ನಾದಿನಿಯ ಮನೆ ಮಾರಿ ಹಣ ತೆಗೆದುಕೊಂಡು ಬಂದಿದ್ದೆ. ನನ್ನನ್ನೇ ಪಕ್ಷದಿಂದ ಹೊರ ಹಾಕುವ ಷಡ್ಯಂತ್ರ ನಡೀತು

ಬೆಂಗಳೂರು: ಅತ್ತ ದೆಹಲಿಯಲ್ಲಿ ಆಪ್​ ಅಧಿಕಾರದ ಗದ್ದುಗೆ ಹಿಡಿದಿದೆ. ಇತ್ತ ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷ ಜೆಡಿಎಸ್​ ಕೂಡ ಭರ್ಜರಿ ಸಂಘಟನೆ ನಡೆಸಿದೆ. ರಾಷ್ಟ್ರಮಟ್ಟದ ಕಾರ್ಯಕಾರಿಣಿ ಸಭೆ ಮೂಲಕ ಪಕ್ಷ ಬಲಪಡಿಸಲು ಮುಂದಾಗಿದೆ. ಪಕ್ಷವನ್ನ ಮತ್ತೆ ಅಧಿಕಾರದತ್ತ ಕೊಂಡೊಯ್ಯಲು ದೇವೇಗೌಡರು ಶಪಥ ಮಾಡಿದರು.

ಮೈತ್ರಿ ಸರ್ಕಾರ ಪತನಗೊಂಡ ನಂತರ ಜೆಡಿಎಸ್‌ ಪಕ್ಷ ಸಂಘಟನೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇತ್ತು. ಆದರೆ, ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡರು ಮುಂದಿನ ಚುನಾವಣೆಗೆ ಈಗಿನಿಂದಲೇ ಪಣ ತೊಡಲು ನಿರ್ಧರಿಸಿದಂತಿದೆ. ಕಳೆದ ತಿಂಗಳು ಜೆಡಿಎಸ್​ ಜಿಲ್ಲಾವಾರು ನಾಯಕರ ಸಭೆ ಕರೆದಿದ್ರೆ, ಇವತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದಿದ್ದರು.

ವಿವಿಧ ರಾಜ್ಯಗಳ ಜೆಡಿಎಸ್​ ನಾಯಕರು ಸಭೆಯಲ್ಲಿ ಭಾಗವಹಿಸಿದರು. ಕೇರಳ, ತಮಿಳುನಾಡು, ತೆಲಂಗಾಣ, ಹರಿಯಾಣ, ಗುಜರಾತ್​, ಬಿಹಾರ ಸೇರಿ ಅನೇಕ ಇತರೆ ರಾಜ್ಯಗಳ ಜೆಡಿಎಸ್​ ರಾಜ್ಯಾಧ್ಯಕ್ಷರು ಪಾಲ್ಗೊಂಡಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ದೇಶಕ್ಕೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಮೋದಿ ಸಿಎಎ ಮತ್ತು ಎನ್​ಆರ್​ಸಿ ಮೂಲಕ ದಿಕ್ಕುತಪ್ಪಿಸುತ್ತಿದ್ದಾರೆ ಅಂತ ಅನೇಕರು ತಮ್ಮ ಭಾಷಣಗಳಲ್ಲಿ ಹೇಳಿದರು.

ಇದೇ ವೇಳೆ ಪಕ್ಷದ ಇತಿಹಾಸ ಮೆಲುಕು ಹಾಕಿದ ಹೆಚ್.ಡಿ.ದೇವೇಗೌಡರು, ಈ ಹಿಂದೆ ಜನತಾದಳ ಕಟ್ಟಿದ್ದೆ. ಪಕ್ಷ ಸಂಘಟನೆಗೆ ದುಡ್ಡಿಲ್ಲ ಎಂದಾಗ, ನನ್ನ ನಾದಿನಿಯ ಮನೆ ಮಾರಿ ಹಣ ತೆಗೆದುಕೊಂಡು ಬಂದಿದ್ದೆ. ನಂತರ ನನ್ನನ್ನೇ ಪಕ್ಷದಿಂದ ಹೊರ ಹಾಕುವ ಷಡ್ಯಂತ್ರ ನಡೀತು. ಇದೆಲ್ಲವನ್ನೂ ಸಹಿಸಿಕೊಂಡು ಪಕ್ಷ ಸಂಘಟಿಸುತ್ತಿದ್ದೇನೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮತ್ತೆ ಬಲ ಬರುತ್ತಿದೆ. ಪಕ್ಷ ಸಂಘಟನೆಗೆ ನಾನೇ ಮುಂದಾಗುತ್ತೇನೆ ದೇವೇಗೌಡರು ಶಪಥ ಮಾಡಿದರು.

Recommended For You

About the Author: user

Leave a Reply

Your email address will not be published. Required fields are marked *