ಮತ್ತೆ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಭಾನುವಾರ ಪ್ರಮಾಣವಚನ

ನವದೆಹಲಿ: ಮತ್ತೆ ಮುಖ್ಯಮಂತ್ರಿ ಆಗಿ ಅರವಿಂದ್ ಕೇಜ್ರಿವಾಲ್ ಅವರು ಫೆಬ್ರವರಿ 16, ಭಾನುವಾರದಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಫೆಬ್ರವರಿ 11ರಂದು ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶದಲ್ಲಿ ಆಮ್​ ಆದ್ಮಿ ಪಾರ್ಟಿಯೂ ಭರ್ಜರಿ ಜಯ ಸಾಧಿಸಿದ್ದು, ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಪ್​ ಪಕ್ಷವು 62 ಸ್ಥಾನ ಪಡೆದು ಬಹುದೊಡ್ಡ ಪಾರ್ಟಿಯಾಗಿ ಹೊರಹೊಮ್ಮಿದೆ.

ಆಮ್ ಆದ್ಮಿ ಪಾರ್ಟಿ 62 ಸ್ಥಾನದಲ್ಲಿ ಗೆಲುವು ಸಾಧಿಸಿದರೆ, ಭಾರತೀಯ ಜನತಾ ಪಾರ್ಟಿಯೂ 8 ಸ್ಥಾನದಲ್ಲಿ ಗೆಲುವಿನ ನಗೆ ಬೀರಿದೆ. ಉಳಿದಂತೆ ಕಾಂಗ್ರೆಸ್​ ಈ ಸಲ ಒಂದು ಸ್ಥಾನವನ್ನು ಕೂಡ ಪಡೆಯದೇ ಸೋಲು ಅನುಭವಿಸಿದೆ.

ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರೂ ಇಂದು ಪಕ್ಷದ ಶಾಸಕರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಶಾಸಕರು ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡುತ್ತಾರೆ. ತದನಂತರ ಅವರು ಸರ್ಕಾರ ರಚಿಸುವುದಾಗಿ ರಾಜ್ಯಪಾಲರ ಬಳಿ ಹೇಳಿಕೊಳ್ಳುತ್ತಾರೆ.

Recommended For You

About the Author: user

Leave a Reply

Your email address will not be published. Required fields are marked *