ನಾಳೆಯ ಬಂದ್​ಗೆ ಜೆಡಿಎಸ್ ಬೆಂಬಲವಿದೆ – ಹೆಚ್​.ಕೆ ಕುಮಾರಸ್ವಾಮಿ​

ಬೆಂಗಳೂರು: ಕನ್ನಡ ಜನರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸುವ ಸರೋಜಿನಿ ಮಹಿಷಿ ವರಿದಿಯನ್ನ ಜಾರಿಗೆಗೊಳಿಸಬೇಕೆಂದು ಒತ್ತಾಯಿಸಿ ನಾಳೆ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಕರ್ನಾಟಕದಾದ್ಯಂತ ಬಂದ್​ಗೆ ಕರೆ ನೀಡಿವೆ. ಈ ಬಂದ್​ಗೆ ನಮ್ಮ ಬೆಂಬಲ ಇದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​.ಕೆ ಕುಮಾರಸ್ವಾಮಿ ಅವರು ತಿಳಿಸಿದರು.

ನೆಲ ಜಲದ ದೃಷ್ಟಿಯಿಂದ ನಾಳಿನ ಕನ್ನಡಪರ ಸಂಘಟನೆ ಬಂದ್​ಗೆ ಕರೆ ನೀಡಿವೆ. ಈ ಬಂದ್​ಗೆ ಹಾಗೂ ಇಂತಹ ಪ್ರತಿಭಟನೆಗೆ ಜೆಡಿಎಸ್ ಪಕ್ಷ ಬೆಂಬಲ ನೀಡುತ್ತದೆ. ಕನ್ನಡಪರ ಸಂಘಟನೆ ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎಂದು ಪ್ರತಿಭಟನೆ ನಡೆಸುತ್ತಿವೆ, ಕನ್ನಡಿಗರ ಹಿತ ದೃಷ್ಟಿಯಿಂದ ಅವರು ಮಾಡುತ್ತಿರುವ ಪ್ರತಿಭಟನೆ ಸರಿಯಿದೆ ಎಂದರು.

ಅಲ್ಲದೇ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಸಂಘಟನೆಗಳು ನೀಡಿರುವ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರೋಜಿನಿ ಮಹಿಷಿ ವರದಿಯ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಅದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಪರಿಷ್ಕೃರಣೆ ಮಾಡಿಸಿ ವರದಿ ತರಿಸಿದ್ದೆ. ಅದರ ಅನುಷ್ಠಾನದ ಪರವಾದ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ‌ ಇದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಟ್ವೀಟರ್​ನಲ್ಲಿ ಬರೆದುಕೊಂಡಿದ್ದರು.

Recommended For You

About the Author: user

Leave a Reply

Your email address will not be published. Required fields are marked *