‘ನನ್ನ ಯೋಗ್ಯತೆಗೆ ಯಡಿಯೂರಪ್ಪ ಇರುವ ಸಿಎಂ ಸ್ಥಾನ ಸಿಗಲೇಬೇಕು’

ಚಿಕ್ಕೋಡಿ: ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೆಸರು ಕೇಳಿದ್ರೆ ಸಾಕು ಇವರು ಒಂದಿಲ್ಲೊಂದು ಸುದ್ದಿಯಲ್ಲಿಯೇ ಇರುತ್ತಾರೆ. ಸದ್ಯಕ್ಕೆ ಕತ್ತಿ ಅವರನ್ನು ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಿಂದ ಕೈ ಬಿಡಲಾಗಿದೆ. ಎರಡು ಸಲ ಬಿಎಸ್‌ವೈ ಸಂಪುಟ ವಿಸ್ತರಣೆ ಮಾಡಿದರೂ ಕೈ ಬಿಡಲಾಗಿತ್ತು. ಇದರಿಂದ ರೊಚ್ಚಿಗೆದ್ದ ಉಮೇಶ್ ಕತ್ತಿ ಈಗ ಸಿಎಂ ಕುರ್ಚಿಗೆ ಪೈಪೋಟಿ ನಡೆಸಿದ್ದಾರೆ. ಇದು ಆಶ್ಚರ್ಯವಾದರೂ ಸತ್ಯ ಇಂತದ್ದೊಂದು ಹೇಳಿಕೆ ಸ್ವತಃ ಉಮೇಶ‌್ ಕತ್ತಿಯವರೇ ಕೊಟ್ಟಿದ್ದಾರೆ.

ಅವರಿಗೆ ಡಿಸಿಎಂ ಸ್ಥಾನ ಬೇಡ್ವಂತೆ ಅವರಿಗೆ ಸಿಎಂ ಅಥವಾ ಸಚಿವ ಸ್ಥಾನ ಬೇಕಂತೆ. ಬಿಜೆಪಿಯ ಮೊದಲ ಸಂಪುಟ ವಿಸ್ತರಣೆಯಲ್ಲಿ ಉಮೇಶ‌್ ಕತ್ತಿಯವರಿಗೆ ಸಚಿವ ಸ್ಥಾನ ಸಿಗೋದು ಫಿಕ್ಸ್ ಎಂದು ಚರ್ಚೆಗಳು‌ ಜೋರಾಗಿದ್ದವು. ಕೊನೆ‌ ಕ್ಷಣದಲ್ಲಿ ಕೈ ಬಿಡಲಾಗಿತ್ತು. ತನ್ನ ಅಸಮಧಾನ ಹೊರ ಹಾಕಲು ಉಮೇಶ್ ಕತ್ತಿ ಅವರು ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಬೇಕು ಇಲ್ಲವಾದಲ್ಲಿ ಪ್ರತ್ಯೇಕ ರಾಜ್ಯ ಕೊಡಿ ಎಂದು ಹೇಳಿಕೆ ನೀಡುವುದರ ಮೂಲಕ ಅಸಮಾಧಾನ ಹೊರ ಹಾಕಿದರು. ಮಹಾರಾಷ್ಟ್ರ ದ ಚುನಾವಣೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಕೃಷ್ಣಾ ನೀರು ಬಿಡುತ್ತೇನೆ ಎಂದು ಹೇಳಿಕೆಗೆ ಉಮೇಶ‌್ ಕತ್ತಿ ಕಿಡಿ ಕಾರಿದ್ದರು. ನನಗೆ ಡಿಸಿಎಂ ಬೇಡ, ಸಿಎಂ ಅಥವಾ ಸಚಿವ ಸ್ಥಾನ ಬೇಕೆಂದು ಹಠ ಹಿಡಿದ್ದಾರೆ.

ಇನ್ನು ಬಿಜೆಪಿ ಎರಡನೇ ಸಂಪುಟ ವಿಸ್ತರಣೆ ಮಾಡಿದರೂ ಸಹಿತ ಅಲ್ಲಿಯೂ ಉಮೇಶ‌್ ಕತ್ತಿ ಅವರ ಹೆಸರನ್ನು ಕೈ ಬಿಡಲಾಗಿದೆ. ಈ ಸಂದರ್ಭದಲ್ಲೂ ಉಮೇಶ‌್ ಕತ್ತಿ ಅವರು ನನ್ನ ನಸೀಬಿನಲ್ಲಿಲ್ಲ ಹೀಗಾಗಿ ಸಚಿವ ಸ್ಥಾನ ಸಿಕ್ಕಿಲ್ಲ. ನನ್ನ ಯೋಗ್ಯತೆಗೆ ಯಡಿಯೂರಪ್ಪ ಇರುವ ಸಿಎಂ ಸ್ಥಾನ ಸಿಗಲೇ ಬೇಕು. ಆ ದಿಸೆಯಲ್ಲಿ ನನ್ನ ಪ್ರಯತ್ನ ಇದೆ. ದೇವರು ಆಶೀರ್ವಾದ ಮಾಡಿದರೆ ಸಿಎಂ ಆಗುತ್ತೇನೆ. ಆದರೆ ಬಿಜೆಪಿ ಹೈ ಕಮಾಂಡ್ ಉಮೇಶ‌್ ಕತ್ತಿ ಅವರಿಗೆ ಬಿಜೆಪಿ ಖಡಕ್ ಎಚ್ಚರಿಕೆ ನೀಡಿರಬೇಕು. ಕಾರಣ ಈಗ ಬಿಜೆಪಿ ಪರ ಬ್ಯಾಟಿಂಗ್ ಆರಂಭಿಸಿರುವ ಕತ್ತಿ ಖಾತೆ ಕೊಡದೆ ಇದ್ದುದ್ದಕ್ಕೆ ಮುನಿಸಿಲ್ಲ. ನನ್ನ ಹೆಂಡತಿ ಜೊತೆಗೆ ನಾನು ಮುನಿಸಿಕೊಳ್ಳಲ್ಲ ಹೀಗಾಗಿ ಯಡಿಯೂರಪ್ಪ ಜೊತೆ ಮುನಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಉಮೇಶ‌್ ಕತ್ತಿ ಪದೆ ಪದೆ ಸಿಎಂ ಸ್ಥಾನ ಬೇಕೆನ್ನುತ್ತಿದ್ದಾರೆ. ಅವರ ಗುರಿನೋ ಅಥವಾ ಅಸಮಾಧಾನವೋ ಅಂತ ತಿಳಿಯುತ್ತಿಲ್ಲ. ಅಸಮಾಧಾನ ಹೊರ ಹಾಕಲು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವವರು. ಈಗ ಸಿಎಂ ಕುರ್ಚಿಗೆ ಕಣ್ಣು ಹಾಕಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ‌ ಗ್ರಾಸವಾಗಿದೆ. ಇದಕ್ಕೆ‌ ಮುಖ್ಯಂತ್ರಿಗಳೇ ಉಮೇಶ‌್ ಕತ್ತಿ ಅವರಿಗೆ ಉತ್ತರ ನೀಡಬೇಕಿದೆ.

Recommended For You

About the Author: user

Leave a Reply

Your email address will not be published. Required fields are marked *