂದು ಜೋರಾಗಿ ಕೂಗಿ ಪಾಂಡೆಗೆ ಹೇಳುತ್ತಾರೆ. ಅಲ್ಲದೇ, ರಾಹುಲ್ ಮತ್ತೆ ಮನೀಶ್​ಗೆ ಮಾಮ್ಸ್ ಬೌಲ್​ ಮೆತ್ತುಗಾ? ಬರುತ್ತಾ ಎನ್ನುತ್ತಾನೆ. ಇದಕ್ಕೆ ಹೌದು, ನಾರ್ಮಲ್‌ ಆಗಿ ಹಾಕಿದ. ಓಡು ಓಡು ಮಗಾ, ಬಾ… ಬಾ… ಬಾ… ಅಂತಾ ಮಾತನಾಡುವ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿತ್ತು. ಈ ಮಾತುಗಳನ್ನ ಕೇಳಿದ ಕನ್ನಡಗರ ಮೈ ರೋಮಾಂಚನವಾಗಿತ್ತು. ಇದಕ್ಕೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವೀಟರ್​ನಲ್ಲಿ ಈ ಇಬ್ಬರು ಆಟಗಾರರನ್ನ ಡಿಸಿಎಂ ಅಶ್ವಥ್ ನಾರಾಯಣ್ ಅವರು ಕೊಂಡಾಡಿದ್ದಾರೆ. ನ್ಯೂಜಿಲೆಂಡ್ ಪಿಚ್ ನಲ್ಲಿ ಕನ್ನಡಿಗರ ಕನ್ನಡ ಕಲರವ ಕೇಳಿ ಖುಷಿಯಾಯಿತು. ಹೊರದೇಶದಲ್ಲಿ ನಮ್ಮ ಭಾಷೆಯ ಕಂಪನ್ನು ಆಲಿಸುವ ಆನಂದ ಬೇರೆ ಥರಾನೇ. ಅಲ್ವಾ? ಎಂದಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *