‘ಮಂತ್ರಿ ಸ್ಥಾನ ಕೊಟ್ರೆ ಕೆಲಸ ಮಾಡ್ತೀನಿ. ಕೊಡಲೇಬೇಕು, ಕೊಟ್ಟೆ ಕೊಡ್ತಾರೆ’

ಬೆಂಗಳೂರು: ಹೆಚ್.ವಿಶ್ವನಾಥ್ ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದು, ಭೇಟಿ ಬಳಿಕ ಮಾಧ್ಯಮದ ಬಳಿ ಮಾತನಾಡಿದ್ದಾರೆ.

ಸಿಎಂ ಭೇಟಿ ಮಾಡಿದ್ದು ನಂದಗಢದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡುವಂತೆ ಕೇಳಲು ಬಂದಿದ್ವಿ. ಹಣ ಬಿಡುಗಡೆ ಸಿಎಂ ಒಪ್ಪಿದ್ದಾರೆ ಎಂದರು. ಅಲ್ಲದೇ, ಸಚಿವ ಸ್ಥಾನ ಕೊಡಿ ಅಂತ ನಾನು ಪದೇ ಪದೇ ಕೇಳಲ್ಲ. ಮಂತ್ರಿ ಸ್ಥಾನಕ್ಕಾಗಿ ಅಂಗಲಾಚಲ್ಲ. ಮಂತ್ರಿ ಸ್ಥಾನ ಕೊಟ್ರೆ ಕೆಲಸ ಮಾಡ್ತೀನಿ ಕೊಡಲೇಬೇಕು ಕೊಟ್ಟೆ ಕೊಡ್ತಾರೆ. ನಾನು ಸಚಿವ ಸ್ಥಾನಕ್ಕಾಗಿ ಯಾವತ್ತೂ ಅಂಗಲಾಚಿಲ್ಲ. ಹಿಂದೆ ಮಂತ್ರಿ ಸ್ಥಾನ ನೋಡಿಬಿಟ್ಟವನು ನಾನು . ನಾನು ಹಿಂದೆ ಕೊಟ್ಟ ಕಾರ್ಯಕ್ರಮಗಳು ಇನ್ನೂ ಚಾಲ್ತಿಯಲ್ಲಿವೆ. ಮಂತ್ರಿಗಿಂತ್ರಿ ನೋಡಿದ್ದೇನೆ. ಮಿನಿಸ್ಟರ್ ಪೋಸ್ಟ್ ಕೊಟ್ರೆ ಕೆಲಸ ಮಾಡ್ತೀನಿ. ಆದ್ರೆ ಅದಕ್ಕೆ ಅಂಗಲಾಚಲ್ಲ ಎಂದು ಹೇಳಿದ್ದಾರೆ.

ಇನ್ನು ಆರ್.ಶಂಕರ್ ಕೂಡ ಸಿಎಂ ಯಡಿಯೂರಪ್ಪರನ್ನ ಭೇಟಿ ಮಾಡಿದ್ದು, ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಜೂನ್‌ನಲ್ಲಿ ನಿಮಗೆ ಮಂತ್ರಿ ಸ್ಥಾನ ಕೊಟ್ಟೆ ಕೊಡುತ್ತೇವೆ. ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಈಗ ನಿಮ್ಮ ಸ್ನೇಹಿತರಿಗೂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ನಿಮಗೂ ಅನ್ಯಾಯ ಆಗದಂತೆ ನೋಡಿಕೊಳ್ಳುವೆ ಎಂದು ಶಂಕರ್‌ಗೆ ಸಿಎಂ ಭರವಸೆ ನೀಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *