‘ಬಂದ್‌ಗೆ ಬೆಂಬಲ ಕೊಡ್ತೀವಿ, ಆದ್ರೆ ಬಸ್ ನಿಲ್ಲಿಸಲ್ಲ’

ಬೆಂಗಳೂರು: ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ, ಸಾರಿಗೆ ಸಚಿವ, ಲಕ್ಷ್ಮಣ್ ಸವದಿ, ಹುಬ್ಬಳ್ಳಿ ಗುಲ್ಬರ್ಗ ವಿಭಾಗದಲ್ಲಿ ನೌಕರರ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳಿಗೆ ಕೆಲಸ ಕೊಡಲಾಗುವುದು. ಕೆಲವು ಕಡೆ ಕೆಲಸ ಕೊಡಿಸ್ತೀವಿ ಅಂತಾ ಹೇಳಿ ಹಣ ಪಡೆಯಲಾಗ್ತಿದೆ ಎಂಬ ವಿಚಾರ ಗಮನಕ್ಕೆ ಬಂದಿದೆ. ಯಾರೂ ಕೂಡ ಮಧ್ಯವರ್ತಿಗಳ ಆಮಿಷಕ್ಕೆ ಬಲಿ ಆಗಬೇಡಿ. ನೇರ ನೇಮಕಾತಿ ಮಾಡಿ ಕೊಳ್ತೀವಿ. ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೇ, 1200 ಹೊಸ ಬಸ್ಸುಗಳಿಗೆ ಆರ್ಡರ್ ನೀಡಿದ್ದೇವೆ. ಮಾರ್ಚ್ ಮುವತ್ತೊಂದರ ಒಳಗಾಗಿ ಹೊಸ ಬಸ್ಸುಗಳನ್ನು ಖರೀದಿ ಮಾಡುತ್ತೇವೆ. ಸಾರಿಗೆ ಕಾರ್ಮಿಕ ಸಂಘಟನೆಯವರು ಬಂದ್‌ಗೆ ಬೆಂಬಲ ಕೊಡ್ತಾರೆ. ಆದ್ರೆ ಬಸ್ ಸಂಚಾರ ನಿಲ್ಲಿಸಲ್ಲ ಅಂತಾ ಹೇಳಿದ್ದಾರೆ. ಅಕಸ್ಮಾತ್ ಏನಾದ್ರೂ ಅನಾಹುತ ಆದರೆ ಆ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ತೇವೆ ಎಂದಿದ್ದಾರೆ.

ನನಗೆ ಮೊದಲು ಸಾರಿಗೆ ಖಾತೆ ಕೊಟ್ಟಿದ್ರು, ಹೆಚ್ಚುವರಿಯಾಗಿ ಕೃಷಿ ಖಾತೆ ಕೊಟ್ಟಿದ್ರು. ಈಗ ಆಯಾ ಖಾತೆಗಳಲ್ಲಿ ಕೆಲಸ ಸರಿಯಾಗಿ ಆಗಬೇಕು ಅಂತಾ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಖಾತೆ ಹಿಂಪಡೆದ ಬಗ್ಗೆ ಬೇಜಾರಿಲ್ಲ ಎಂದು ಲಕ್ಷ್ಮಣ್ ಸವದಿ ಹೇಳಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *