ದೇವೇಗೌಡ ಸಮ್ಮುಖದಲ್ಲಿ ಬಿಎಸ್​ವೈ ಮನೆ ಮುಂದೆ ಧರಣಿ – ಹೆಚ್.​ಡಿ ರೇವಣ್ಣ

ಹಾಸನ: ರಾಜ್ಯ ಸರ್ಕಾರ ಬಂದು 7 ತಿಂಗಳು ಕಳೆದಿದೆ. ಇನ್ನುವರೆಗೂ ನಮ್ಮ ಜಿಲ್ಲೆಗಳಿಗೆ ಯಾವ ಕೆಲಸಗಳು ಆಗ್ತಿಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಸಿಎಂ ಬಿಎಸ್ ಯಡಿಯೂರಪ್ಪ ಅವರು ಪಕ್ಷಪಾತ ಮಾಡದೆ ಎಲ್ಲ ಕೆಲಸ ಮಾಡ್ತಿನಿ ಎಂದು ಹೇಳಿದ್ದರು. ಆದರೆ, ನಮ್ಮ ಜಿಲ್ಲೆ ಯಾವ ಕೆಲಸಗಳು ಆಗ್ತಿಲ್ಲ. ಬಿಎಸ್​ವೈ ಸಿಎಂ ಆದ್ಮೇಲೆ ತಮ್ಮ ಕ್ಷೇತ್ರಗಳಿಗೆ ಕೋಟಿ, ಕೋಟಿ ಹಣ ನೀಡಿದ್ದಾರೆ. ನಮ್ಮ ಜಿಲ್ಲೆ ಏರ್ ಪೋರ್ಟ್ ಕೆಲಸ ನಿಂತಿದೆ. ಈ ಬಗ್ಗೆ ದೇವೇಗೌಡರು ಪತ್ರ ಬರೆದಿದ್ದಾರೆ ಎಂದರು.

ಈ ಸಂಬಂಧವಾಗಿ ಫೆ.24 ರಂದು ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಗೂ ಫೆ.27 ರ ನಂತರ ಸಿಎಂ ಬಿಎಸ್​ವೈ ಮನೆ ಮುಂದೆ ಧರಣಿ ಕೂರುತ್ತೇವೆ. ಹೆಚ್ಚುಮಂದಿ ಧರಣಿ ಕೂತರೆ 144 ಜಾರಿ ಮಾಡ್ತಾರೆ. ಈ ಹಿನ್ನಲೆಯಲ್ಲಿ ದೇವೇಗೌಡರು ಸೇರಿ 5 ಮಂದಿ ಸಿಎಂ ಮನೆ ಮುಂದೆ ಧರಣಿ ಮಾಡ್ತಾರೆ ಎಂದು ಹೇಳಿದರು.

ಇನ್ನು ಸಚಿವ ಆರ್​. ಅಶೋಕ್ ಅವರು ಇತ್ತೀಚೆಗೆ ಜೆಡಿಎಸ್​ ಪಕ್ಷ ಸವಕಲ್ ನಾಣ್ಯ ಎಂದು ಲೇವಡಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿ, ಈಗ ಹಳೇ ಕಾಲದ ಮೇಲೆ ನಾಣ್ಯವೇ ನಡೆಯೋದು. ಈಗ ಮೊದಲು ಮೋದಿಯವರು ಅವರನ್ನ ಅವರು ಉಳಿಸಿಕೊಳ್ಳಲಿ. ದೆಹಲಿಯಲ್ಲಿ ಬಿಜೆಪಿ ಅವ್ರನ್ನ ಗುಡಿಸಿ ಹಾಕಿದ್ರಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರು ವ್ಯಂಗ್ಯವಾಡಿದರು.

Recommended For You

About the Author: user

Leave a Reply

Your email address will not be published. Required fields are marked *